
ಒಡಿಶಾ(ಏ.15): ಭಾರತದ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಸ್ವತಃ ಮುಖ್ಯನಾಯಮೂರ್ತಿಗಳೇ ಅಸಮಾಧಾನ ಹೊರಹಾಕಿದ ಘಟನೆ ಒಡಿಶಾದಲ್ಲಿ ನಡೆದಿದೆ. ಅಂಬೇಡ್ಕರ್ ಜಯಂತಿಯಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಒರಿಸ್ಸಾ ಹೈಕೋರ್ಟ್ ಮುಖ್ಯನಾಯಮೂರ್ತಿ ಎಸ್ ಮುರಳೀಧರ್, ಭಾರತೀಯ ಕಾನೂನುಗಳು ಬಡವರ ವಿರುದ್ಧದ ತಾರತಮ್ಯ ಮಾಡುವಂತೆ ರಚನೆಯಾಗಿದೆ ಎಂದಿದ್ದಾರೆ.
ಬಡವರು, ಅಲ್ಪಸಂಖ್ಯಾತರು, ಶೋಷಿತ ವರ್ಗದ ಜನರು ನ್ಯಾಯಪಡೆಯಲು ಹಲವು ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ತಮ್ಮ ನ್ಯಾಯಕ್ಕಾಗಿ ಹಲವು ಅಡೆ ತಡೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ ಎಂದು ಜಸ್ಟೀಸ್ ಎಸ್ ಮುರಳೀಧರ್ ಹೇಳಿದ್ದಾರೆ.
ಮದುವೆಗೆ ಮಾನ್ಯತೆ ನೀಡಿ ಎಂದು ಸಲಿಂಗಿಗಳು ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕೋರ್ಟ್!
ಭಾರತದಲ್ಲಿ 3.72 ಲಕ್ಷ ಮಂದಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ, ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಶೇಕಡಾ 55 ರಷ್ಟು ಮಂದಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇನ್ನು 1.13 ಲಕ್ಷ ಅಪರಾಧಿಗಳಲ್ಲಿ ಶೇಕಡಾ 21 ರಷ್ಟು ಜನ ಪರಿಶಿಷ್ಟ ಜಾತಿ ಹಾಗೂ ಹಾಗೂ ಶೇಕಡಾ 37.1 ರಷ್ಟು ಮಂದಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಇನ್ನು ವಿಚಾರಣೆಯಲ್ಲಿರುವ ಶೇಕಡಾ 17 ಕ್ಕಿಂತ ಹೆಚ್ಚು ಮತ್ ಶೇಕಡಾ 19.5 ರಷ್ಟು ಅಪರಾಧಿಗಳು ಮುಸ್ಲಿಮರಾಗಿದ್ದಾರೆ ಎಂದು ಒರಿಸಾ ಹೈಕೋರ್ಟ್ ಮುಖ್ಯನ್ಯಾಮೂರ್ತಿ ಹೇಳಿದ್ದಾರೆ.
ಈ ಅಂಕಿ ಅಂಶಗಳಲ್ಲಿರುವ ಹೇಳಿರುವ ಹಾಗೆ ಹಿಂದುಳಿದ ವರ್ಗ ಹಾಗೂ ಬಡವರು ನ್ಯಾಯಾಕ್ಕಾಗಿ ಹೋರಾಡುತ್ತಲೇ ಇದ್ದಾರೆ. ಆದರೆ ಹಲವು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಎಂದು ಜಸ್ಟೀಸ್ ಮುರಳೀಧರ್ ಹೇಳಿದ್ದಾರೆ.
ಹಿಜಾಬ್ ತೀರ್ಪಿನ ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣ, FIR ರದ್ದತಿಗೆ ಸುಪ್ರೀಂ ಕದತಟ್ಟಿದ ಆರೋಪಿ!
ಈಗಾಗಲೇ ಹೇಳಿದ ವಿಚಾರಣೆಯಲ್ಲಿರುವ ಖೈದಿಗಳ ಪೈಕಿ ಹಲವರಿಗೆ ಜಾಮೀನು ಮಂಜೂರಾಗಿದೆ. ಹಲವರಿಗೆ ಜಾಮೀನು ಪಡೆಯಲು ಅರ್ಹರಾಗಿದ್ದಾರೆ. ಆದರೆ ಅವರಿಗೆ ಬಾಂಡ್, ಷ್ಯೂರಿಟಿ ಹೊಂದಿಸಲು ಸಾಧ್ಯವಾಗದೆ ಜೈಲಿನಲ್ಲೇ ಇದ್ದಾರೆ. ಶ್ರೀಮಂತರ ವಿಚಾರವಾಗಿದ್ದರೆ, ಸುಲಭವಾಗಿ ಜಾಮೀನು ಪಡೆದು ಹೊರಬರುತ್ತಾರೆ ಎಂದು ಎಸ್ ಮುರಳೀಧರ್ ಹೇಳಿದ್ದಾರೆ.
