ನವದೆಹಲಿ(ಡಿ.15): ಶ್ವಾನ(dog) ಹಾಗೂ ಮನುಷ್ಯರ ನಡುವಿನ ಸಂಬಂಧ ತುಂಬಾ ಅವಿನಾಭಾವವಾದುದು ಇದಕ್ಕೆ ಮನುಷ್ಯನ ಮೇಲೆ ಶ್ವಾನದ ಪ್ರೀತಿ ಊಹೆಗೂ ನಿಲುಕದು. ಮಾಲೀಕ ಸತ್ತಾಗ ಶ್ವಾನವೂ ಪ್ರಾಣ ಬಿಟ್ಟಂತಹ ಅನೇಕ ಘಟನೆಗಳನ್ನು ನಾವು ಈ ಹಿಂದೆ ಕೇಳಿದ್ದೇವೆ. ಆದರೆ ಇಲ್ಲಿ ನಾವು ಹೇಳ ಹೊರಟಿರುವುದು ಕ್ಯೂಟ್ ಕ್ಯೂಟ್ ಆದ ಮಗು ನಾಯಿಯನ್ನು ಮೊದಲ ಬಾರಿ ನೋಡಿದಾಗ ಮಗುವಿನ ಪ್ರತಿಕ್ರಿಯೆ ಹೇಗಿತ್ತು ಎಂಬುದು. ಹೌದು ಈ ವಿಡಿಯೋದಲ್ಲಿ ಮಗುವು ನಾಯಿಯನ್ನು ನೋಡಿ ಕೂಡಲೇ ಫುಲ್ ಖುಷಿಯಾಗಿ ಚಪ್ಪಾಳೆ ತಟ್ಟುತ್ತಾ ಡಾನ್ಸ್ ಮಾಡಲು ಶುರು ಮಾಡುತ್ತದೆ. ಜೊತೆಗೆ ನಾಯಿಯ ಪಕ್ಕವೇ ಈ ಮಗು ಮಲಗಲು ನೋಡುತ್ತದೆ.
ಈ ವೇಳೆ ನಾಯಿ ಮಗುವಿನ ಮುಖವನ್ನು ನೆಕ್ಕಿ ಮುದ್ದು ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಒಮ್ಮೆ ಗಾಬರಿಯಾದ ಮಗು ಕೂಡಲೇ ಅಲ್ಲಿಂದ ಎದ್ದು ಮತ್ತೆ ನಾಯಿಯ ಮುಖವನ್ನು ಮುಟ್ಟಿ ಮುದ್ದು ಮಾಡಲು ಶುರು ಮಾಡುತ್ತದೆ. ಈ ವೇಳೆ ಕುಳಿತಿದ್ದ ನಾಯಿ ಮತ್ತೆ ಎದ್ದು ಮಗುವಿನ ಮುಖ ನೆಕ್ಕಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಆದರೆ ಮತ್ತೆ ಗಾಬರಿಗೊಳಗಾದ ಸಣ್ಣ ಮಗು ಅಲ್ಲಿಂದ ಓಡಲು ಶುರು ಮಾಡುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 4 ಮಿಲಿಯನ್‌ಗೂ ಹೆಚ್ಚು ಜನ ಅದನ್ನು ವೀಕ್ಷಿಸಿದ್ದಾರೆ.
Cutest pet Dog:ಮೇಕ್‌ಅಪ್ ಆರ್ಟಿಸ್ಟ್ ಆದ ಕ್ಯೂಟ್ ಡಾಗ್, ವೈರಲ್ ವಿಡಿಯೋ !
ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ Buitengebieden ಎಂಬ ಹೆಸರಿನ ಖಾತೆಯಿಂದ ಇದು ಶೇರ್ ಆಗಿದೆ. (ಮೀಟಿಂಗ್ ಎ ಡಾಗ್ ಫಾರ್ ಫಸ್ಟ್ ಟೈಮ್ ಇನ್ ಯುವರ್ ಲೈಫ್) ನಿಮ್ಮ ಜೀವನದಲ್ಲಿ ಮೊದಲ ಬಾರಿಗೆ ನಾಯಿಯನ್ನು ಭೇಟಿಯಾದಾಗ ಅಂತ ಶೀರ್ಷಿಕೆ ಕೊಡಲಾಗಿದೆ. ಮುದ್ದಾದ ಹುಡುಗ ಮತ್ತು ನಾಯಿಯ ಈ ವೀಡಿಯೊವನ್ನು ಇಂಟರ್ನೆಟ್ ಪ್ರೀತಿಸುತ್ತಿದೆ. ಮಕ್ಕಳು ಮತ್ತು ಪ್ರಾಣಿಗಳು ಮುಗ್ಧ ನೈಸರ್ಗಿಕ ಒಡನಾಟವನ್ನು ಇದು ಹೊಂದಿದೆ. ವೀಕ್ಷಿಸಲು ತುಂಬಾ ಸಿಹಿಯಾಗಿದೆ ಎಂದು ಬಳಕೆದಾರರು ಬರೆದಿದ್ದಾರೆ. ನಾಯಿಗೆ ಮುಖಾಮುಖಿಯಾಗಲು ನೆಲದ ಮೇಲೆ ಮಲಗುವ ಮಗು ಎಷ್ಟು ಸ್ಮಾರ್ಟ್ ಎಂದೆಲ್ಲಾ ನೆಟ್ಟಿಜನ್‌ಗಳು ಈ ವೀಡಿಯೋ ಬಗ್ಗೆ ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
Meeting a dog for the first time in your life.. 😊 pic.twitter.com/7X6K7jmswP
— Buitengebieden (@buitengebieden_)
ನಾಯಿ(Dog) ಅಂದ್ರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಪ್ರೀತಿಯ ಪೆಟ್ ಒಂದು ಮನೆಯಲ್ಲಿದ್ದರೆ ಅದರಲ್ಲೇ ನೆಮ್ಮದಿ ಕಾಣುವ ಬಹಳಷ್ಟು ಮಂದಿ ಇದ್ದಾರೆ. ಇಲ್ಲೊಂದು ಪುಟ್ಟ ನಾಯಿಮರಿಯನ್ನು ಕುಟುಂಬ ಎಷ್ಟು ಕ್ಯೂಟ್ ಆಗಿ ವೆಲ್‌ಕಮ್(Welcome) ಮಾಡಿದೆ ನೋಡಿ. ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರವರೆಗೆ ಎಲ್ಲರಿಗೂ ನಾಯಿ ಸಾಕೋ ಹವ್ಯಾಸವಿರುತ್ತದೆ. ವಿಜಯ್ ದೇವರಕೊಂಡ, ರಶ್ಮಿಕಾ, ಕೀರ್ತಿ ಸುರೇಶ್, ಮಲೈಕಾರಂತ ಬಹಳಷ್ಟು ಸೆಲೆಬ್ರಿಟಿಗಳು ಪ್ರೀತಿಯಿಂದ ನಾಯಿಗಳನ್ನು ಸಾಕುತ್ತಾರೆ. ಹಾಗೆಯೇ ಜನ ಸಾಮಾನ್ಯರೂ ಅಷ್ಟೇ ಶ್ವಾನಗಳನ್ನು ಸಾಕುತ್ತಾರೆ. ಒಂದು ನಾಯಿ ಸಾಕುವಾಗ ಕುಟುಂಬಕ್ಕೆ ತಮ್ಮ ಪೆಟ್ ಜೊತೆ ಹೊಸ ಬಾಂಡಿಂಗ್ ಬಂದಿರುತ್ತದೆ. ಈಗ ಕುಟುಂಬವೊಂದು ಪುಟ್ಟ ಪಪ್ಪಿಯನ್ನು ಮನೆಗೆ ಸ್ವಾಗತಿಸೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಮೆಚ್ಚುಗೆ ಪಡೆಯುತ್ತಿದೆ.
Puppy Viral Video: ಪುಟ್ಟ ನಾಯಿಗೆ ದೇಸಿ ಸ್ಟೈಲ್ ಸ್ವಾಗತ
ರಿಯೋನಿಮೇಶ್ ಎಂಬ ಖಾತೆಯಿಂದ ಈ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ, ಹುಡುಗಿಯೊಬ್ಬಳು ತನ್ನ ತೋಳುಗಳಲ್ಲಿ ಮುದ್ದಾದ ಗೋಲ್ಡನ್ ರಿಟ್ರೈವರ್ ನಾಯಿಯನ್ನು ಹಿಡಿದಿರುವುದು ಕಾಣಬಹುದು. ಅವಳು ಅದನ್ನು ಹಿಡಿದಾಗ ಅವಳ ತಂದೆ ಅದರ ಪುಟ್ಟ ಪಂಜಗಳ ಮೇಲೆ ತಿಲಕ ಹಾಕಿದರು. ಅದರ ಮುಂದೆ ಒಂದು ದೀಪ ಹಾಗೂ ಸ್ವಲ್ಪ ಅಕ್ಕಿಯೊಂದಿಗೆ 'ಆರತಿ ' ಎತ್ತಿದ್ದಾರೆ. ನಂತರ ಹುಡುಗಿ ನಾಯಿ ಮರಿಯನ್ನು ನಿಧಾನವಾಗಿ ಮನೆಯೊಳಗೆ ಬಿಟ್ಟಿದ್ದಾರೆ.