ಭಾರತ ಈಗ ಒಳ್ಳೆಯ ಕೈಗಳಲ್ಲಿದೆ: ಮೋದಿ ಬಗ್ಗೆ ಅಮೆರಿಕ ನಟ ಪ್ರಶಂಸೆ

By Kannadaprabha NewsFirst Published Nov 29, 2023, 8:51 AM IST
Highlights

ಭಾರತ ಈಗ ಒಳ್ಳೆಯ ಕೈಗಳಲ್ಲಿ ಇದೆ. ಇದು ಆರಂಭ’ ಎನ್ನುವ ಮೂಲಕ ಅಮೆರಿಕದ ನಟ ಹಾಗೂ ಚಿತ್ರ ನಿರ್ಮಾಪಕ ಮೈಕೆಲ್‌ ಡಗ್ಲಾಸ್‌ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

ಪಣಜಿ: ‘ಭಾರತ ಈಗ ಒಳ್ಳೆಯ ಕೈಗಳಲ್ಲಿ ಇದೆ. ಇದು ಆರಂಭ’ ಎನ್ನುವ ಮೂಲಕ ಅಮೆರಿಕದ ನಟ ಹಾಗೂ ಚಿತ್ರ ನಿರ್ಮಾಪಕ ಮೈಕೆಲ್‌ ಡಗ್ಲಾಸ್‌ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಗೋವಾದಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಚಿತ್ರ ನಿರ್ಮಾಣ ಹಾಗೂ ಚಲನಚಿತ್ರಗಳ ಹಣಕಾಸು ನೆರವಿಗೆ ಭಾರಿ ಪ್ರಮಾಣದಲ್ಲಿ ಹಣ ತೊಡಗಿಸಲಾಗುತ್ತಿದೆ. ಇದು ಅತ್ಯಂತ ಯಶಸ್ವಿ ಕಾಲವಾಗಿದೆ ಎಂದು ಹೇಳಿದರು.

‘ಚಿತ್ರೋತ್ಸವಕ್ಕೆ 78 ದೇಶಗಳ ಪ್ರತಿನಿಧಿಗಳು ಬಂದಿದ್ದಾರೆ. ಇದು ಹೆಚ್ಚು ಹೆಚ್ಚು ಉತ್ಸಾಹದ ದ್ಯೋತಕ ಹಾಗೂ ಚಿತ್ರೋತ್ಸವದ ಸೌಂದರ್ಯ. ಅಲ್ಲದೆ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಭಾರತೀಯ ಚಿತ್ರೋದ್ಯಮದ ಶಕ್ತಿ. ಈಗ ನೀವೆಲ್ಲರೂ ಅತ್ಯುತ್ತಮ ಕೈಗಳಲ್ಲಿ ಇದ್ದೀರಿ. ಇದು ಆರಂಭ ಮಾತ್ರ’ ಎಂದು ತಿಳಿಸಿದರು. ಚಲನಚಿತ್ರಗಳು ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಜನರನ್ನು ಒಗ್ಗೂಡಿಸುತ್ತವೆ ಎಂದು ತಿಳಿಸಿದರು.

Latest Videos

ತಮಾಷೆ ಮಾಡಲು ಹೋಗಿ ತಗಲಾಕೊಂಡ ಟೆಕ್ಕಿ ಜೋಡಿ: ಬೆಂಗಳೂರಿಗೆ ಹೊರಟ ವಿಮಾನ ಲೇಟ್‌: ಏರ್‌ಪೋರ್ಟ್‌ನಲ್ಲಿ ಅರೆಸ್ಟ್‌

