
ನವದೆಹಲಿ (ಏ.15): ಟ್ರ್ಯಾಕ್ ಮಧ್ಯದಲ್ಲಿ ಫೋನ್ ನಲ್ಲಿ ಮಾತನಾಡುತ್ತಾ ಮಲಗಿರುವ ಮಹಿಳೆಯ (Women) ಮೇಲೆ ಸರಕು ರೈಲು (Goods Train) ಹಾದು ಹೋಗುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದಿಪಾಂಶು ಖಬ್ರಾ (PS officer Dipanshu Kabra ), ಏಪ್ರಿಲ್ 12 ರಂದು ಟ್ವೀಟ್ ಮಾಡಿದ್ದಾರೆ. ಈವರೆಗೂ ಈ ವಿಡಿಯೋಗೆ 1 ಲಕ್ಷಕ್ಕೂ ಅಧಿಕ ವೀವ್ಸ್ ಹಾಗೂ 3500ಕ್ಕೂ ಅಧಿಕ ಲೈಕ್ಸ್ ಸಿಕ್ಕಿವೆ.
ಮೇಲ್ನೋಟಕ್ಕೆ ವಿಡಿಯೋವನ್ನು ಸ್ಟೇಷನ್ ನ ಫ್ಲಾಟ್ ಫಾರ್ಮ್ ನ ಮೇಲಿದ್ದ ಯುವಕನೊಬ್ಬ ರೆಕಾರ್ಡ್ ಮಾಡುತ್ತಿರುವಂತೆ ಕಂಡಿದೆ. ಯಾಕೆಂದರೆ, ಫ್ಲಾಟ್ ಫಾರ್ಮ್ ನ ಮೇಲಿದ್ದ ಹುಡುಗನೊಂದಿಗೆ ಆಕೆ ಮಾತನಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ವಿಡಿಯೋ ಆರಂಭವಾಗುತ್ತಿದ್ದಂತೆ ಗೂಡ್ಸ್ ರೈಲು ವೇಗದಲ್ಲಿ ಸ್ಟೇಷನ್ ನಿಂದ ಹೋಗುವುದು ದಾಖಲಾಗಿದೆ. ರೈಲು ಸ್ಟೇಷನ್ ನಿಂದ ಹೊರ ಬೆನ್ನಲ್ಲಿಯೇ, ಕೆಂಪು ಬಣ್ಣದ ಕುರ್ತಾ ಹಾಗೂ ಮುಖಕ್ಕ ಸ್ಕಾರ್ಫ್ ಧರಿಸಿರುವ ಮಹಿಳೆಯೊಬ್ಬರು ಟ್ರ್ಯಾಕ್ ನಲ್ಲಿ ಮಲಗಿರುವುದು ಕಾಣುತ್ತದೆ. ಟ್ರ್ಯಾಕ್ ನ ಮಧ್ಯದಲ್ಲಿ ಮಲಗಿದ್ದ ಈ ಮಹಿಳೆಯ ಮೇಲೆ ರೈಲು ಹಾದು ಹೋಗಿದೆ ಅನ್ನೋದು ವಿಡಿಯೋ ನೋಡುತ್ತಿರುವವರಿಗೆ ಬಳಿಕ ತಿಳಿಯುತ್ತದೆ.
ಟ್ರೇನ್ ಸ್ಟೇಷನ್ ನಿಂದ ಹೊರಟ ಬಳಿಕ, ಟ್ರ್ಯಾಕ್ ನ ಮೇಲೆ ಮಲಗಿದ್ದಲ್ಲಿಂದ ಎದ್ದು ಕುಳಿತುಕೊಳ್ಳುವ ಮಹಿಳೆ ತನ್ನ ಫೋನ್ ನಲ್ಲಿ ಬಂದ ಕರೆಯನ್ನು ಸ್ವೀಕರಿಸುತ್ತಾಳೆ. ಆ ಬಳಿಕ ಏನೂ ಆಗೇ ಇಲ್ಲ ಎನ್ನುವಂತೆ ಟ್ರ್ಯಾಕ್ ನಿಂದ ಹೊರ ಬಂದು ಫ್ಲಾಟ್ ಫಾರ್ಮ್ ಹತ್ತುವುದು ದಾಖಲಾಗಿದೆ. ಇವಿಷ್ಟೂ ಘಟನೆಗಳಲ್ಲಿ ಎಲ್ಲಿಯೂ ತಾನೊಂದು ಇಂಥ ಶಾಕಿಂಗ್ ಕೆಲಸಕ್ಕೆ ಕೈ ಹಾಕಿದ್ದೇನೆ ಎನ್ನುವ ಸಣ್ಣ ಅಳುಕು ಆಕೆಯಲ್ಲಿ ಇದ್ದಂತಿರಲಿಲ್ಲ. ಫ್ಲಾಟ್ ಫಾರ್ಮ್ ನ ಮೇಲೆ ನಿಂತು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿ ಹಾಗೂ ಫೋನ್ ನಲ್ಲಿ ಮಾತನಾಡುತ್ತಿರುವ ವ್ಯಕ್ತಿಯೊಂದಿಗೆ ಮಹಿಳೆ ಆರಾಮವಾಗಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
