PM Kuwait Trip : ಜನವರಿಯಲ್ಲಿ ಕುವೈತ್‌ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ

Suvarna News   | Asianet News
Published : Dec 15, 2021, 01:23 PM IST
PM Kuwait Trip : ಜನವರಿಯಲ್ಲಿ ಕುವೈತ್‌ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ

ಸಾರಾಂಶ

ಜನವರಿ ಮೊದಲ ವಾರದಲ್ಲಿ ಕುವೈತ್‌ಗೆ ಭೇಟಿ ನೀಡಲಿರುವ ಪ್ರಧಾನಿ 40 ವರ್ಷಗಳಲ್ಲಿ ಭಾರತದಿಂದ ಕುವೈಟ್‌ಗೆ ಪ್ರಧಾನ ಮಂತ್ರಿ ಮಟ್ಟದ  ಮೊದಲ ಭೇಟಿ ಭಾರತದ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಕುವೈತ್‌

ನವದೆಹಲಿ(ಡಿ.15) ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ಜನವರಿ ಮೊದಲ ವಾರದಲ್ಲಿ ತೈಲ ಸಮೃದ್ಧ ರಾಷ್ಟ್ರ ಕುವೈತ್‌ಗೆ ಭೇಟಿ ನೀಡಲು ಯೋಜನೆ ರೂಪಿಸುತ್ತಿದ್ದಾರೆ. ಕುವೈತ್‌ಗೆ ಪ್ರಧಾನಿ ಭೇಟಿ ನೀಡುತ್ತಿರುವುದು ಪಶ್ಚಿಮ ಏಷ್ಯಾದೊಂದಿಗೆ ಭಾರತದ ಬೆಳೆಯುತ್ತಿರುವ ಕಾರ್ಯತಂತ್ರದ ಸಹಭಾಗಿತ್ವವನ್ನು  ಮತ್ತೆ ಮತ್ತೆ ದೃಢೀಕರಿಸುವ ಸೂಚನೆ ಎಂಬುದಾಗಿ ಈ ಭೇಟಿಯನ್ನು ಬಣ್ಣಿಸಲಾಗುತ್ತಿದೆ. 

ಇದು 40 ವರ್ಷಗಳಲ್ಲಿ ಭಾರತದಿಂದ ಕುವೈಟ್‌ಗೆ ಪ್ರಧಾನ ಮಂತ್ರಿ ಮಟ್ಟದ  ಮೊದಲ ಭೇಟಿಯಾಗಿದೆ. ಕುವೈತ್ ಭಾರತದ ಪ್ರಮುಖ ತೈಲ ಪೂರೈಕೆದಾರರಲ್ಲಿ ಒಂದಾಗಿದೆ ಮತ್ತು ಈ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಭಾರತೀಯ ವಲಸಿಗರಿದ್ದು, ಇಲ್ಲಿ ದೊಡ್ಡ ಸಮಾವೇಶವನ್ನು ಏರ್ಪಡಿಸಲಾಗುತ್ತಿದೆ. ಭಾರತಕ್ಕೆ ಕುವೈತ್ ಹೂಡಿಕೆಗಳನ್ನು ಹೆಚ್ಚಿಸುವುದು ಮತ್ತು ಎರಡು ದೇಶಗಳ ನಡುವೆ ರಕ್ಷಣಾ ಪಾಲುದಾರಿಕೆಗೆ ಸ್ಥಾನ ನೀಡುವುದು ಈ ಭೇಟಿಯ ಗುರಿಯಾಗಿದೆ. 

ಮೋದಿ 2015 ರಿಂದ ಕುವೈತ್ ಹೊರತುಪಡಿಸಿ ಎಲ್ಲಾ ಇತರ ಐದು ಗಲ್ಫ್ ರಾಜ್ಯಗಳಿಗೆ ಭೇಟಿ ನೀಡಿದ್ದರು ಮತ್ತು ಈ ಪ್ರವಾಸವು ಮುಂದಿನ ಹಂತಕ್ಕೆ ಸಂಬಂಧವನ್ನು ನವೀಕರಿಸುವ ನಿರೀಕ್ಷೆಯಿದೆ. ಸರಿ ಸುಮಾರು ಒಂದು ಮಿಲಿಯನ್ ಭಾರತೀಯರು ಕುವೈತ್‌ನಲ್ಲಿ ನೆಲೆಸಿದ್ದಾರೆ (ಭಾರತೀಯರು ಕುವೈತ್‌ನ ಅತಿದೊಡ್ಡ ವಲಸಿಗ ಸಮುದಾಯವಾಗಿದೆ.)

