ಕ್ರೂರ ಪದ್ಧತಿ ವಿರುದ್ಧ ಸೋದರಿಯರ ಹೋರಾಟ, ಭಾರತದಲ್ಲೇ ಆಕ್ಸಿಜನ್ ಘಟಕ; ಏ.19ರ ಟಾಪ್ 10 ಸುದ್ದಿ!

Published : Apr 19, 2021, 04:38 PM ISTUpdated : Apr 19, 2021, 05:24 PM IST
ಕ್ರೂರ ಪದ್ಧತಿ ವಿರುದ್ಧ ಸೋದರಿಯರ ಹೋರಾಟ, ಭಾರತದಲ್ಲೇ ಆಕ್ಸಿಜನ್ ಘಟಕ; ಏ.19ರ ಟಾಪ್ 10 ಸುದ್ದಿ!

ಸಾರಾಂಶ

ರೈಲು ಹಳಿಗೆ ಬಿದ್ದ ಮಗು ರಕ್ಷಿಸಿದ ರೈಲ್ವೇ ಸಿಬ್ಬಂದಿಗೆ ಸಚಿವರು ಸೇರಿದಂತೆ ಎಲ್ಲರg ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ಕೊರೋನಾ 2ನೇ ಅಲೆ ತಡೆಯುವಲ್ಲಿ ಭಾರತ ಎಡವಿದ್ದು ಎಲ್ಲಿ ಅನ್ನೋದು ಬಯಲಾಗಿದೆ. ಆಕ್ಸಿಜನ್ ಕೊರತೆ ನೀಗಿಸಲು ವಿದೇಶದಿಂದ ಆಮದಿಗೆ ನಿರ್ಧರಿಸಲಾಗಿದೆ. ಜೊತೆ ಭಾರತದಲ್ಲಿ ಘಟಕ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ. ಕ್ರೂರ ಪದ್ಧತಿ ವಿರುದ್ಧ ಸೋದರಿಯರ ಹೋರಾಟ, ಸಿಎಂ ಯಡಿಯೂರಪ್ಪ ಸ್ಥಾನದ ಮೇಲೆ ಬಿತ್ತು ಕಣ್ಣು ಸೇರಿದಂತೆ ಏಪ್ರಿಲ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.  

ರೈಲು ಹಳಿಗೆ ಬಿದ್ದ ಮಗು ರಕ್ಷಿಸಿದ ರೈಲ್ವೇ ಸಿಬ್ಬಂದಿ: ಮೈ ಜುಮ್ಮೆನಿಸುವ ವಿಡಿಯೋ ವೈರಲ್!...

ಸಿನಿಮಾದಲ್ಲಿ ಈ ರೀತಿ ಘಟನೆಗಳನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇದು ನಿಜ ಘಟನೆ, ಒಂದೆಡೆಯಿಂದ ರೈಲು ವೇಗವಾಗಿ ಬರುತ್ತಿದೆ. ಇತ್ತ ರೈಲ್ವೇ ಸಿಬ್ಬಂದಿ ಓಡೋಡಿ ಬಂದು, ಪ್ಲಾಟ್‌ಫಾರ್ಮ್‌ನಿಂದ ಹಳಿಗೆ ಬಿದ್ದ ಮಗುವನ್ನು ರಕ್ಷಿಸಿ, ತಾನು ಅಪಾಯದಿಂದ ಪಾರಾದ ಘಟನೆ ನಡೆದಿದೆ. 

ಸರ್ಕಾರ ಅಥವಾ ಜನ; ಕೊರೋನಾ 2ನೇ ಅಲೆ ತಡೆಯಲು ಭಾರತ ಎಡವಿದ್ದೆಲ್ಲಿ?...

ಕೊರೋನಾ ವೈರಸ್ ನಿಯಂತ್ರಕ್ಕೆ ಸಿಗದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೈರಾಣಾಗಿದೆ. ಇದೀಗ ತಮಿಳುನಾಡಿನಲ್ಲಿ ಸಂಡೇ ಲಾಕ್‌ಡೌನ್ ಹೇರಿದರೆ ದೆಹಲಿಯಲ್ಲಿ 6 ದಿನ ಸಂಪೂರ್ಣ ಲಾಕ್‌ಡೌನ್ ಹೇರಲಾಗಿದೆ. ಮೊದಲ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ಭಾರತಕ್ಕೆ 2ನೇ ಅಲೆ ಎದುರಿಸಲಾಗದೆ, ಪರಿಸ್ಥಿತಿ ಈ ಮಟ್ಟಕ್ಕೆ ತಲುಪಲು ಕಾರಣವೇನು? ಇಲ್ಲಿದೆ ಬಿಬಿಸಿ ಅಧ್ಯಯನ ವರದಿ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ದಿನಗಳ ಪೂರ್ಣ ಲಾಕ್‌ಡೌನ್!...

