
ಸಾಮಾಜಿಕ ಜಾಲತಾಣ ಎಂಬುದು ಒಂದು ಅದ್ಭುತ ಲೋಕ. ಇಲ್ಲಿ ಕ್ಷಣಕ್ಷಣಕ್ಕೂ ಅಚ್ಚರಿಯ ಸುದ್ದಿಗಳು, ವಿಡಿಯೋಗಳು ಅಪ್‌ಲೋಡ್ ಆಗುತ್ತಿರುತ್ತವೆ. ಕೆಲವೊಮ್ಮೆ ಪ್ರಾಣಿಗಳ ನಡುವಿನ ವಿಚಿತ್ರ ಒಡನಾಟ ಅಥವಾ ಅಪಾಯಕಾರಿ ಸನ್ನಿವೇಶಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಇತ್ತೀಚೆಗೆ 'ಲಿಲಿತ್' (@liiliith0) ಎಂಬುವವರು ಟ್ವಿಟರ್‌ನಲ್ಲಿ (X) ಹಂಚಿಕೊಂಡಿರುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಕುರಿಯೊಂದರ ಕುತ್ತಿಗೆಗೆ ವಿಷಕಾರಿ ನಾಗರಹಾವು ಸುತ್ತಿಕೊಂಡಿದ್ದರೂ, ಅದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹುಲ್ಲು ತಿನ್ನುತ್ತಿರುವ ದೃಶ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಒಂದು ಮರಿ ಕುರಿ ಹಸಿರು ಹುಲ್ಲುಗಾವಲಿನಲ್ಲಿ ನಿರಾತಂಕವಾಗಿ ಮೇಯುತ್ತಿದೆ. ಆದರೆ ಅದರ ಕುತ್ತಿಗೆಗೆ ಗಮನಿಸಿದರೆ ಭಯವಾಗುತ್ತದೆ. ಅಲ್ಲಿ ಒಂದು ಬೃಹತ್ ನಾಗರಹಾವು ಬಿಗಿಯಾಗಿ ಸುತ್ತಿಕೊಂಡಿದೆ. ಹಾವಿನ ಹೆಡೆ ಕುರಿಯ ಮುಖದ ಮುಂದೆಯೇ ಇದ್ದರೂ, ಆ ಕುರಿ ಮರಿ ಮಾತ್ರ ತನ್ನ ಆಹಾರ ಸೇವನೆಯಲ್ಲಿ ಮಗ್ನವಾಗಿದೆ. ಈ ದೃಶ್ಯವನ್ನು ನೋಡಿದಾಗ, 'ಕುರಿ ಸ್ವಭಾವದ ಜನ ಇರಬಾರದು' ಎಂಬ ಹಿರಿಯರ ಮಾತು ನೆನಪಾಗುತ್ತದೆ. ಸುತ್ತಲೂ ಎಂತಹ ಅಪಾಯವಿದ್ದರೂ ಅರಿಯದ ಕುರಿಯ ಈ ಮುಗ್ಧತೆ ಅಥವಾ ಅಜ್ಞಾನದ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.
