Ram Janmabhoomi Visit : ಅಯೋಧ್ಯೆಗೆ ಭೇಟಿ ನೀಡಲಿರುವ 11 ಮುಖ್ಯಮಂತ್ರಿಗಳು!

By Suvarna NewsFirst Published Dec 15, 2021, 3:28 PM IST
Highlights

ಬಿಜೆಪಿಯ 11 ಮುಖ್ಯಮಂತ್ರಿಗಳ ಅಯೋಧ್ಯೆ ಭೇಟಿ
ರಾಮ ಜನ್ಮಭೂಮಿಯಲ್ಲಿ ಪೂಜೆ ಸಲ್ಲಿಸಲಿರುವ ಮುಖ್ಯಮಂತ್ರಿಗಳು
ಅಯೋಧ್ಯೆಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ

ಅಯೋಧ್ಯೆ (ಡಿ.15): ದೇಶದಲ್ಲಿ ಬಿಜೆಪಿ ಆಡಳಿತರುವ ರಾಜ್ಯಗಳ 11 ಮುಖ್ಯಮಂತ್ರಿಗಳು ಬುಧವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮ ಜನ್ಮಭೂಮಿಯಲ್ಲಿ (Ram Janmabhoomi) ಪೂಜೆ ಸಲ್ಲಿಸಲಿದ್ದಾರೆ. ಕಾಶಿ ವಿಶ್ವನಾಥ ಧಾಮ ಯೋಜನೆಯ (Vishwanath Dham project) ಅನಾವರಣ ಕಾರ್ಯಕ್ರಮಕ್ಕಾಗಿ ಅಯೋಧ್ಯೆಯಲ್ಲಿರುವ ಬಿಜೆಪಿ ಆಡಳಿತವಿರುವ 11 ರಾಜ್ಯಗಳ ಮುಖ್ಯಮಂತ್ರಿಗಳು ಇದೇ ಮೊದಲ ಬಾರಿಗೆ ಒಟ್ಟಾಗಿ ರಾಮ ಜನ್ಮಭೂಮಿಗೆ ತೆರಳಿ ಪೂಜಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ 5 ಉಪಮುಖ್ಯಮಂತ್ರಿಗಳು ಮೊದಲು ಆರತಿ ಕಾರ್ಯಕ್ರಮ ನೆರೆವೇರಿಸಲಿದ್ದು ಆ ಬಳಿಕ ಅಯೋಧ್ಯೆಯ ಸರಯೂ ಘಾಟ್ ನಲ್ಲಿ ಪೂಜೆಯನ್ನು ನೆರವೇರಿಸಲಿದ್ದಾರೆ. ಆ ಬಳಿಕ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಹನುಮಾನ್ ಗರ್ಹಿ ದೇವಸ್ಥಾನಕ್ಕೆ ತೆರಳಿ ಭಗವಾನ್ ರಾಮನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai ), ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan), ಗೋವಾದ ಪ್ರಮೋದ್ ಸಾವಂತ್ (Pramod Sawant), ಅಸ್ಸಾಂನ ಹಿಮಾಂತ ಬಿಸ್ವಾ ಶರ್ಮ (Hemanta Biswa Sarma ), ಹರಿಯಾಣದ ಮನೋಹರ್ ಲಾಲ್ ಖಟ್ಟರ್ (Manohar Lal Khattar), ಜೈರಾಮ್ ಠಾಕೂರ್ (ಹಿಮಾಚಲ ಪ್ರದೇಶ), ಪುಷ್ಕರ್ ಸಿಂಗ್ ಧಾಮಿ (ಉತ್ತರಾಖಂಡ), ಪೆಮಾ ಖಂಡು (ಅರುಣಾಚಲ ಪ್ರದೇಶ), ಎನ್. ಬಿರೇನ್ ಸಿಂಗ್ (ಮಣಿಪುರ) ಹಾಗೂ ಬಿಪ್ಲಬ್ ಕುಮಾರ್ ದೇವ್ (ತ್ರಿಪುರ) ಅಯೋಧ್ಯೆಗೆ ಆಗಮಿಸಿದ್ದಾರೆ.

2019ರಲ್ಲಿ ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಆಗಮಿಸಲಿದ್ದಾರೆ. ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ರಾತ್ರಿ ಕಳೆದ ಬಳಿಕ, ಬುಧವಾರ ಮಧ್ಯಾಹ್ನದ ವೇಳೆಗೆ ಮುಖ್ಯಮಂತ್ರಿಗಳು ಅಯೋಧ್ಯೆ ತಲುಪಲಿದ್ದಾರೆ.
 