ದೆಹಲಿಯಲ್ಲಿ ಲಾಕ್ ಡೌನ್ ಘೋಷಿಸಿದ ಸಿಎಂ| ಒಂದು ವಾರದ ಲಾಕ್ ಡೌನ್| ಇವತ್ತು ರಾತ್ರಿ 10 ಗಂಟೆಯಿಂದ ಜಾರಿ| ಮಂಗಳವಾರ ಬೆಳಗ್ಗೆ 5 ಗಂಟೆಯ ತನಕ ಲಾಕ್ ಡೌನ್

ಬಿಗ್‌ಬಾಸ್‌ ಸ್ಪರ್ಧಿಗಳ ಭಾವುಕ ಪತ್ರ, ರುಚಿಕರ ಅಡುಗೆ ಬಗ್ಗೆ ಕಿಚ್ಚನ ಪತ್ನಿ ಟ್ಟೀಟ್!...

ಸುದೀಪ್ ಆರೋಗ್ಯದ ವಿಚಾರ ತಿಳಿದು ಗೊಂದಲಕ್ಕೆ ಒಳಗಾದ ಬಿಗ್‌ಬಾಸ್‌ ಸ್ಪರ್ಧಿಗಳು. ಕಿಚ್ಚನ ಮನೆಗೆ ಅಡುಗೆ ಪಾರ್ಸಲ್‌. ಭಾವುಕ ಪತ್ರ ಓದಿ ಪ್ರಿಯಾ ಸುದೀಪ್ ಟ್ಟೀಟ್....

'ಯಡಿಯೂರಪ್ಪ ಸಿಎಂ ಸ್ಥಾನ ಬಿಟ್ಟರೆ, ನಾನು ಮುಖ್ಯಮಂತ್ರಿ ಆಗ್ತೇನೆ' ...

ಮುಂಬರುವ ದಿನಗಳಲ್ಲಿ ಸಿಎಂ ಬದಲಾವಣೆಯಾಗುವುದು ಖಂಡಿತ| ಯಡಿಯೂರಪ್ಪನವರ ಅಕ್ಕ-ಪಕ್ಕದಲ್ಲಿ ಇರುವವರು ಅವರಿಗೆ ಸರಿಯಾಗಿ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ| ನಮ್ಮ ಸರ್ಕಾರದಲ್ಲಿ ಕೆಲವು ಡುಬ್ಲಿಕೇಟ್‌ ಸಚಿವರಿದ್ದು, ಸಮಾಜವನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ| ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿಗೆ ಟಾಂಗ್‌ ನೀಡಿದ ಯತ್ನಾಳ್‌| 

ಕನ್ಯತ್ವ ಪರೀಕ್ಷೆ ಕ್ರೂರ ಪರೀಕ್ಷೆಯಿಂದ ನಲುಗಿದ ಸೋದರಿಯರ ಹೋರಾಟದ ಹಾದಿ...

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ಯಾಪೊರೆ ಪರೀಕ್ಷೆಯ ಕ್ರೂರ ಪದ್ಧತಿಗೆ ನಲುಗಿದ ಇಬ್ಬರು ಸೋದರಿಯರ ಹೋರಾಟದ ಕತೆ ಇಲ್ಲಿದೆ. 

ಒಂದ್ಕಡೆ ಆಕ್ಸಿಜನ್‌ ಸಿಗದೆ ರೋಗಿಗಳ ಸಾವು: ಇನ್ನೊಂದ್ಕಡೆ ಧೂಳು ತಿನ್ನುತ್ತಿವೆ ವೆಂಟಿಲೇಟರ್‌ಗಳು..!...

ಕೊರೋನಾ ಕಾಲದಲ್ಲಿ ಆಕ್ಸಿಜನ್‌ ವೆಂಟಿಲೇಟರ್‌ ಬರ ಕಲಬುರಗಿ ಜಿಲ್ಲಾದ್ಯಂತ ಕಾಡುತ್ತಿರುವಾಗ ಅಫಜಲ್ಪುರ ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಲಕ್ಷಾಂತರ ರು. ಮೌಲ್ಯದ 6 ವೆಂಟಿಲೇಟರ್‌ ಯಂತ್ರೋಪಕರಣಗಳು ಬಳಕೆಯಾಗದೆ ಮೂಲೆ ಸೇರಿವೆ.

ವಿದೇಶಗಳಿಂದ 50 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಆಮದು, 10 ಆಸ್ಪತ್ರೆಗಳಲ್ಲಿ ಉತ್ಪಾದನಾ ಘಟಕ.!...

ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಕೊರತೆ ಉಂಟಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ದೇಶದ 100 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್‌ಗಳನ್ನು ಉತ್ಪಾದನೆ ಮಾಡುವುದಾಗಿ ಹೇಳಿದೆ. 

ಇಂದು ಚೆನ್ನೈ vs ರಾಜಸ್ಥಾನ ಕದನ: ಎರಡೂ ತಂಡಗಳಿಗೆ ಜಯದ ಲಯ ಕಾಯ್ದುಕೊಳ್ಳುವ ಗುರಿ!...

ಸೋಮವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಚೆನ್ನೈ ಹಾಗೂ ರಾಜಸ್ಥಾನ, ಗೆಲುವಿನ ಲಯ ಉಳಿಸಿಕೊಳ್ಳುವ ಗುರಿ ಹೊಂದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!