ಮಾಲೀಕನ ಕಾರು ಪಾರ್ಕ್ ಮಾಡಲು ನೆರವಾದ ಮುದ್ದು ನಾಯಿ; ವಿಡಿಯೋ ವೈರಲ್!

Published : May 23, 2021, 11:14 PM ISTUpdated : May 23, 2021, 11:15 PM IST
ಮಾಲೀಕನ ಕಾರು ಪಾರ್ಕ್ ಮಾಡಲು ನೆರವಾದ ಮುದ್ದು ನಾಯಿ; ವಿಡಿಯೋ ವೈರಲ್!

ಸಾರಾಂಶ

ತನ್ನ ಕೈ ಮೂಲಕ ಮಾಲೀಕನಿಗೆ ಸಿಗ್ನಲ್ ನೀಡಿದ ನಾಯಿ ಬೊಗಳೋ ಮೂಲಕ ಕಾರು ನಿಲ್ಲಿಸಲು ಸೂಚಿಸಿದ ನಾಯಿ ಮಾಲೀಕನಿಗೆ ಪಾರ್ಕಿಂಗ್ ಮಾಡಲು ನೆರವಾದ ನಾಯಿ ವಿಡಿಯೋ ವೈರಲ್

ಬೆಂಗಳೂರು(ಮೇ.23):  ಮುದ್ದು ನಾಯಿಗಳ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರಿ ಮೆಚ್ಚುಗೆ ಪಡೆದಿದೆ. ಇದೀಗ ಇದೇ ರೀತಿ ಕ್ಷಣಾರ್ಧದಲ್ಲಿ ವೈರಲ್ ಆದ ಮತ್ತೊಂದು ನಾಯಿ ವಿಡಿಯೋ ಇದೀಗ ಎಲ್ಲರ ಮನಸ್ಸು ಗೆದ್ದಿದೆ. ಮಾಲೀಕನಿಗೆ ಕಾರು ಪಾರ್ಕಿಂಗ್ ಮಾಡಲು ಸೂಚನೆಗಳನ್ನು ನೀಡುತ್ತಿರುವ ಈ ವಿಡಿಯೋ ಕೆಲ ವೈರಲ್ ವಿಡಿಯೋ ದಾಖಲೆ ಮುರಿದಿದೆ.

ತಾಯಿ ಜೊತೆ ನದಿ ದಾಟಿದ ಸಿಂಹದ ಮರಿ; ಮುದ್ದಾದ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ!.

ಈ ವಿಡಿಯೋ ಎಲ್ಲಿ ರೆಕಾರ್ಡ್ ಆಗಿದೆ ಅನ್ನೋ ಮಾಹಿತಿ ಸ್ಪಷ್ಟವಾಗಿಲ್ಲ. ಆದರೆ ನಾಯಿ ಮಾತ್ರ ವಿಶ್ವದಲ್ಲೇ ಭಾರಿ ಜನಪ್ರಿಯವಾಗಿದೆ. ಮಾಲೀಕನಿಗೆ ಕಾರು ಪಾರ್ಕಿಂಗ್ ಮಾಡಲು ನಾಯಿ, ತನ್ನ ಕೈಗಳಿಂದ ಸೂಚನೆ ನೀಡಿದೆ. ಕಾರು ಇನ್ನೂ ಹಿಂದಕ್ಕೆ ಬರಲಿ ಎಂದು ಸೂಚನೆ ನೀಡಿದೆ.  ಬಳಿಕ ಜೋರಾಗಿ ಬೊಗಳೋ ಮೂಲಕ ಕಾರು ನಿಲ್ಲಿಸಲು ಮಾಲೀಕನಿಗೆ ಹೇಳಿದೆ.

ಊಟಕ್ಕೂ ಮೊದಲ ಪ್ರಾರ್ಥನೆ..! ಈ ನಾಯಿಮರಿಗಳನ್ನು ನೋಡಿ

ನಾಯಿ ಸೂಚನೆಯಂತೆ ಮಾಲೀಕ ತನ್ನ ಕಾರನ್ನು ಸಲೀಸಾಗಿ ಪಾರ್ಕ್ ಮಾಡಿದ್ದಾರೆ. ಮುದ್ದಾದ ನಾಯಿ ಮನುಷ್ಯನ ರೀತಿಯಲ್ಲಿ ಸಂಜ್ಞೆಗಳನ್ನು, ಸೂಚನೆಗಳನ್ನು ನೀಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋವನ್ನು ಹ್ಯೂಮರ್ ಆ್ಯಂಡ್ ಎನಿಮಲ್ಸ್ ಅನ್ನೋ  ಟ್ವಿಟರ್ ಖಾತೆ ಹಂಚಿಕೊಂಡಿದೆ.

 

ಈ ಸಣ್ಣ ವಿಡಿಯೋ 2.8 ಮೀಲಿಯನ್‌ಗೂ ಅಧಿಕ ವೀಕ್ಷಣೆ ಪಡೆದಿದೆ.  2 ಲಕ್ಷಕ್ಕೂ ಅಧಿಕ ಮಂದಿ ಇಷ್ಟಪಡ್ಡಿದ್ದಾರೆ. ಇದೀಗ ಲೈಕ್ಸ್ ಹಾಗೂ ರೀಚ್ ಸಂಖ್ಯೆ ಲಕ್ಷ ಲಕ್ಷ ಏರಿಕೆಯಾಗುತ್ತಲೇ ಇದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಾಸ್‌ಪೋರ್ಟ್‌ ಡಾಕ್ಯುಮೆಂಟ್‌ಗೆ ಸ್ಮೈಲಿಂಗ್‌ ಫೋಟೋ ಯಾಕೆ ಬ್ಯಾನ್‌? ಇಲ್ಲಿದೆ ನಿಜವಾದ ಕಾರಣ..
ಕನಸು ಕೆಡವಿದ ಕಮ್ಯೂನಿಸ್ಟ್ ಭ್ರಷ್ಟ ಆಡಳಿತ ಅಂತ್ಯಗೊಳಿಸಿ ಕೇರಳದಲ್ಲಿ ಬಿಜೆಪಿ ಅರಳಿಸಿದ ಅತುಲ್ ಸ್ಪೂರ್ತಿಯ ಕತೆ