ಇಂದು ಬೆಳಿಗ್ಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶ್ರೀ ಕಾಶಿ ವಿಶ್ವನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. pic.twitter.com/o0pSGK5R6g

— Basavaraj S Bommai (@BSBommai)


ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಹೋಗುವ ಮುನ್ನ ಹನುಮಾನ್ ಗರ್ಹಿಯಲ್ಲಿ ಎಲ್ಲಾ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಲಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ, ಅರುಣಾಚಲ ಉಪಮುಖ್ಯಮಂತ್ರಿ ಚೌನಾ ಮೀನ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  (Yogi Adityanath)ಅವರ ಸಂಪುಟದ ಉಪಮುಖ್ಯಮಂತ್ರಿಗಳಾದ ಕೇಶವ್ ಮೌರ್ಯ ಹಾಗೂ ದಿನೇಶ್ ಶರ್ಮ ಕೂಡ ಕಾರ್ಯಕ್ರಮದಲ್ಲಿರಲಿದ್ದಾರೆ. ಇವರೊಂದಿಗೆ ಸಿಕ್ಕಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಾಮಂಗ್, ಮೇಘಾಲಯ ಮುಖ್ಯಮಂತ್ರಿ ಕಾನರ್ಡ್ ಸಂಗ್ಮಾ, ಮಿಜೋರಾಮ್ ಮುಖ್ಯಮಂತ್ರಿ ಝೋರಾಮ್ ತಂಗಾ ಹಾಗೂ ಪುದುಚೇರಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ ಕೂಡ ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆ ಇದೆ.

Kashi Vishwanath Dham ಪ್ರಧಾನಿ ಮೋದಿ ಕನಸಿನ ಯೋಜನೆ ಪೂರ್ಣ, ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಡಿ.13ಕ್ಕೆ ಉದ್ಘಾಟನೆ!
ಉತ್ತರ ಪ್ರದೇಶ ಭೇಟಿ ವೇಳೆ ಎಲ್ಲಾ ಮುಖ್ಯಮಂತ್ರಿಗಳು ಪಂಚಶೀಲ ಹೋಟೆಲ್ ನಲ್ಲಿ ಉಳಿಯಲಿದ್ದಾರೆ. ಉತ್ತರ ಪ್ರದೇಶದಲ್ಲಿ ವಿಧಾನಸಭೆ ಅಧಿವೇಶನ ಬುಧವಾರದಿಂದ ಆರಂಭಗೊಳ್ಳಲಿರುವ ಕಾರಣ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇತರ ಮುಖ್ಯಮಂತ್ರಿಗಳ ಜೊತೆ ಅಯೋಧ್ಯೆಗೆ ತೆರಳುವ ಸಾಧ್ಯತೆ ಕಡಿಮೆ.

ಇನ್ನು ಮೋದಿ ಅವರ ಕನಸಿನ ಯೋಜನೆ ಆಗಿರುವ ಕಾಶಿ ವಿಶ್ವನಾಥ ಧಾಮ ಯೋಜನೆ 5,000 ಹೆಕ್ಟೇರ್ ಪ್ರದೇಶದಲ್ಲಿತಲೆ ಎತ್ತಿದೆ. ಭೂಸ್ವಾದೀನ ಪಡಿಸಿದ ಬಳಿಕ 300ಕ್ಕೂ ಹೆಚ್ಚು ಕಟ್ಟಡಗಳನ್ನು ಕಡವಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಾಶಿ ವಿಶ್ವನಾಥ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಇದೀಗ ಎಲ್ಲಾ ಸೌಲಭ್ಯಗಳು ಸಿಗಲಿದೆ. ದೇಗುಲದ ಸಂಕೀರ್ಣದಲ್ಲಿ ಧ್ಯಾನ, ಆಧ್ಯಾತ್ಮಿಕ ಸಭೆ ಸಮಾರಂಭ ನಡೆಸಬಹುಗುದಾದ ಸಭಾಂಗಣವನ್ನು ನಿರ್ಮಿಸಲಾಗಿದೆ. ಇದೀಗ ಕಾಶಿ ವಿಶ್ವನಾಥ ಮಂದಿರದ ಗತ ವೈಭವ ಮರುಕಳಿಸಿದೆ. 

click me!