
ನವದೆಹಲಿ (ಡಿ.31): ವಾಹನಗಳಿಂದ ಕಿಕ್ಕಿರಿದು ತುಂಬಿ ತುಳುಕುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿಯ ಮಳೆ ಕಂಡು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ಉಪನಗರ ಹರಿಯಾಣದ ಗುರ್ಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಹೋಗುತ್ತಿರುವ ವಾಹನಗಳ ಮೇಲೆ ಬಿಳುತ್ತಿರುವ ಬೆಂಕಿಯ ಕಿಡಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೀವ್ರ ಚಳಿಯಿಂದ ತತ್ತರಿಸಿರುವ ದೆಹಲಿಯಲ್ಲಿ ಬೆಂಕಿಯ ಮಳೆ ಎಲ್ಲಿಂದ ಬಂತಪ್ಪ ಅಂತಾ ಅಂತೀರಾ? ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ರಾಷ್ಟ್ರೀಯ ಹೆದ್ದಾರಿ 8ರಲ್ಲಿ ವಾಣಿಜ್ಯ ಜಾಹೀರಾತು ಫಲಕ ಅಳವಡಿಸಲು ವೆಲ್ಡಿಂಗ್ ಕೆಲಸ ಮಾಡಲಾಗುತ್ತಿದೆ. ಕೆಳಗಡೆ ವಾಹನಗಳು ಓಡಾಡುತ್ತಿವೆ. ಯಾವುದೇ ಸುರಕ್ಷತೆ ಕ್ರಮ ಇಲ್ಲದೆ ವೆಲ್ಡಿಂಗ್ ಮಾಡಲಾಗುತ್ತಿದ್ದು, ಅದರ ಬೆಂಕಿಯ ಕಿಡಿಗಳು ವಾಹನಗಳ ಮೇಲೆ ಮಳೆ ಹನಿಗಳಂತೆ ಉದುರುತ್ತಿರುವುದ ವಿಡಿಯೋ ದೃಶ್ಯದಲ್ಲಿ ಸೆರೆಯಾಗಿದೆ. ಚಲಿಸುತ್ತಿದ್ದ ಕಾರು, ಬಸ್‌ಗಳಲ್ಲದೇ ಬೈಕ್ ಗಳ ಮೇಲೆ ಕಿಡಿ ಬಿದ್ದಿದೆ. ಬೈಕ್ ಚಾಲಕ ಮೇಲೆ ಕಿಡಿ ಬಿದ್ದಿದ್ದು ಕೆಲವರಿಗೆ ತಲೆ ಬಟ್ಟೆ ಮೇಲೆ ಬಿದ್ದು ಸುಟ್ಟಿವೆ.
Watch | ಒಂಟಿಯಾಗಿ ಕಂಡರೆ ಕೆನ್ನೆಗೆ ಚಪ್ಪರಿಸಿ ಪರಾರಿ, ಯುವಕನ ವರ್ತನೆ ಕಂಡು ಪೊಲೀಸರೇ ದಂಗು!
ಘಟನೆಯ ವಿಡಿಯೋವನ್ನು ವೈದ್ಯರೊಬ್ಬರು ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಗುರ್ಗಾಂವ್‌ನ NH8 ನಲ್ಲಿನ ದೃಶ್ಯಾವಳಿ. ಸಂಚಾರ ವ್ಯತ್ಯಯ ಅಥವಾ ನಿಯಂತ್ರಣವಿಲ್ಲ. ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲ. ಅನಾಹುತವಾದರೆ ಯಾರು ಹೊಣೆ ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ, ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಭದ್ರತೆಯ ಲೋಪದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದೆ ಈ ರೀತಿ ಆಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗುವುದು ಸಂಚಾರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