
ಹಾವುಗಳು ಭೂಮಿ ಮೇಲೆ ಇರುವ ಅತೀ ಹೆಚ್ಚು ಭಯ ಮೂಡಿಸುವ ಸರೀಸೃಪಗಳಾಗಿದ್ದು, ಭೂಮಿಯ ಸಮತೋಲನದಲ್ಲಿಡಲು ಇವುಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಹಾವುಗಳು ಮಳೆ ಚಳಿಯ ಸಮಯದಲ್ಲಿ ನಸುರಕ್ಷಿತ ಜಾಗವರಸಿ ಬಂದು ಮನೆಗಳ ಮೂಲೆಗಳು, ಶೂಗಳ ಒಳಗೆ, ವಾಹನಗಳ ಒಳಭಾಗ ಹೀಗೆ ಕತ್ತಲ ಜಾಗಗಳನ್ನು ಸೇರಿಕೊಂಡು ಬೆಚ್ಚಗೆ ಕುಳಿತು ಬಿಡುತ್ತವೆ. ಹಾವುಗಳು ವಾಹನದೊಳಗೆ ಸೇರಿ ಎಷ್ಟೋ ಕಿಲೋಮೀಟರ್ ಸಂಚರಿಸಿದ ಘಟನೆಗಳು ಹಲವು ಬಾರಿ ನಡೆದಿವೆ. ಮಳೆಗಾಲದಲ್ಲಿ ಖಾಲಿ ಶೂಗಳು ಹಾವುಗಳ ನೆಚ್ಚಿನ ಆಶ್ರಯ ತಾಣಗಳಾಗಿವೆ. ಹಾಗೆಯೇ ತೆಗೆದಿರಿಸಿದ ಹೆಲ್ಮೆಟ್‌ಗಳ ಒಳಗೂ ಹಾವುಗಳು ಸೇರಿಕೊಂಡು ಭಯ ಹುಟ್ಟಿಸಿ ಬಿಡುತ್ತವೆ. ಹಾವುಗಳಿರುವ ಹೆಲ್ಮೆಟ್‌ಗಳ ಕಲ್ಪನೆಯೇ ಮೈ ಜುಮ್ಮೆನಿಸುತ್ತದೆ. ಅದೇ ರೀತಿ ಇಲ್ಲೊಂದು ಹಾವು ಹೆಲ್ಮೆಟ್ ಒಳಗೆ ಸೇರಿಕೊಂಡಿದ್ದು ಎಲ್ಲರ ಭಯ ಬೀಳಿಸಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೆಲ್ಮೆಟ್ ಧರಿಸುವ ದ್ವಿಚಕ್ರ ವಾಹನ ಸವಾರರು ಈ ವೀಡಿಯೋ ನೋಡಿದರೆ ಬೆವರುವುದಂತೂ ಪಕ್ಕಾ.
ದೇವ್ ಶ್ರೇಷ್ಠ ಎಂಬುವವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಹಾವು ತೆಗೆದಿರಿಸಿ ಹೆಲ್ಮೆಟ್ ಒಳಗಿನಿಂದಲೇ ಹೆಡೆಯೆತ್ತಿ ನಿಂತು ಬುಸುಗುಡುವುದನ್ನು ಕಾಣಬಹುದಾಗಿದೆ. ಸುದ್ದಿಗೆ ಬಂದರೆ ದಾಳಿ ಮಾಡುವ ರೀತಿಯಲ್ಲಿ ಹಾವು ಸನ್ನದ್ಧವಾಗಿ ನಿಂತಿದ್ದು ಈ ವೀಡಿಯೋ ನೆಟ್ಟಿಗರನ್ನು ಬಹುವಾಗಿ ಆಕರ್ಷಿಸಿದೆ. 4.2 ಮಿಲಿಯನ್‌ಗೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಮೈ ಜುಮ್ಮೆನಿಸುವಂತಿದೆ ಈ ವೀಡಿಯೋ. ಈ ವೀಡಿಯೋ ಅನೇಕರಿಗೆ ಎಚ್ಚರಿಕೆ ಎಂದರೆ ತಪ್ಪಾಗಲಾರದು. ಮನೆಗೆ ಬಂದು ಎಲ್ಲೆಂದರಲ್ಲಿ ಹೆಲ್ಮೆಟ್ ಎಸೆದು ಮುಂಜಾನೆ ಕೆಲಸಕ್ಕೆ ಹೊರಡುವ ವೇಳೆ ತಡಕಾಡಿ ತರಾತುರಿಯಲ್ಲಿ ಹಾಕಿಕೊಳ್ಳುವ ವೇಳೆ ಹೆಲ್ಮೆಟ್ ಅನ್ನು ಒಮ್ಮೆ ಪರೀಕ್ಷಿಸುವುದು ಒಳಿತು. ಇಲ್ಲದೇ ಹೋದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಹಾವು ಕಡಿತದ ಬಳಿಕ 2 ದಿನ ಆರೋಗ್ಯವಾಗಿದ್ದ ಮಹಿಳೆ ಮೂರನೇ ದಿನ ಸಾವು, ಇದೆಂಥ ಹಾವು!
