ಸೀಮಾ ಹೈದರ್ ಪ್ರೀತಿ ಕತೆ ಗೊತ್ತೆ ಇದೆ. ಇದೀಗ ಭಾರತದ ಯುವಕನಿಗೆ ಪಾಕಿಸ್ತಾನದ ಯುವತಿ ಜೊತೆ ಫೇಸ್‌ಬುಕ್ ಮೂಲಕ ಪ್ರೀತಿ ಶುರುವಾಗಿದೆ. ತನ್ನ ಪ್ರೀತಿಯ ಹುಡುಗಿಯನ್ನು ಭೇಟಿಯಾಗುವ ಆತುರು ಹೆಚ್ಚಾಗಿದೆ. ತವಕ, ಉತ್ಸಾಹ ಇಮ್ಮಡಿಯಾಗಿದೆ. ಹಿಂದೂ ಮುಂದೂ ನೋಡಿಲ್ಲ. ಪಾಕಿಸ್ತಾನದ ಗಡಿ ದಾಟಿ ಪ್ರೀತಿಯ ಪಾರಿವಾಳ ಹಿಡಿಯಲು ಹೊರಟ ಯುಪಿ ಯುವಕ ಏನಾದ?
ನವದೆಹಲಿ(ಡಿ.31) ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಗಡಿಗಳಿಲ್ಲ, ಭಾಷೆ, ದೇಶಗಳ ಹಂಗಿಲ್ಲ, ಎಲ್ಲಿ ಯಾವಾಗ ಬೇಕಾದರು ಹುಟ್ಟುತ್ತೆ ಪ್ರೀತಿ. ಹೀಗಾಗಿಯೇ ಈಗಾಗಲೇ ಗಡಿಯಾಚೆಗಿನ ಪ್ರೀತಿ ಭಾರಿ ಸದ್ದು ಮಾಡಿದೆ. ಸೀಮಾ ಹೈದರ್ ಸೇರಿದಂತೆ ಹಲವು ಘಟನೆಗಳು ಕಣ್ಣ ಮುಂದಿದೆ. ಇದೀಗ ಉತ್ತರ ಪ್ರದೇಶದ 30 ವರ್ಷದ ಯುವಕ ಬಾದಲ್ ಬಾಬುಗೆ ಫೇಸ್‌ಬುಕ್ ಮೂಲಕ ಪಾಕಿಸ್ತಾನದ ಯುವತಿ ಜೊತೆ ಶುರುವಾದ ಪ್ರೀತಿ ಗಾಢವಾಗಿದೆ.
ಹುಚ್ಚು ಪ್ರೀತಿಯನ್ನು ಹಚ್ಚಿಕೊಂಡ ನಲ್ಲ, ಮೆಚ್ಚಿಕೊಂಡ ಪ್ರೀತಿ ಮುಚ್ಚಿಹೋಗದಂತೆ ಕಾಪಾಡಲು ಹಿಂದೂ ಮುಂದೂ ನೋಡದೆ ಪಾಕಿಸ್ತಾನದ ಗಡಿ ದಾಟಿ ತೆರಳಿದ್ದಾನೆ. ಇದೀಗ ಬಾದಲ್ ಬಾಬು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಾನೆ.
ಅಲಿಘಡ ಜಿಲ್ಲೆಯ ಬಾದಲ್ ಬಾಬು ಫೇಸ್‌ಬುಕ್‌ನಲ್ಲೇ ಹೆಚ್ಚು ಹೊತ್ತು ಹೊರಳಾಡುತ್ತಿದೆ. ಹೀಗಿರುವಾಗ ಪಾಕಿಸ್ತಾನದ ಯುವತಿಯೊಬ್ಬಳ ಪರಿಚಯವಾಗಿದೆ. ಮೇಸೇಜ್ ಮೇಸೇಜ್ ಸಲಿಗೆ ಶುರುವಾಗಿ ಕಣ್ ಕಣ್ಣ ಸಲಿಗೆ ಮಟ್ಟಕ್ಕೆ ಹೋಗಿದೆ. ಬಾದಲ್ ಬಾಬು ಹೃದಯದಲ್ಲಿ ಜೋಕಾಲಿ ಆಡಲು ಶುರುಮಾಡಿದ ಪಾಕಿಸ್ತಾನ ಹುಡುಗಿ ಜೊತೆಗಿನ ಪ್ರೀತಿ ಗಾಢವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಯ ಅರ್ಥ ಪಡೆದಿದೆ. ಅರೇ ಪ್ರೀತಿ ಆನ್‌ಲೈನ್‌ನಲ್ಲೇ ಇದ್ದರೆ ಸಕ್ಸಸ್ ಆಗುವುದು ಹೇಗೆ? ಈ ಆಲೋಚನೆ, ತಳಮಳ ಬಾದಲ್ ಬಾಬು ತಲೆ ಒಳಗೂ ಶುರುವಾಗಿದೆ.
ಕ್ಷಮೆ ಜೊತೆ 3 ಕೋಟಿ ರೂ ಪಾವತಿಸಿ, ಪಾಕ್‌ನಿಂದ ಬಂದ ಸೀಮಾ ಹೈದರ್ ವಿರುದ್ಧ ಮಾನನಷ್ಟ ಕೇಸ್!