ಬಡವನಿಗೆ ಉತ್ತಮ ವಕೀಲನ ನೆರವು ಸಿಗಲು ಸಾಧ್ಯವೇ? ನ್ಯಾಯಕ್ಕಾಗಿ ಆತ ಅಷ್ಟು ಹಣ ವ್ಯಯಿಸಲು ಅಸಾಧ್ಯವಾಗಲಿದೆ. ಈ ಬೆಳವಣಿಗೆ ಮತ್ತಷ್ಟು ಆತಂಕಕಾರಿ ಎಂದು ಜಸ್ಟೀಸ್ ಎಸ್ ಮುರಳೀದರ್ ಹೇಳಿದ್ದಾರೆ. ಬಡವನಿಗೆ ನೆರವಾಗಲು ಸರ್ಕಾರಿ ವಕೀಲ ಅಥವಾ ಉಚಿತ ನೆರವು ಇದ್ದರೆ ಅಲ್ಲಿ ಗುಣಮಟ್ಟದ ಸೇವೆ ಸಿಗುವುದಿಲ್ಲ. ಇದು ಉಚಿತವಾಗಿ ಸಿಗುವ ರೇಷನ್ ಅಂಗಡಿಯನ್ನು ಇಲ್ಲಿ ಪರಿಗಣಿಸಬಹುದು. ಉಚಿತವಾಗಿ ಸಿಗುತ್ತದೆ, ಆದರೆ ಗುಣಮಟ್ಟ ಯಾವ ರೀತಿ ಇದೆ ಅನ್ನೋದು ನೀವೇ ಊಹಿಸಿಕೊಳ್ಳಿ ಎಂದು ಜಸ್ಟೀಸ್ ಮುರಳೀಧರ್ ಹೇಳಿದ್ದಾರೆ.
ಇನ್ನು ಮಾನವ ಹಕ್ಕುಗಳ ವಕೀಲರು ದಲಿತರು, ಆದಿವಾಸಿಗಳನ್ನು ನಕ್ಸಲರ್, ಮಾವೋವಾದಿಗಳು ಎಂದು ಕರೆದು ಇಡೀ ಸಮುದಾಯಗಳನ್ನು ಅನುಮಾನದಿಂದ ನೂಡುವಂತಾಗಿದೆ.
ಕಾನೂನು ಅರಿವು ಜನ ಜಾಗೃತಿಗೆ ಒತ್ತು
ತ್ವರಿತ ನ್ಯಾಯದಾನ ಪ್ರಕ್ರಿಯೆಗೆ ಆದ್ಯತೆ ನೀಡಿ ನ್ಯಾಯಾಂಗ ವ್ಯವಸ್ಥೆ ವಿಶ್ವಾಸಯುತವಾಗಿ ಮುಂದುವರೆಯುವುದು ಅಗತ್ಯ. ಸಮಾಜದ ಎಲ್ಲ ಸ್ತರಗಳ ವ್ಯಕ್ತಿಗಳಿಗೂ ಸಮಾನ ಹಕ್ಕು ಮತ್ತು ಕರ್ತವ್ಯಗಳಿದ್ದು, ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ‍್ಯದರ್ಶಿ ನ್ಯಾಯಮೂರ್ತಿ ಸಂದೀಪ್ ಸಾಲಿಯಾನ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ನಡೆದ ಕಾನೂನು ಅರಿವು ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಮಾನ್ಯ ಕಾನೂನುಗಳ ಕುರಿತು ಪ್ರತಿಯೊಬ್ಬರಿಗೂ ಅರಿವು ಇರಬೇಕು. ಸಮಾಜದ ಕಟ್ಟಳೆಗಳ ಬಗ್ಗೆ ಕನಿಷ್ಠ ತಿಳಿವಳಿಕೆ ಇಂದಿನ ಅಗತ್ಯವಾಗಿದೆ. ಈ ಹಂತದಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು, ಶೋಷಿತರ ಸಂರಕ್ಷಣೆ ಮತ್ತು ಅಭ್ಯುದಯದ ಆಶಯವನ್ನು ಪ್ರತಿಪಾದಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಕಾರ ತನ್ನ ಚಿಂತನೆಗಳನ್ನು ವಿಸ್ತರಣೆ ಮಾಡಿಕೊಂಡಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