ರೈಲು ಹಳಿಗೆ ಬಿದ್ದ ಮಗು ರಕ್ಷಿಸಿದ ರೈಲ್ವೇ ಸಿಬ್ಬಂದಿ: ಮೈ ಜುಮ್ಮೆನಿಸುವ ವಿಡಿಯೋ ವೈರಲ್!

By Suvarna News  |  First Published Apr 19, 2021, 3:21 PM IST

ಸಿನಿಮಾದಲ್ಲಿ ಈ ರೀತಿ ಘಟನೆಗಳನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇದು ನಿಜ ಘಟನೆ, ಒಂದೆಡೆಯಿಂದ ರೈಲು ವೇಗವಾಗಿ ಬರುತ್ತಿದೆ. ಇತ್ತ ರೈಲ್ವೇ ಸಿಬ್ಬಂದಿ ಓಡೋಡಿ ಬಂದು, ಪ್ಲಾಟ್‌ಫಾರ್ಮ್‌ನಿಂದ ಹಳಿಗೆ ಬಿದ್ದ ಮಗುವನ್ನು ರಕ್ಷಿಸಿ, ತಾನು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ.


ಮುಂಬೈ(ಏ.19): ರೈಲು ನಿಲ್ದಾಣಗಳಲ್ಲಿ ಓಡಾಡುವಾಗ, ರೈಲು ಹತ್ತುವಾಗ, ಇಳಿಯುವಾಗ, ಹಳಿ ದಾಟುವಾಗ ಅತೀ ಎಚ್ಚರ ವಹಿಸಬೇಕು. ಈ ಎಚ್ಚರಿಕೆ ವಾಕ್ಯಗಳು ರೈಲು ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತದೆ. ಕಾರಣ ಒಂದು ಸಣ್ಣ ತಪ್ಪು ಕೂಡ ಅತೀ ದೊಡ್ಡ ದುರಂತಕ್ಕೆ ನಾಂದಿ ಹಾಡಲಿದೆ. ಆದರೆ ಅದೃಷ್ಠ ಚೆನ್ನಾಗಿದ್ದರೆ, ಯಾರಾದರೂ ಹೀರೋ ಆಗಿ ಬಂದು ಕಾಪಾಡುತ್ತಾರೆ. ಇದೀಗ ಮುಂಬೈನ ವಂಗಾನಿ ರೈಲು ನಿಲ್ದಾಣದಲ್ಲಿ ಇದೀ ರೀತಿ ಮಗುವನ್ನು ಕಾಪಾಡಿದ ಘಟನೆ ನಡೆದಿದೆ. ಇಲ್ಲಿ ನಿಜವಾದ ಹೀರೋ ರೈಲು ಸಿಬ್ಬಂದಿ ಮಯೂರ್ ಶಿಲ್ಕೆ.

ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್

Latest Videos

undefined

ತಾಯಿ ಹಾಗೂ ಮಗು ರೈಲು ನಿಲ್ದಾಣದಲ್ಲಿ ನಡೆದುಕೊಂಡು ಸಾಗಿದ್ದಾರೆ. ರೈಲ್ವೇ ಪ್ಲಾಟ್‌ಫಾರ್ಮ್ ಎಲ್ಲಿಗೆ ಕೊನೆಗೊಳ್ಳುತ್ತದೆ ಅನ್ನೋ ಪರಿವೇ ಇಲ್ಲದೆ ಸಾಗಿದ್ದಾರೆ. ಪರಿಣಾಮ ಬಲಭಾಗದಲ್ಲಿದ್ದ ಮಗು ಪ್ಲಾಟ್‌ಫಾರ್ಮ್‌ನಿಂದ ಕೆಳಕ್ಕೆ ಬಿದ್ದಿದೆ. ಮಗು ಬಿದ್ದ ರೈಲು ಹಳಿಯಲ್ಲೇ ರೈಲು ಕೂಡ ಆಗಮಿಸಿದೆ. ಇದನ್ನು ನೋಡಿದ ತಾಯಿ ಗಾಬರಿಗೊಂಡ ಏನೂ ಮಾಡದ ಸ್ಥಿತಿಗೆ ತಲುಪಿದ್ದಾರೆ.

 

Very proud of Mayur Shelke, Railwayman from the Vangani Railway Station in Mumbai who has done an exceptionally courageous act, risked his own life & saved a child's life. pic.twitter.com/0lsHkt4v7M

— Piyush Goyal (@PiyushGoyal)

ಅತ್ತ ಮಗು ಪ್ಲಾಟ್‌ಫಾರ್ಮ ಹತ್ತುವ ಸಾಹಸ ಮಾಡಿದರೂ ಸಾಧ್ಯವಾಗಿಲ್ಲ.  ರೈಲಿಗೆ ಫ್ಲಾಗ್ ವೇವ್ ಮಾಡೋ ಸಿಬ್ಬಂದಿ ತಕ್ಷಣವೇ ರೈಲು ಬರುತ್ತಿರುವ ವಿರುದ್ಧ ದಿಕ್ಕಿನಿಂದ ಓಡಿದ್ದಾರೆ. ಮಿಂಚಿನ ವೇಗದಲ್ಲಿ ಓಡಿ ಮಗುವನ್ನು ಎತ್ತಿ ಪ್ಲಾಟ್‌ಫಾರ್ಮ ಮೇಲಕ್ಕೆ ಹಾಕಿದ್ದಾರೆ. ಬಳಿಕ ಒಂದೇ ಸೆಕೆಂಡ್ ಅಂತರದಲ್ಲಿ ತಾವು ಮೇಲಕ್ಕೆ ಹತ್ತಿದ್ದಾರೆ. 

ಮೊದಲ ಬಾರಿ ರೈಲು ನೋಡಿ ಸಂಭ್ರಮಿಸಿದ ಬಾಲಕಿ; ವಿಡಿಯೋ ವೈರಲ್!

ಒಂದು ಸೆಕೆಂಡ್ ವಿಳಂಬವಾದರೆ ರೈಲು ಸಿಬ್ಬಂದಿ ರೈಲಿನಡಿಗೆ ಸುಲಿಕಿ ಅಪ್ಪಚ್ಚಿಯಾಗುವ ಸಾಧ್ಯತೆ ಇತ್ತು. ಆದರೆ ಕಣ್ಮುಚ್ಚಿ ತೆರೆಯೋದರೊಳಗೆ ಎಲ್ಲವೂ ನಡೆದು ಹೋಗಿತ್ತು. ತನ್ನ ಪ್ರಾಣದ ಹಂಗು ತೊರೆದು ಮಗುವನ್ನ ರಕ್ಷಿಸಿದ ರೈಲು ಸಿಬ್ಬಂದಿ ಮಯೂರ್ ಶಿಲ್ಕೆ ಕಾರ್ಯಕ್ಕೆ ರೈಲ್ವೇ ಸಚಿವ ಪಿಯೂಚ್ ಘೋಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ಮಯೂರ್ ಶಿಲ್ಕೆ ಸಮಯ ಪ್ರಜ್ಞೆ, ತನ್ನ ಜೀವವನ್ನೇ ಪಣಕ್ಕಿಟ್ಟು ಮಗು ರಕ್ಷಿಸಿದ ಕಾರ್ಯಕ್ಕೆ ದೇಶವೇ ಸಲಾಂ ಹೇಳಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

click me!