ಹೇಗಾದರೂ ಮಾಡಿ ಪಾಕಿಸ್ತಾನ ತನ್ನ ಪ್ರೀತಿಯ ಹುಡುಗಿಯನ್ನು ಭೇಟಿಯಾಗಬೇಕು. ಒಂದೇ ಒಂದು ಸಾರಿ ಕಣ್ಣ ಮುಂದೆ ಬಾರೆ ಎಂದು ಅದೆೇನೆ ಪ್ರಯತ್ನ ಮಾಡಿದರೂ ಯಾವುದೂ ಕೈಗೂಡುತ್ತಿರಲಿಲ್ಲ. ಕಾರಣ ಆಕೆ ಪಾಕಿಸ್ತಾನದಲ್ಲಿ, ಬಾದಲ್ ಬಾಬು ಉತ್ತರ ಪ್ರದೇಶದ ಅಲಿಘಡದಲ್ಲಿ. ಅಂತರ ಮಾತ್ರವಲ್ಲ, ಎರಡೂ ಬದ್ಧವೈರಿ ರಾಷ್ಟ್ರ.
ಆದರೆ ಪ್ರೀತಿ ಕೇಳಬೇಕಲ್ಲ. ಬಾದಲ್ ಬಾಬು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕು ಆರಾಮಾಗಿ ಸಾಗಿಸುತ್ತಿದ್ದ. ಇತ್ತ ಪಾಕಿಸ್ತಾನದ ಹುಡುಗಿ ಜೊತೆಗಿನ ಪ್ರೀತಿ ಬಾದಲ್ ಬಾಬು ಬದುಕಿನಲ್ಲಿ ಹೊಸ ಕನಸಿನ ಗೋಪುರ ಕಟ್ಟುವಂತೆ ಮಾಡಿತ್ತು. ತನ್ನ ಪ್ರೀತಿಯನ್ನು ಭೇಟಿಯಾಬೇಕು. ಆಕೆಯನ್ನು ನೋಡಬೇಕು, ಮಾತನಾಡಬೇಕು ಅನ್ನೋ ತವಕ ಹೆಚ್ಚಾಯಿತು. ಪಾಕಿಸ್ತಾನದಿಂದ ಆಕೆ ಭಾರತಕ್ಕೆ ಬರವುದು ಸುಲಭದ ಮಾತಾಗಿರಲಿಲ್ಲ. ಮೊದಲೇ ಭಾರತ ಅಂದರೆ ಪಾಕಿಸ್ತಾನದಲ್ಲಿ ಪೋಷಕರು ಉರಿದು ಬೀಳುತ್ತದ್ದರು. ಹೀಗಾಗಿ ಆಕೆಯನ್ನು ಭಾರತಕ್ಕೆ ಕರೆಸುವ ಪ್ಲಾನ್ ಕೈಗೂಡಲಿಲ್ಲ. ಇತ್ತ ತಾನೇ ಬರುವುದಾಗಿ ಆಕೆಗೆ ಹೇಳಿದ್ದಾನೆ.
ಪಾಕಿಸ್ತಾನಕ್ಕೆ ತೆರಲು ಈತನ ಬಳಿ ಪಾಸ್‌ಪೋರ್ಟ್ ಇಲ್ಲ. ವೀಸಾ ಮಾತು ಪಕ್ಕಕ್ಕಿರಲಿ. ಆದರೆ ಭೇಟಿಯಾಗದೇ ಇರುವುದು ಹೇಗೆ? ಸರಿ ಎಂದು ಭಾರತ ಪಾಕಿಸ್ತಾನ ಗಡಿಗೆ ತೆರಳಿದ್ದಾನೆ. ಬಳಿಕ ಇತ್ತ ಭಾರತೀಯ ಸೇನೆ ಕಣ್ತಪ್ಪಿಸಿ, ಅತ್ತ ಪಾಕಿಸ್ತಾನ ಸೇನೆ ಕಣ್ಣಿಗೂ ಬೀಳದಂತೆ ಗಡಿ ದಾಟಿದ್ದಾನೆ. ವಿಶೇಷ ಅಂದರೆ ಗಡಿ ದಾಟಿದ ಈತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹೌದ್ದೀನ್ ಪಟ್ಟಣ ತಲುಪಿದ್ದಾನೆ. ಪ್ರೀತಿಯ ಗೆಳತಿಯ ಭೇಟಿ ಮಾಡುವ ಮೊದಲೇ ಪಾಕಿಸ್ತಾನ ಪಂಜಾಬ್ ಪೊಲೀಸರು ಬಾದಲ್‌ನ ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ಆರಂಭಗೊಂಡಿದೆ. ಈ ವೇಳೆ ತನ್ನ ಪ್ರೀತಿಯ ಹುಡುಗಿ ಭೇಟಿಯಾಗಲು ಬಂದಿರುವುದಾಗಿ ಘಟನೆ ವಿವರಿಸಿದ್ದಾನೆ. ಇದಕ್ಕೂ ಮೊದಲು 2 ಬಾರಿ ಗಡಿ ದಾಟಲು ಪ್ರಯತ್ನಿಸಿರುವುದಾಗಿಯೂ ತಿಳಿಸಿದ್ದಾನೆ.
ಸೀಮಾ, ಅಂಜು ಬಳಿಕ ಭಾರತ-ಬಾಂಗ್ಲಾ ಲವ್ ಸ್ಟೋರಿ, ಆದ್ರೆ ಕಹಾನಿಯಲ್ಲಿ ಹಲವು ಟ್ವಿಸ್ಟ್!
ಬಾದಲ್‌ಗೆ ಪಾಕಿಸ್ತಾನ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಜನವರಿ 10 ರಂದು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಯಾವುದೇ ದಾಖಲೆ ಇಲ್ಲದ ಬಾದಲ್ ಬಾಬು ಇದೀಗ ಪಾಕಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿದದ್ದಾನೆ.