ಹಿಂದು ಹಿಂಸಾಚಾರಿ: ರಾಹುಲ್‌ ಹೇಳಿಕೆ ಪರ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮೀಜಿ ಬ್ಯಾಟಿಂಗ್

By Kannadaprabha News  |  First Published Jul 9, 2024, 12:58 PM IST

ಹಿಂದುಗಳೆಂದು ಹೇಳಿಕೊಳ್ಳುವವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಮಾಡಿದ ಭಾಷಣ ತೀವ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಆ ಹೇಳಿಕೆ ಸಂಬಂಧ ಜ್ಯೋತಿರ್ಮಠದ 46ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಬೆಂಬಲ ಸೂಚಿಸಿದ್ದಾರೆ.


ನವದೆಹಲಿ: ಹಿಂದುಗಳೆಂದು ಹೇಳಿಕೊಳ್ಳುವವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಮಾಡಿದ ಭಾಷಣ ತೀವ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಆ ಹೇಳಿಕೆ ಸಂಬಂಧ ಜ್ಯೋತಿರ್ಮಠದ 46ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಬೆಂಬಲ ಸೂಚಿಸಿದ್ದಾರೆ. ರಾಹುಲ್‌ ಗಾಂಧಿ ಅವರ ಸಂಪೂರ್ಣ ಭಾಷಣವನ್ನು ಗಮನವಿಟ್ಟು ಆಲಿಸಿದರೆ, ಅವರು ಹಿಂದುತ್ವ ಹಿಂಸೆಯನ್ನು ತಿರಸ್ಕರಿಸುವುದನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ರಾಹುಲ್‌ ಹೇಳಿಕೆಯನ್ನು ತಿರುಚಿ ಟೀಕಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೊನ್ನೆ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವೇಳೆ ವಂದನಾ ನಿರ್ಣಯದ ವೇಳೆ ರಾಹುಲ್ ಗಾಂಧಿ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು, ಕೇವಲ ಹಿಂಸೆಯ ಭಾಷೆಯನ್ನು ಮಾತನಾಡುತ್ತಾರೆ ಎಂದು ಬಿಜೆಪಿ ನಾಯಕರ ಮೇಲೆ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು. ಅವರ ಈ ಮಾತಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್‌ ಗಾಂಧಿ ಹೇಳಿಕೆ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಆಡಳಿತ ಪಕ್ಷಗಳ ಸದಸ್ಯರು ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಸಮಸ್ತ ಹಿಂದೂ ಸಮಾಜವನ್ನು ಹಿಂಸಾವಾದಿಗಳು ಎಂದು ಹೇಳುವುದು ಗಂಭೀರ ಟೀಕೆ ಎಂದು ಎಚ್ಚರಿಸಿದ್ದರು. ಲೋಕಸಭೆಯ ವಿಪಕ್ಷ ನಾಯಕರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂವಿಧಾನ ತಮಗೆ ಕಲಿಸಿದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ರಾಹುಲ್‌ ಗಾಂಧಿ ಮಾತಿಗೆ ಮಧ್ಯಪ್ರವೇಶಿಸಿ ಎಚ್ಚರಿಸಿದ್ದರು. 

Tap to resize

Latest Videos

undefined

ಅಗ್ನಿವೀರ್ ಬಗ್ಗೆ ರಾಜನಾಥ್ ಸಿಂಗ್ ಸುಳ್ಳು ಹೇಳುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಸೇನೆ ತಿರುಗೇಟು

ಆದರೆ ಈಗ ಜ್ಯೋತಿರ್ಮಠದ 46ನೇ ಸ್ವಾಮೀಜಿ ಶಂಕರಾಚಾರ್ಯ ಅವರು ರಾಹುಲ್ ಪರ ನಿಂತಿದ್ದು, ನಾವು ರಾಹುಲ್ ಭಾಷಣವನ್ನು ಗಮನವಿಟ್ಟು ಕೇಳಿದ್ದು, ಅವರು ತಮ್ಮ ಭಾಷಣದಲ್ಲಿ ಹಿಂದುವಾದವೂ ಹಿಂಸೆಯನ್ನು ನಿರಾಕರಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ರಾಹುಲ್ ಪರ ಬ್ಯಾಟಿಂಗ್ ಮಾಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರ ಭಾಷಣದ ಆಯ್ದ ಭಾಗವನ್ನು ಮಾತ್ರ ಪ್ರಸಾರ ಮಾಡಿರುವುದಕ್ಕೆ ಟೀಕಿಸಿದ ಶಂಕರಾಚಾರ್ಯರು,  ಇದೊಂದು ತಪ್ಪು ದಾರಿಗೆಳೆಯುವ ಅನೈತಿಕ ಕೆಲಸವಾಗಿದೆ ಎಂದು ದೂರಿದ್ದಾರೆ. ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಶಂಕರಾಚಾರ್ಯರು ಆಗ್ರಹಿಸಿದರು. ಈ ಹಿಂದೆ ರಾಹುಲ್ ಸೋದರಿ ಪ್ರಿಯಾಂಕಾ ಗಾಂಧಿ ಕೂಡ ತನ್ನ ಸೋದರನ ಮೇಲಿನ ಆರೋಪವನ್ನು ಅಲ್ಲಗಳೆದಿದ್ದರು. ರಾಹುಲ್ ಎಂದಿಗೂ ಹಿಂದೂಗಳ ವಿರುದ್ಧ ಮಾತನಾಡಲು ಸಾಧ್ಯವಿಲ್ಲ, ರಾಹುಲ್ ಹೇಳಿಕೆ ಕೇವಲ ಬಿಜೆಪಿ ಮತ್ತು ಅದರ ನಾಯಕರನ್ನು ಗುರಿಯಾಗಿರಿಸಿಕೊಂಡಿವೆ ಎಂದು ಅವರು ಹೇಳಿದರು.

ತನ್ನ ವಿರುದ್ಧವೇ ಕಿರುಚಿ ಕಿರುಚಿ ಪ್ರತಿಭಟನೆ ಮಾಡುತ್ತಿದ್ದ ವಿಪಕ್ಷದವರಿಗೆ ನೀರು ಕೊಟ್ಟ ಪ್ರಧಾನಿ: ವೀಡಿಯೋ ವೈರಲ್

click me!