"ಫೋನ್ ಪಾರ್ ಗಾಸಿಪ್ ಜ್ಯಾದಾ ಜರೂರಿ ಹೈ" (ಫೋನ್ ನಲ್ಲಿ ಗಾಸಿಪ್ ಮಾತಾನಾಡೋದೇ ಮುಖ್ಯ) ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ದಿಪಾಂಶು ಖಬ್ರಾ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಅವರಲ್ಲಿ ಹಲವರು ವೀಡಿಯೊದಲ್ಲಿರುವ ತಮಾಷೆಯ ಎಳೆಯನ್ನು ಕಂಡುಕೊಂಡಿದ್ದರೆ, ಇನ್ನೂ ಕೆಲವರು ಬಹುಶಃ ಮಹಿಳೆ ಪ್ರತಿದಿನದ ಚಾಲೆಂಜ್ ಗಾಗಿ ಈ ರೀತಿ ಮಾಡುತ್ತಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಕಪಿಲ್ ಬುಂಡಿ (@Kapil_Bundii) ಎನ್ನುವ ವ್ಯಕ್ತಿ, ಬಹುಶಃ ಆಕೆ 6ಜಿ ಮೊಬೈಲ್ ಸೇವೆಯನ್ನು ಪರೀಕ್ಷೆ ಮಾಡುತ್ತಿರಬಹುದು ಎಂದು ತಮಾಷೆ ಮಾಡಿದ್ದರೆ, ರಿಷಿಕೇಶ್ ಸಹಾಯ್ (@rishikesh_76) ಎನ್ನುವ ವ್ಯಕ್ತಿ, ರೈಲ್ವೇ ಸಚಿವರು ಟ್ರೈನ್ ನ ಡ್ರೈವರ್ ಬಗ್ಗೆ ಫೋನ್ ನಲ್ಲಿ ದೂರು ನೀಡುತ್ತಿರಬಹುದು ಎಂದಿದ್ದಾರೆ.
Discriminate ಭಾರತೀಯ ಕಾನೂನಿಂದ ಬಡವರ ತಾರತಮ್ಯ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ!
"ಮೊಬೈಲ್ ಗಿಂತ ಜೀವನ ದೊಡ್ಡದಲ್ಲ, ಜೀವನಕ್ಕಿಂತ ಮೊಬೈಲ್ ದೊಡ್ಡದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಷ್ಪ್ರಯೋಜಕವಾಗಿ ಮಾಡಿದರೂ ಮೊಬೈಲ್ ನಮ್ಮನ್ನು ಬಿಡುವುದಿಲ್ಲ. ಈಗಿನ ಅಗತ್ಯಕ್ಕೆ ಮೊಬೈಲ್ ಬಳಕೆ ಮಾಡುವುದು ಅಗತ್ಯ. ಆದರೆ, ಅದರ ನಶೆ ಅಷ್ಟೊಂದು ಒಳ್ಳೆಯದಲ್ಲ'' ಎಂದು ಸುರೇಂದ್ರ ಜೈನ್ (@Surendr81418719) ಎನ್ನುವ ವ್ಯಕ್ತಿ ಗಂಭೀರವಾಗಿ ಬರೆದಿದ್ದಾರೆ.
Fact Check: ಪ್ರಧಾನಮಂತ್ರಿ ಕಲ್ಯಾಣ ನಿಧಿಗೆ ಕಾಶ್ಮೀರ ಫೈಲ್ಸ್ ತಂಡ ₹200 ಕೋಟಿ ದೇಣಿಗೆ ನೀಡಿದ್ದು ಸುಳ್ಳು
ಬಹುಶಃ ಆಕೆ ತನ್ನ ಬಾಸ್ ಜೊತೆ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡುತ್ತಿರುಬಹುದು ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದರೆ, "ಪ್ಲೀಸ್ ಯಾರಾದ್ರೂ ಆಕೆ ಯಾವ ವಿಷ್ಯದ ಬಗ್ಗೆ ಮಾತನಾಡ್ತಿರಬಹುದು ಅಂತಾ ಹೇಳಿ, ಬಹುಶಃ ಇಂಟ್ರಸ್ಟಿಂಗ್ ಟಾಪಿಕ್ ಆಗಿರಬೇಕು' ಎಂದು ಇನ್ನೊಬ್ಬರು ಬರೆದಿದ್ದಾರೆ. ಸಾದಿಕ್ ಶೇಖ್ (@sadique__shaikh) ಎನ್ನುವ ವ್ಯಕ್ತಿ, ಖತ್ರೋನ್ ಕಾ ಖಿಲಾಡಿಯ ವಿನ್ನರ್ ಈಕೆ, ಜೀವ ಬೇಕಾದ್ರೂ ಹೋಗ್ಲಿ ಫೋನ್ ನಲ್ಲಿ ಗಾಸಿಪ್ ಮಾತ್ರ ನಡೀತಾ ಇರ್ಬೇಕು' ಎಂದು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