ರಕ್ಷಣಾ ಕಾರ್ಯಕ್ಕೆ ಜಾಗತಿಕ ಮಾಧ್ಯಮಗಳ ಪ್ರಶಂಸೆ

ಲಂಡನ್: ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು 17 ದಿನಗಳ ಭಗೀರಥ ಯತ್ನದ ಬಳಿಕ ಭಾರತದ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದನ್ನು ಜಾಗತಿಕ ಮಾಧ್ಯಮಗಳು ಶ್ಲಾಘಿಸಿವೆ. ಸುರಂಗದ ಹೊರಗೆ ಕಾರ್ಮಿಕರು ಬಂದ ತಕ್ಷಣ ಸಂಭ್ರಮ ಮನೆಮಾಡಿತು ಎಂದು ಬ್ರಿಟನ್‌ನ ಬಿಬಿಸಿ ವರದಿ ಮಾಡಿದೆ. ಇನ್ನು ಸಿಎನ್‌ಎನ್‌, ಆಲ್‌ ಜಜೀರಾ, ದ ಗಾರ್ವಿಯನ್‌ ಕೂಡ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹಾಗೂ ಕೇಂದ್ರ ಸಚಿವ ವಿ.ಕೆ. ಸಿಂಗ್‌ ಅವರು ಕಾರ್ಮಿಕರನ್ನು ಸ್ವಾಗತಿಸಿದ್ದನ್ನು ಪ್ರಮುಖವಾಗಿ ವರದಿ ಮಾಡಿವೆ.

ಸುಪ್ರೀಂಕೋರ್ಟ್ ಕಲಾಪ ವೀಕ್ಷಿಸಿದ 8 ದೇಶದ ಮುಖ್ಯ ನ್ಯಾಯಾಧೀಶರು

ನವದೆಹಲಿ: ಇವರಿ ಕೋಸ್ಟ್‌, ದಕ್ಷಿಣ ಸುಡಾನ್‌ ಮತ್ತು ಘಾನಾ ಸೇರಿದಂತೆ ಹಲವು ದೇಶಗಳ ಮುಖ್ಯ ನ್ಯಾಯಮೂರ್ತಿಗಳು ಮಂಗಳವಾರ ಭಾರತದ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದಲ್ಲಿ ಕುಳಿತು 30 ನಿಮಿಷಗಳ ಕಾಲ ಸುಪ್ರೀಂ ಕೋರ್ಟ್ ಕಲಾಪವನ್ನು ವೀಕ್ಷಿಸಿದರು. ಭಾರತದ ಮುಖ್ಯ ನ್ಯಾಯಾಧೀಶರಾದ ಡಿ.ವೈ ಚಂದ್ರಚೂಡ್‌, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠ ನಡೆಸಿದ ವಿಚಾರಣೆಯನ್ನು ಇವರಿ ಕೋಸ್ಟ್‌, ದಕ್ಷಿಣ ಸುಡಾನ್‌, ಕಿರ್ಗಿಸ್ತಾನ್‌, ಉಜ್ಬೇಕಿಸ್ತಾನ್‌, ತಜಕಿಸ್ತಾನ್‌, ಕ್ಯಾಮರೂನ್‌, ಬೋಟ್ಸ್‌ವಾನಾ, ಮತ್ತು ಘಾನಾದ ಮುಖ್ಯ ನ್ಯಾಯಾಧೀಶರು ವೀಕ್ಷಿಸಿದರು.

ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಪರಿಹಾರ ದುರುಪಯೋಗ: ದೂರು ದಾಖಲು

ವಿಚಾರಣೆ ಮೊದಲು ಎಲ್ಲ ವಿದೇಶಗಳ ನ್ಯಾಯಾಧೀಶರನ್ನು ಸ್ವಾಗತಿಸಿದ ಚಂದ್ರಚೂಡ್‌ ‘ಬಾರ್‌ನ ಸದಸ್ಯರೇ, ಅಂತರಾಷ್ಟ್ರೀಯ ಸಮ್ಮೇಳನಕ್ಕಾಗಿ ವಿದೇಶದಿಂದ ಬಂದಿರುವ ಮುಖ್ಯ ನ್ಯಾಯಮೂರ್ತಿಗಳನ್ನು, ನಮ್ಮ ಸಹೋದ್ಯೋಗಿಗಳನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ’ ಎಂದರು.

click me!