ಕುರಿ ಅಪಾಯದಲ್ಲಿದೆ ಎಂದು ತಿಳಿದ ತಕ್ಷಣ ಅದರ ಮಾಲೀಕ ಓಡಿ ಬರುತ್ತಾರೆ. ಬರಿಗೈಲಿ ಹಾವನ್ನು ಹಿಡಿಯುವುದು ಅಪಾಯಕಾರಿ ಎಂದು ತಿಳಿದ ಅವರು, ಒಂದು ಬಿಳಿ ಬಣ್ಣದ ಪಿವಿಸಿ (PVC) ಪೈಪ್ ಬಳಸುತ್ತಾರೆ. ಪೈಪ್ ಅನ್ನು ಹಾವಿನ ತಲೆಯ ಹತ್ತಿರ ಹಿಡಿದು, ಹಾವು ಅದರೊಳಗೆ ಹೋಗುವಂತೆ ಮಾಡುತ್ತಾರೆ. ನಂತರ ಜಾಗರೂಕತೆಯಿಂದ ಹಾವನ್ನು ಕುರಿಯ ಕುತ್ತಿಗೆಯಿಂದ ಬಿಡಿಸಿ, ದೂರಕ್ಕೆ ಕೊಂಡೊಯ್ಯುತ್ತಾರೆ. ಆ ವ್ಯಕ್ತಿಯ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ. ಕೆಲವರು 'ಇದು ಮಾನವೀಯತೆಯ ದರ್ಶನ" ಎಂದು ಹೊಗಳುತ್ತಿದ್ದರೆ, ಇನ್ನು ಕೆಲವರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ 'ರೀಲ್ಸ್' (Reels) ಮಾಡುವುದಕ್ಕಾಗಿ ಮತ್ತು ಲೈಕ್ಸ್ ಪಡೆಯುವುದಕ್ಕಾಗಿ ಹಾವಿನ ಹಲ್ಲುಗಳನ್ನು ಕಿತ್ತಿ ಅಥವಾ ಪ್ರಾಣಿಗಳಿಗೆ ಹಿಂಸೆ ನೀಡಿ ಇಂತಹ ವಿಡಿಯೋಗಳನ್ನು ಚಿತ್ರೀಕರಿಸುವವರೂ ಇದ್ದಾರೆ. ಈ ಘಟನೆ ಆಕಸ್ಮಿಕವಾಗಿ ನಡೆದದ್ದೇ ಅಥವಾ ಕೇವಲ ವಿಡಿಯೋಗಾಗಿ ಸೃಷ್ಟಿಸಿದ್ದೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಈ ವಿಡಿಯೋ ಏನನ್ನೇ ಹೇಳಲಿ, ಸದ್ಯಕ್ಕಂತೂ ಕುರಿ ಮರಿ ಸುರಕ್ಷಿತವಾಗಿದೆ. ಕುರಿಯ ಕೊರಳಿಗೆ ನಾಗರ ಹಾವು ಸುತ್ತಿಕೊಂಡರೂ, ಹುಲ್ಲು ತಿನ್ನುವುದನ್ನು ಬಿಡಲಿಲ್ಲ. ತನ್ನ ಸಾವಿನ ಕೊನೇ ಕ್ಷಣದವರೆಗೂ ಕುರಿಗೆ ತನ್ನ ಸುತ್ತಲೂ ಏನು ಮೋಸ ನಡೆಯುತ್ತಿದೆ ಎಂಬುದು ತಿಳಿಯಲ್ಲ. ಹೀಗಾಗಿ, ಜನರು ಕುರಿಯ ಹಾಗೆ ಇರಬೇಡ. ನಿನ್ನ ಸುತ್ತಲೂ ನಡೆಯುವ ಮೋಸ, ವಂಚನೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಜನರು ಉದಾಹರಣೆಗಳನ್ನು ಕೊಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಕುರಿ ಪ್ರಾಣಾಪಾಯದಲ್ಲಿದ್ದರೂ ಹುಲ್ಲು ತಿನ್ನುವುದನ್ನು ಬಿಡುತ್ತಿಲ್ಲ ಎಂಬುದನ್ನು ನೋಡಬಹುದು. ಇನ್ನು ಕುರಿ ಹಾವು ಬಂದಾಕ್ಷಣ ಅಥವಾ ತನ್ನ ಕುತ್ತಿಗೆಗೆ ಹಾವು ಸುತ್ತಿಕೊಂಡಾಗ ಅದರಿಂದ ಬಿಡಿಸಿಕೊಳ್ಳುವ ಪ್ರಯತ್ನವನ್ನ ಮಾಡಿಲ್ಲ ಎಂಬುದು ಇಲ್ಲಿ ಕಂಡುಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