ಈ ರೀತಿ ಹಾವುಗಳು ಹೆಲ್ಮೆಟ್ ಒಳಗೆ ಸೇರಿಕೊಳ್ಳುವುದು ಇದೇ ಮೊದಲೇನಲ್ಲ, ಕೆಲ ದಿನಗಳ ಹಿಂದಷ್ಟೇ ಕೇರಳದಲ್ಲೂ ಇಂತಹದ್ದೇ ಘಟನೆಯೊಂದು ನಡೆದಿತ್ತು. ಕೇರಳದ ತ್ರಿಶ್ಯೂರ್ ಮೂಲದ ಯುವಕ ಹಾವಿನ ಕಡಿತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಈತ ತಾನು ಕೆಲಸ ಮಾಡುವ ಸಮೀಪ ಬೈಕ್ ಪಾರ್ಕಿಂಗ್ ಮಾಡುವ ಸ್ಥಳದಲ್ಲೇ ತನ್ನ ಹೆಲ್ಮೆಟ್ ಇರಿಸಿ ಬಂದಿದ್ದ, ಆದರೆ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವ ವೇಳೆ ಬೈಕ್ ಸ್ಟಾರ್ಟ್ ಮಾಡಿ ಹೆಲ್ಮೆಟ್ ಹಾಕಿಕೊಳ್ಳಲು ಮುಂದಾದಾಗ ಆತನಿಗೆ ಶಾಕ್ ಕಾದಿತ್ತು. ಅದರೊಳಗೆ ಏನೋ ಜೀವಂತ ಜೀವಿ ಇರುವುದು ಕಂಡು ಬಂದಿದ್ದು, ಪರೀಕ್ಷಿಸಿ ನೋಡಿದಾಗ ಅಲ್ಲಿ ಹಾವೊಂದು ಸೇರಿಕೊಂಡಿತ್ತು. ಕೂಡಲೇ ಆತ ಅರಣ್ಯ ಇಲಾಖೆಗೆ ಕರೆ ಮಾಡಿದ್ದ. ನಂತರ ಅಲ್ಲಿಗೆ ಬಂದ ಉರಗರಕ್ಷಕ ಲಿಜೋ ಎಂಬಾತ ಈ ಹಾವನ್ನು ಹೆಲ್ಮೆಟ್‌ನಿಂದ ತೆಗೆದು ರಕ್ಷಣೆ ಮಾಡಿದ್ದ.
ಪೊರ್ನ್ ವಿಡಿಯೋ ಶೂಟಿಂಗ್ ವೇಳೆ ಸಹ ನಟನ ಜನನಾಂಗಕ್ಕೆ ಕಚ್ಚಿದ ನಟಿಯ ಸಾಕು ಹಾವು!
ಒಟ್ಟಿನಲ್ಲಿ ಮಳೆ ಹಾಗೂ ವಾತಾವರಣ ತಂಪಾಗಿರುವ ಕಾಲದಲ್ಲಿ ಹಾವುಗಳು ಇಂತಹ ಪ್ರದೇಶಗಳನ್ನು ಅರಸಿ ಬರುವುದು ಸಾಮಾನ್ಯವಾಗಿದ್ದು, ಇಂತಹ ಸಂದರ್ಭಗಳಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ನಿಮ್ಮನ್ನು ಅಪಾಯದಿಂದ ತಪ್ಪಿಸಬಲ್ಲದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