3 ಲಕ್ಷ ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ; ಅಮೆರಿಕ, ಬ್ರೆಜಿಲ್ ಬಳಿಕ ಭಾರತ!

By Suvarna NewsFirst Published May 23, 2021, 10:01 PM IST
Highlights
  • ಕೊರೋನಾ ಸಾವಿನಲ್ಲಿ 3 ಲಕ್ಷ ದಾಟಿದ ದೇಶಗಳ ಸಾಲಿನಲ್ಲಿ ಭಾರತ
  • ಅಮೆರಿಕ, ಬ್ರೆಜಿಲ್ ಬಳಿಕ ಭಾರತದಲ್ಲೂ 3 ಲಕ್ಷಕ್ಕೂ ಅಧಿಕ ಸಾವು

ನವದೆಹಲಿ(ಮೇ.23): ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಪ್ರತಿದಿನ ದಿನ ಸರಾಸರಿ 3 ಲಕ್ಷ ದಾಖಲಾಗುತ್ತಿದೆ. ಇದೇ ಸಂಖ್ಯೆ ರಾಜ್ಯಗಳ ಲಾಕ್‌ಡೌನ್‌‌ ಮೊದಲು 4 ಲಕ್ಷ ದಾಟಿತ್ತು. ಇದರ ಜೊತೆ ಸಾವಿನ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೀಗ ಕೊರೋನಾದಿಂದ ಮೃತಪಟ್ಟವರ ಅಧೀಕೃತ ಸಂಖ್ಯೆ 3 ಲಕ್ಷ ದಾಟಿದೆ. ಈ ಮೂಲಕ ಕೊರೋನಾದಿಂದ 3 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟ ದೇಶಗಳ ಪೈಕಿ ಭಾರತ 3ನೇ ಸ್ಥಾನದಲ್ಲಿದೆ.

ಚೇತರಿಕೆ ಜತೆ ಸಾವಿನ ಸಂಖ್ಯೆಯೂ ಏರಿಕೆ, ಎಚ್ಚರ ತಪ್ಪುವಂತೆ ಇಲ್ಲ

ಅಮೆರಿಕ ಹಾಗೂ ಬ್ರೆಜಿಲ್‌ನಲ್ಲಿ ಕೊರೋನಾದಿಂದ 3 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದೀಗ ಭಾರತದಲ್ಲೂ 3 ಲಕ್ಷ ಗಡಿ ದಾಟಿದೆ.   ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 2,40,842 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಕೊರೋನಾ ಸಂಖ್ಯೆ ಒಟ್ಟು 2,65,30,132ಕ್ಕೆ ಏರಿಕೆಯಾಗಿದೆ. ಇನ್ನು 24 ಗಂಟೆಯಲ್ಲಿ  ಕೊರೋನಾ ಸಾವಿನ ಸಂಖ್ಯೆ 3,741.

ಕೊರೋನಾ ತೀವ್ರವಾಗಿ ಕಾಡಿದ ಅಮೆರಿದಲ್ಲಿ 33,105,188 ಕೊರೋನಾ ಪ್ರಕರಣ ದಾಖಲಾಗಿದೆ. ಇನ್ನು ಅಮೆರಿಕದಲ್ಲಿ ಸಾವಿನ ಸಂಖ್ಯೆ 5,89,703. ಇನ್ನು ಬ್ರೆಜಿಲ್‌ನಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 448,208. ಕೊರೋನಾ ವೈರಸ್ ಪ್ರಕರಣ ಸಂಖ್ಯೆ 16,047,439 .

ಕಲಬುರಗಿ; ಒಂದು ಆಸ್ಪತ್ರೆಯಲ್ಲಿ ಜನಿಸಿದ ಮಗು,  ಇನ್ನೊಂದು ಆಸ್ಪತ್ರೆಯಲ್ಲಿ ತಂದೆ ಕೊನೆಯುಸಿರು.

ಕರ್ನಾಟಕದಲ್ಲಿ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು ಒಂದೇ ದಿನ 600ಕ್ಕೂ ಹೆಚ್ಚು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕರ್ನಾಟದಲ್ಲಿ ಸೋಂಕಿತರ ಸಂಖ್ಯೆ 24 ಲಕ್ಷ ದಾಟಿದೆ.

ಸದ್ಯ ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಕೊಂಚ ಇಳಿಕೆಯಾಗಿದೆ. ಆದರೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇತ್ತ ಲಸಿಕೆ ಪೂರೈಕೆಯೂ ವಿಳಂಬವಾಗುತ್ತಿದೆ. ಸೋಂಕಿತರ ಚಿಕಿತ್ಸೆ, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. 

click me!