ಸಮುದ್ರ ಸೇತು; ಕುವೈತ್‌ನಿಂದ ಮಂಗಳೂರಿಗೆ ಬಂದಿಳಿದಿದ 100 MT ಆಕ್ಸಿಜನ್

2020-21 ವರ್ಷವೂ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60 ನೇ ವಾರ್ಷಿಕೋತ್ಸವವನ್ನು ಬಿಂಬಿಸುತ್ತಿದೆ.  ಭಾರತವು ಕುವೈತ್‌ನ ನೈಸರ್ಗಿಕ ವ್ಯಾಪಾರ ಪಾಲುದಾರನಾಗಿದ್ದು, 1961 ರವರೆಗೂ ಭಾರತೀಯ ರೂಪಾಯಿಯು ಕುವೈತ್‌ನಲ್ಲಿ ಕಾನೂನು ಬದ್ಧ ಟೆಂಡರ್ ಪಡೆದಿತ್ತು. .
ಭಾರತವು ಕುವೈತ್‌ನ ಅಗ್ರ ಹತ್ತು ವ್ಯಾಪಾರ ಪಾಲುದಾರರಲ್ಲಿ ಒಂದಾಗಿದ್ದು ಮತ್ತು 2020-2021ನೇ ಆರ್ಥಿಕ ವರ್ಷದಲ್ಲಿ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು $ 6.27 ಬಿಲಿಯನ್ ಆಗಿದೆ. ಕುವೈತ್ ಭಾರತಕ್ಕೆ ಕಚ್ಚಾ ತೈಲ ಮತ್ತು ಎಲ್‌ಪಿಜಿಯ ವಿಶ್ವಾಸಾರ್ಹ ಪೂರೈಕೆದಾರನಾಗಿ ಉಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಲ್ಲಿಯವರೆಗೆ, ಭಾರತ(India) ದಲ್ಲಿ ಕುವೈತ್ ಹೂಡಿಕೆಗಳು $ 5.5 ಶತಕೋಟಿಗಿಂತ ಹೆಚ್ಚಿವೆ., ಅದರಲ್ಲಿ ಹೆಚ್ಚಿನವು ಕುವೈತ್ ಹೂಡಿಕೆ ಪ್ರಾಧಿಕಾರ(KIA)ದ್ದಾಗಿದೆ., GMR ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್, ಇಂಟರ್‌ಗ್ಲೋಬ್ ಏವಿಯೇಷನ್‌ನ (ಇಂಡಿಗೋ ಏರ್‌ಲೈನ್ಸ್) (Indigo Airlines) ಐಪಿಒ(IPO), ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (Bombay Stock Exchange) ಮತ್ತು ಪವರ್ ಗ್ರಿಡ್‌ನಂತಹ ಕಂಪನಿ (Power Grid Corporation) ಗಳಲ್ಲಿ ಹೂಡಿಕೆ ಮಾಡಲಾಗಿದೆ. ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(KIA)ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಲಯಗಳಾದ್ಯಂತ ಗಣನೀಯವಾಗಿ ಹೆಚ್ಚಿಸಲು ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುವೈತ್‌ನಲ್ಲಿ ಅನಿವಾಸಿ ಕನ್ನಡಿಗ ಸಂಶಯಾಸ್ಪದ ಸಾವು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಟ್ವಿಟರ್ ಅಭಿಯಾನ

