ಇಬ್ಬರು ಚಿಂದಿ ಆಯುವ ಹುಡುಗರಿಗೆ ಮೂಟೆ ಮೂಟೆ ಹಳೇ 500 ರೂಪಾಯಿ ನೋಟುಗಳು ಸಿಕ್ಕಿವೆ. ಆದರೆ, ಇವೆಲ್ಲವೂ ಅಮಾನ್ಯೀಕರಣ ಆಗಿದ್ದ ನೋಟುಗಳಾಗಿದ್ದವು.
ಸುಮ್ಮನೆ ಯೋಚನೆ ಮಾಡಿನೋಡಿ, ಮನೆಯ ಬಾಗಿಲು ತೆರೆದಾಗ ಬಾಗಿಲಿನಲ್ಲಿಟ್ಟ ಚೀಲವೊಂದರಲ್ಲಿ ರಾಶಿ ರಾಶಿ ನೋಟುಗಳನ್ನು ಕಂಡಾಗ ಹೇಗಾಗಬಹುದು? ಆ ಅಚ್ಚರಿಯಲ್ಲೂ ನಿಮಗೆ ಒಂದು ಸಂತೋಷ ಮನೆ ಮಾಡಿರುತ್ತದೆ. ಇದೇ ರೀತಿಯಲ್ಲಿಯೇ ಕೊಂಚ ಭಿನ್ನವಾದ ಅನುಭವ ಇಬ್ಬರು ಚಿಂದಿ ಆಯುವ ಹುಡುಗರಿಗೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಇಬ್ಬರು ಚಿಂದಿ ಆಯುವ ಹುಡುಗರಿಗೆ ಮೂಟೆ ಮೂಟೆ ಹಳೇ ನೋಟುಗಳು ಸಿಕ್ಕಿದೆ. ಮೂಟೆಯಲ್ಲಿರುವ ಎಲ್ಲಾ ನೋಟುಗಳು ಕೂಡ 500 ರೂಪಾಯಿ ಮುಖಬೆಲೆಯದ್ದಾಗಿದ್ದವು. ಯಾರೋ ಎಸೆದು ಹೋಗಿದ್ದ ಈ ಬ್ಯಾಗ್‌ಅನ್ನು ಎತ್ತಿಕೊಂಡ ಚಿಂದಿ ಆಯುವ ಹುಡುಗರಿಗೆ ಅದರಲ್ಲಿ ಬರೀ 500 ರೂಪಾಯಿ ನೋಟು ಕಂಡಿದೆ. ಆದರೆ, ಇವೆಲ್ಲವೂ ಅಮಾನ್ಯೀಕರಣ ಆಗಿದ್ದ ನೋಟುಗಳಾಗಿದ್ದವು. ಹಾಗಂತ ಈ ನೋಟುಗಳಿಗೆ ಬೆಲೆ ಇಲ್ಲ ಎನ್ನುವುದೂ ಅವರ ಖುಷಿಯನ್ನು ಹಾಳು ಮಾಡಿಲ್ಲ. ನೋಟುಗಳಿಗೆ ಮುತ್ತಿಡುತ್ತಲೇ, ತಾವೀಗ ಶ್ರೀಮಂತರು ಎನ್ನುವ ಫೀಲ್‌ನಲ್ಲಿ ಅವರು ಎಂಜಾಯ್ ಮಾಡುತ್ತಿದ್ದರು.
ಇದನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, 'ಕಸ ತೆಗೆಯುವ ಮಕ್ಕಳಿಗೆ ಹಲವು ಬ್ಯಾಗ್‌ಗಳಲ್ಲಿ ಹಳೆಯ 500 ರೂಪಾಯಿ ಕರೆನ್ಸಿ ನೋಟುಗಳು ಸಿಕ್ಕಿವೆ..' ಹೊಸ ಕರೆನ್ಸಿ ನೋಟುಗಳನ್ನು ಠೇವಣಿ ಮಾಡಲು ಮತ್ತು ತೆಗೆದುಕೊಳ್ಳಲು ಆರ್‌ಬಿಐ ಅವರಿಗೆ ಅವಕಾಶ ನೀಡಬೇಕು' ಎಂದು ಮನವಿ ಮಾಡಲಾಗಿದೆ. ಚಿಂದಿ ಆಯುವ ಮಕ್ಕಳ ರಿಯಾಕ್ಷನ್‌ಅನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಮುನ್ನ ವಿಡಿಯೋ ಕ್ರಿಯೆಟರ್ ಮಕ್ಕಳೊಂದಿಗೆ ಮಾತನಾಡುತ್ತಿರುವುದು ಕೂಡ ದಾಖಲಾಗಿದೆ.
