ಲಕ್ನೋ: ರಕ್ಷಣಾ ಪಡೆಗಳಿಗೆ ನೇಮಕ ಮಾಡುವ ಸಲುವಾಗಿ ಸರ್ಕಾರ ಜಾರಿಗೊಳಿಸಿದ ಹೊಸ ನೇಮಕಾತಿ ಯೋಜನೆ ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಹಲವು ರೈಲು ಬಸ್ ಗಳಿಗೆ ಬೆಂಕಿ ಹಚ್ಚಿದ್ದು, ಹಲವೆಡೆ ಲಕ್ಷಾಂತರ ಮೊತ್ತದ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ. ಈ ನಡುವೆ ಈ ರೀತಿ ದಾಂಧಲೆ ನಡೆಸಿ ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಿದ ಆರೋಪದಲ್ಲಿ ಪೊಲೀಸರು ಅನೇಕರನ್ನು ಬಂಧಿಸಿದ್ದಾರೆ. ಇವರಲ್ಲಿ ಹಲವು ಕಾಂಗ್ರೆಸ್ ನಾಯಕರು ಕೂಡ ಇದ್ದು, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಪರಾಗ್ ಪನ್ವರ್ ಎಂಬಾತನನ್ನು ಕೋಡ ಪೊಲೀಸರು ಬಂಧಿಸಿದ್ದಾರೆ.
ಇವರೆಲ್ಲರೂ ಸೇನಾ ಆಕಾಂಕ್ಷಿಗಳ ಸೋಗಿನಲ್ಲಿ ಹಿಂಸಾಚಾರಕ್ಕೆ ಇಳಿದು ದಾಂಧಲೆ ಎಬ್ಬಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಹೊಸದಾಗಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯ ವಿರುದ್ಧ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಸೃಷ್ಟಿಸಲು ಸೇನೆಯ ಆಕಾಂಕ್ಷಿಗಳನ್ನು (Army aspirants)ಪ್ರಚೋದಿಸಲು ಸಂಚು ರೂಪಿಸಿದ ಆರೋಪದ ಮೇಲೆ ಐದು ನಕಲಿ ಸೇನಾ ಆಕಾಂಕ್ಷಿಗಳನ್ನು ಬಂಧಿಸಿದ್ದಾರೆ ಜೂನ್ 18 ರಂದು ಉತ್ತರ ಪ್ರದೇಶದ (Uttar Pradesh) ಸಹರಾನ್‌ಪುರ ಪೊಲೀಸರು (Saharanpur Police) ಬಂಧಿಸಿದ್ದಾರೆ. ಬಂಧಿತ ಸಂಚುಕೋರರಲ್ಲಿ ಒಬ್ಬರು 26 ವರ್ಷದ ಪರಾಗ್ ಪನ್ವಾರ್ ಆಗಿದ್ದು, ಈತ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (ಎನ್‌ಎಸ್‌ಯುಐ) ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಪನ್ವಾರ್ ಹೊರತುಪಡಿಸಿ, 34 ವರ್ಷದ ಸಂದೀಪ್ ಸಮಾಜವಾದಿ ಪಕ್ಷದೊಂದಿಗೆ (Samajwadi Party) ಸಂಬಂಧ ಹೊಂದಿದ್ದರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿದ್ದರು.
NewsHour ಕೇಂದ್ರದ ಅಗ್ನಿಪಥ ಯೋಜನೆಗೆ ಅಗ್ನಿಕುಂಡವಾದ ಭಾರತ!
ಇವರಲ್ಲದೇ ರಾಜಕೀಯ ನಂಟು ಹೊಂದಿರುವ 26 ವರ್ಷದ ಮೋಹಿತ್ ಚೌಧರಿ (Mohit Chaudhary), 28 ವರ್ಷದ ಸೌರಭ್ ಕುಮಾರ್ (Saurabh Kumar) ಮತ್ತು 26 ವರ್ಷದ ಉದಯ್ (Uday) ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಆಕಾಂಕ್ಷಿಗಳು ಸೇನಾ ನೇಮಕಾತಿಗೆ ನಿಗದಿತ ವಯಸ್ಸಿನ ಮಿತಿಯನ್ನು ಮೀರಿದ್ದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರಲ್ಲಿ ಯಾರೂ ಸಶಸ್ತ್ರ ಪಡೆಗಳಿಗೆ ನೇಮಕಾತಿಗೆ ತಯಾರಿ ನಡೆಸಿರಲಿಲ್ಲ ಮತ್ತು ಅವರೆಲ್ಲರೂ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಂಬಂಧವನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Left Right & Centre: ಏನಿದು ಅಗ್ನಿಪಥ ಯೋಜನೆ? ಯಾಕಿಷ್ಟು ವಿರೋಧ?
ಈ ಬಗ್ಗೆ ಮಾತನಾಡಿದ ಸಹರಾನ್‌ಪುರದ ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ತೋಮರ್ (Akash Tomar), ರಾಂಪುರ್ ಮಣಿಹರನ್ ಪೊಲೀಸರು ಐವರು ನಕಲಿ ಸೇನಾ ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ಇಬ್ಬರು ವಿವಿಧ ರಾಜಕೀಯ ಸಂಘಟನೆಗಳ ಪದಾಧಿಕಾರಿಗಳಾಗಿದ್ದು, ಉಳಿದ ಮೂವರು ರಾಜಕೀಯ ಪಕ್ಷಗಳ ಸದಸ್ಯರು. ಈ ಐವರು ಸಶಸ್ತ್ರ ಪಡೆಗಳ ಆಕಾಂಕ್ಷಿಗಳನ್ನು ಆಂದೋಲನ ಮತ್ತು ಪ್ರತಿಭಟನೆಗೆ ಪ್ರಚೋದಿಸುತ್ತಿದ್ದರು. ಆರೋಪಿಗಳಲ್ಲಿ ಒಬ್ಬರಾದ ಪರಾಗ್ ಪನ್ವಾರ್ ರಾಜಕೀಯ ಪಕ್ಷವೊಂದರ ಜಿಲ್ಲಾಧ್ಯಕ್ಷರಾಗಿದ್ದಾರೆ. ಸಂದೀಪ್ ಚೌಧರಿ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