16ರ ಬಾಲಕಿ ಮೇಲೆ ವರ್ಚ್ಯುವಲ್‌ ಗ್ಯಾಂಗ್‌ರೇಪ್‌: ಇದೇನಿದು ವಿಚಿತ್ರ ಪ್ರಕರಣ

Published : Jan 04, 2024, 07:10 AM ISTUpdated : Jan 04, 2024, 07:40 AM IST
16ರ ಬಾಲಕಿ ಮೇಲೆ ವರ್ಚ್ಯುವಲ್‌ ಗ್ಯಾಂಗ್‌ರೇಪ್‌: ಇದೇನಿದು ವಿಚಿತ್ರ ಪ್ರಕರಣ

ಸಾರಾಂಶ

ಆನ್‌ಲೈನ್‌ ಗೇಮ್‌ಗಳ ದಾಸರಾಗಿ ಯುವಕ, ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳ ನಡುವೆಯೇ ಅಂತರ್ಜಾಲದ ಹೊಸ ಅವತಾರವಾದ ಮೆಟಾವರ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಾಮುಕರ ಗುಂಪೊಂದು ಗ್ಯಾಂಗ್‌ರೇಪ್‌ ಮಾಡಿದ ಆಘಾತಕಾರಿ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.

ಲಂಡನ್‌: ಆನ್‌ಲೈನ್‌ ಗೇಮ್‌ಗಳ ದಾಸರಾಗಿ ಯುವಕ, ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳ ನಡುವೆಯೇ ಅಂತರ್ಜಾಲದ ಹೊಸ ಅವತಾರವಾದ ಮೆಟಾವರ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಾಮುಕರ ಗುಂಪೊಂದು ಗ್ಯಾಂಗ್‌ರೇಪ್‌ ಮಾಡಿದ ಆಘಾತಕಾರಿ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.

ವರ್ಚ್ಯುವಲಿ ನಡೆದ ಈ ಘಟನೆಯಿಂದ ಬಾಲಕಿ ಮೇಲೆ ದೈಹಿಕವಾಗಿ ಯಾವುದೇ ಅಪಾಯವಾಗದೇ ಇದ್ದರೂ, ದೈಹಿಕವಾಗಿ ನೊಂದ ಬಾಲಕಿಯರಷ್ಟೇ ಈಕೆ ಕೂಡಾ ಮಾನಸಿಕವಾಗಿ ಜರ್ಜರಿತವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಲ್ಲಿಕೆಯಾದ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಇಂಥ ಘಟನೆಗಳ ಕುರಿತು ತನಿಖೆ ನಡೆಸಲು ಹಾಲಿ ಕಾಯ್ದೆಗಳೇ ಇಲ್ಲದ ಕಾರಣ, ಈ ಪ್ರಕರಣ ಪೊಲೀಸರಿಗೆ ಸವಾಲಾಗಿಯೂ ಪರಿಣಮಿಸಿದೆ.

ಅಪ್ರಾಪ್ತೆ ಮೇಲೆ ರೇಪ್‌: ಕ್ರಿಕೆಟಿಗ ಸಂದೀಪ್ ಲಮಿಚ್ಚಾನೆ ದೋಷಿ, ಮತ್ತೆ ಜೈಲು ಶಿಕ್ಷೆಗೆ ಕ್ಷಣಗಣನೆ..!

ಏನಿದು ಪ್ರಕರಣ?:

ಮೆಟಾವರ್ಸ್‌ ಎನ್ನುವುದೊಂದು ಆನ್‌ಲೈನ್‌ ಜಗತ್ತು. ಇಲ್ಲಿ ಹೆಡ್‌ಸೆಟ್‌ ಹಾಕಿಕೊಂಡರೆ, ಆತ ವರ್ಚ್ಯುವಲ್‌ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಸುತ್ತಾಡಬಹುದು. ಯಾರೊಂದಿಗೆ ಬೇಕಾದರೂ ಎದುರಿಗೆ ನಿಂತಂತೆ ವ್ಯವಹಾರ ನಡೆಸಬಹುದು. ಇಂಥದ್ದೇ ಮೆಟಾವರ್ಸ್‌ನ ಆಟವೊಂದರಲ್ಲಿ ಭಾಗಿಯಾಗಿದ್ದ ವೇಳೆ ಬಾಲಕಿ ಮೇಲೆ ಅದೇ ಆಟದಲ್ಲಿ ಭಾಗಿಯಾಗಿದ್ದ ತಂಡವೊಂದು ವರ್ಚ್ಯುವಲ್ ಆಗಿ ‘ಗ್ಯಾಂಗ್‌ರೇಪ್‌’ ಮಾಡಿದೆ.

ಈ ಘಟನೆಯಿಂದ ಬಾಲಕಿ ಸಂಪೂರ್ಣವಾಗಿ ತಲ್ಲಣಿಸಿ ಹೋಗಿದ್ದು ದೈಹಿಕವಾಗಿ ಗ್ಯಾಂಗ್‌ರೇಪ್‌ ನಡೆದಷ್ಠೇ ಪ್ರಮಾಣದಲ್ಲಿ ಮಾನಸಿಕವಾಗಿ ನೊಂದಿದ್ದಾಳೆ. ಆಕೆಗೆ ಈ ಆಘಾತದಿಂದ ಹೊರಬರುವುದು ಸಾಧ್ಯವಾಗುತ್ತಿಲ್ಲ. ಬ್ರಿಟನ್‌ನಲ್ಲಿ ಇಂಥ ಪ್ರಕರಣ ಇದೇ ಮೊದಲು ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಬೆತ್ತಲೆ ಮೃತದೇಹ, ಸುಟ್ಟ ಮುಖ, ಹಮಾಸ್ ಉಗ್ರ ದಾಳಿಯಲ್ಲಿ ನಡೆದಿತ್ತು ಭೀಕರ ಅತ್ಯಾಚಾರ!

ಬಾಲಕಿ ಮೆಟಾವರ್ಸ್‌ನಲ್ಲಿ ಯಾವ ಆಟ ಆಡುತ್ತಿದ್ದಳು ಎಂಬುದು ಬಹಿರಂಗವಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್