ತಮ್ಮ ಕೈಗಳಲ್ಲಿ ಕ್ಯಾಶ್‌ನ ಬಂಡಲ್ ಹಿಡಿದುಕೊಂಡು ಸಂಭ್ರಮಿಸುತ್ತಿರುವ ಅವರ ಬಳಿಗೆ ಬರುವ ವಿಡಿಯೋ ಕ್ರಿಯೇಟರ್, ತನಗೊಂದು ನೋಟ್‌ನೀಡುವಂತೆ ಹೇಳುತ್ತಾನೆ. ಮಕ್ಕಳು ಕೂಡ ಯಾವ ಸಮಸ್ಯೆಯೂ ಇಲ್ಲದೆ ತಮ್ಮಲ್ಲಿನ ನೋಟ್ ನೀಡುತ್ತಾರೆ. ಆ ಹಂತದಲ್ಲಿ ಅವರಿಗೆ ತಿಳಿಸುವ ವಿಡಿಯೋ ಕ್ರಿಯೇಟರ್, ಈ ಕರೆನ್ಸಿ ನೋಟುಗಳಿಗೆ ಯಾವುದೇ ಮೌಲ್ಸವಿಲ್ಲ, ಇದನ್ನು ಚಲಾವಣೆಯಿಂದ ವಾಪಾಸ್ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ. 'ನೋಡೋ ಹುಡುಗ್ರಾ, ಈ ಕ್ಯಾಶ್‌ನ ಬಂಡಲ್‌ಗಳಿಗೆ ಯಾವುದೇ ಮೌಲ್ಯವಿಲ್ಲ' ಎಂದಿದ್ದಾರೆ. ಕರೆನ್ಸಿ ನೋಟುಗಳಿಗೆ ಯಾವುದೇ ಮೌಲ್ಯವಿಲ್ಲ ಮತ್ತು ಹೊಸ ನೋಟುಗಳೊಂದಿಗೆ ಬದಲಾಯಿಸಲಾಗುವುದಿಲ್ಲ ಎಂದು ತಿಳಿದಿದ್ದರೂ, ಅವರು ಹಳೇ ನೋಟುಗಳನ್ನು ಹಿಡಿದು, ಅದಕ್ಕೆ ಮುತ್ತಿಡುವುದನ್ನು ಮುಂದುವರಿಸಿದ್ದರು.
ಹೊರಬಿತ್ತು ಜೇಟ್ಲಿ ಮನದಾಳದ ಮಾತು: ನೋಟ್ ಬ್ಯಾನ್, ಇದು ಸಿಕ್ರೇಟ್ ಪ್ಲ್ಯಾನ್!
ಈಗಲೂ 500 ರೂಪಾಯಿ ನೋಟು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದೇ?: ಆರ್‌ಬಿಐ ನಿಯಮದ ಪ್ರಕಾರ, ಅಮಾನ್ಯೀಕರಣಗೊಂಡಿರುವ 500 ರೂಪಾಯಿ ನೋಟುಗಳನ್ನು ಹೊಸ ನೋಟುಗಳೊಂದಿಗೆ ಬದಲಾವಣೆ ಮಾಡಿಕೊಳ್ಳಲು ಈಗ ಸಾಧ್ಯವಿಲ್ಲ. 2016ರ ನವೆಂಬರ್‌ನಲ್ಲಿ ಮಹಾತ್ಮಾ ಗಾಂಧಿ ಸಿರೀಸ್‌ನ ಎಲ್ಲಾ 500 ಹಾಗೂ 1 ಸಾವಿರ ರೂಪಾಯಿಯ ಬ್ಯಾಂಕ್ ನೋಟುಗಳನ್ನು ಅಮಾನ್ಯ ಮಾಡಲಾಗಿದೆ. ನಾಗರೀಕರಿಗೆ 2016ರ ಡಿಸೆಂಬರ್ 30ರ ಒಳಗಾಗಿ ಈ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ಅವರುನ್ನು ಕಾನೂನಾತ್ಮಕವಾಗಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ.
ಪ್ರತಿಷ್ಠಿತ ಸ್ಟಾರ್ ಹೊಟೇಲ್ ನಲ್ಲಿ ಕಂತೆ ಕಂತೆ ಹಳೆ ನೋಟು!
Trash picker children found many bags full of old demonetized 500 rupees currency notes.
RBI should give them chance to deposit and take new currency notes :) pic.twitter.com/nEGi4U0OvY