ಏಪ್ರಿಲ್-ಮೇನಲ್ಲಿ ಎರಡನೇ ಕೋವಿಡ್ ಅಲೆ ಭಾದಿಸಿದ ಸಮಯದಲ್ಲಿ ಕುವೈತ್, ದ್ರವ ವೈದ್ಯಕೀಯ ಆಮ್ಲಜನಕ(liquid medical oxygen)ದ ಅತಿದೊಡ್ಡ ಪೂರೈಕೆದಾರನಾಗಿ ಹೊರಹೊಮ್ಮಿದಾಗ ಎರಡು ದೇಶಗಳ ಸಂಬಂಧಗಳು ಮತ್ತಷ್ಟು ಉತ್ತೇಜನವನ್ನು ಪಡೆಯಿತು. ಕುವೈತ್ ಕ್ಯಾಬಿನೆಟ್ ಭಾರತವನ್ನು ಬೆಂಬಲಿಸುವ ಹೇಳಿಕೆಯನ್ನು ನೀಡಿತು ಮತ್ತು ವಾಯುಯಾನ ಮತ್ತು ಸಮುದ್ರ ಯಾನದ ಅನೇಕ ಚಕ್ರಗಳ ಮೂಲಕ ಭಾರತಕ್ಕೆ ದ್ರವ ವೈದ್ಯಕೀಯ ಆಮ್ಲಜನಕವನ್ನು ಕಳುಹಿಸಿತು. ಈ ಹಿಂದೆ, ಕುವೈತ್‌ನಲ್ಲಿ ಕೋವಿಡ್ -19 ವಿರುದ್ಧ ಹೋರಾಡಲು ಸಹಾಯ ಮಾಡಲು ಭಾರತೀಯ ವೈದ್ಯಕೀಯ ತಂಡವು ಏಪ್ರಿಲ್ 2020 ರಲ್ಲಿ ಭಾರತದಿಂದ ಕುವೈಟ್‌ಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಿತು. ಅಲ್ಲದೇ ಫೆಬ್ರವರಿಯಲ್ಲಿ 200,000 ಡೋಸ್ ಕೋವಿಶೀಲ್ಡ್ ಲಸಿಕೆಗಳ ರವಾನೆಯನ್ನು ಕುವೈತ್‌ಗೆ ಸರಬರಾಜು ಮಾಡಲಾಗಿದೆ.

ಜೂನ್‌ನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್(S. Jaishankar) ಕುವೈಟ್‌ಗೆ ಭೇಟಿ ನೀಡಿದ್ದರು ಮತ್ತು ಕುವೈತ್‌ನ ಅಮೀರ್‌ಗೆ (ಕುವೈತ್‌ನ ದೊರೆ) ಪತ್ರವನ್ನು ನೀಡುವಂತೆ ಪ್ರಧಾನಿಯನ್ನು ಕೇಳಿದ್ದರು. ಈ ಭೇಟಿಯ ಸಂದರ್ಭದಲ್ಲಿ 'ಗೃಹ ಕಾರ್ಮಿಕರ( ಮನೆ ಕೆಲಸದವರ) ನೇಮಕಾತಿಯಲ್ಲಿ ಸಹಕಾರದ ಪತ್ರಕ್ಕೆ ಸಹಿ ಹಾಕಲಾಯಿತು ಮತ್ತು ವಿದೇಶಾಂಗ ಮತ್ತು ವಾಣಿಜ್ಯ ಸಚಿವರ ಜಂಟಿ ಸಭೆಯನ್ನು ನಡೆಸಲು ನಿರ್ಧರಿಸಲಾಯಿತು.

ಕಳೆದ ವರ್ಷ ಪೆಟ್ರೋಲಿಯಂ(petroleum) ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಕುವೈತ್‌ಗೆ ಭೇಟಿ ನೀಡಿ ಕುವೈತ್‌ನ ದಿವಂಗತ ಅಮೀರ್ ಶೇಖ್ ಸಬಾಹ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಈ ಪ್ರವಾಸವು ಸಂಬಂಧಗಳನ್ನು ನವೀಕರಿಸಲು ಸಹಾಯ ಮಾಡಿತು. ಹಿಂದೆ ಕುವೈತ್ ನಾಯಕರು ದಕ್ಷಿಣ ಏಷ್ಯಾದ ಅತಿದೊಡ್ಡ ದೇಶವಾಗಿರುವ ಭಾರತದೊಂದಿಗೆ ತಮ್ಮ ಬಾಂಧವ್ಯವನ್ನು ಪ್ರತಿಬಿಂಬಿಸುವ ಸಲುವಾಗಿ ಮಾನ್ಸೂನ್ ಸಮಯದಲ್ಲಿ ಭಾರತಕ್ಕೆ (ಮುಂಬೈ) ಭೇಟಿ ನೀಡುತ್ತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!