ವಿಷಾನಿಲ ಸೋರಿಕೆ ಪ್ರಕರಣ: ಎಲ್‌ಜಿಗೆ 50 ಕೋಟಿ ದಂಡ!

Published : May 09, 2020, 11:23 AM ISTUpdated : May 09, 2020, 11:59 AM IST
ವಿಷಾನಿಲ ಸೋರಿಕೆ ಪ್ರಕರಣ: ಎಲ್‌ಜಿಗೆ 50 ಕೋಟಿ ದಂಡ!

ಸಾರಾಂಶ

ವಿಷಾನಿಲ ಸೋರಿಕೆ ಪ್ರಕರಣ: ಎಲ್‌ಜಿಗೆ 50 ಕೋಟಿ ದಂಡ| ತನಿಖೆಗೆ ಉನ್ನತ ಮಟ್ಟದ ಸಮಿತಿ

 

ನವದೆಹಲಿ/ವಿಶಾಖಪಟ್ಟಣ(ಮೇ.09): 11 ಮಂದಿಯ ಸಾವಿಗೆ ಕಾರಣವಾದ ವೈಜಾಗ್‌ ವಿಷಾನಿಲ ಸೋರಿಕೆ ಪ್ರಕರಣ ಸಂಬಂಧ, ಎಲ್‌ಜಿ ಪಾಲಿಮರ್ಸ್‌ ಇಂಡಿಯಾಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 50 ಕೋಟಿ ದಂಡ ವಿಧಿಸಿದೆ. ಜತೆಗೆ ಕೇಂದ್ರ ಪರಿಸರ ಹಾಗೂ ಅರಣ್ಯ ಮಂತ್ರಾಲಯ, ಎಲ್‌ಜಿ ಪಾಲಿಮರ್ಸ್‌ ಇಂಡಿಯಾ, ರಾಜ್ಯ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ವಿಶಾಖ ಪಟ್ಟಣಂ ಜಿಲ್ಲಾಡಳಿತಕ್ಕೆ ನೋಟಿಸು ಜಾರಿ ಮಾಡಿದೆ.

ಈ ಮಧ್ಯೆ, ಎಲ್‌ಜಿ ಪಾಲಿಮ​ರ್‍ಸ್ ಕಂಪನಿಯ ರಾಸಾಯನಿಕ ಟ್ಯಾಂಕ್‌ಗಳು ಸುರಕ್ಷಿತವಾಗಿವೆ. ಅನಿಲ ರೂಪದಲ್ಲಿ ಸೋರಿಕೆಯಾಗಿರುವ ಸ್ಟೈರೀನ್‌ ಅನ್ನು 20 ಡಿಗ್ರಿಗಿಂತ ಕಡಿಮೆ ಉಷ್ಣಾಂಶಕ್ಕೆ ಇಳಿಸಿ, ದ್ರವರೂಪಕ್ಕೆ ತರುವ ಕ್ರಿಯೆಯಾದ ‘ಪಾಲಿಮರೈಸ್‌’ ಮಾಡಲಾಗುತ್ತಿದೆ. ಈಗಾಗಲೇ ಶೇ.60ರಷ್ಟುಅನಿಲವನ್ನು ಪಾಲಿಮರೈಸ್‌ ಮಾಡಲಾಗಿದೆ. ಮುಂದಿನ 18ರಿಂದ 24 ತಾಸುಗಳಲ್ಲಿ ಎಲ್ಲ ಸ್ಟೈರೀನ್‌ ಅನ್ನು ದ್ರವರೂಪಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ವಿ. ವಿನಯ್‌ ಚಂದ್‌ ತಿಳಿಸಿದ್ದಾರೆ.

ಈ ನಡುವೆ, ವಿಷಾನಿಲ ಸೋರಿಕೆ ಕುರಿತು ತನಿಖೆ ನಡೆಸಲು ಅತ್ಯುನ್ನತ ಸಮಿತಿಯೊಂದನ್ನು ಆಂಧ್ರ ಮುಖ್ಯ ಕಾರ್ಯದರ್ಶಿ ನೀಲಂ ಸಾಹ್ನೆ ಅವರು ರಚನೆ ಮಾಡಿದ್ದಾರೆ. ವಿಷಾನಿಲದಿಂದ ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳ ಜನರ ಮೇಲೆ ದೀರ್ಘಾವಧಿಯಲ್ಲಿ ಯಾವುದಾದರೂ ಪರಿಣಾಮಗಳು ಆಗುತ್ತವೆಯೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್