ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ: ಸಚಿವೆಯ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

By Anusha Kb  |  First Published Jun 14, 2023, 11:16 PM IST

ಕುಕಿ ಹಾಗೂ ಮೈತಿಯಿ ಸಮುದಾಯದ ಗಲಾಟೆಯಿಂದಾಗಿ ಮಣಿಪುರ ಬೂದಿ ಮುಚ್ಚಿದ ಕೆಂಡದಂತಿದ್ದು, ಇಂದು ಮತ್ತೆ ನಡೆದ ಹಿಂಸಾಚಾರದಲ್ಲಿ  ದುಷ್ಕರ್ಮಿಗಳು ಮಣಿಪುರದ ಸಚಿವೆ ನೆಮ್ಚಾ ಕಿಪ್ಜೆನ್ ಅವರ ಅಧಿಕೃತ ನಿವಾಸಕ್ಕೆ ಬೆಂಕಿ ಹಚ್ಚಿ ಧ್ವಂಸ ಮಾಡಿದ್ದಾರೆ.


ಮಣಿಪುರ: ಕುಕಿ ಹಾಗೂ ಮೈತಿಯಿ ಸಮುದಾಯದ ಗಲಾಟೆಯಿಂದಾಗಿ ಮಣಿಪುರ ಬೂದಿ ಮುಚ್ಚಿದ ಕೆಂಡದಂತಿದ್ದು, ಇಂದು ಮತ್ತೆ ನಡೆದ ಹಿಂಸಾಚಾರದಲ್ಲಿ  ದುಷ್ಕರ್ಮಿಗಳು ಮಣಿಪುರದ ಸಚಿವೆ ನೆಮ್ಚಾ ಕಿಪ್ಜೆನ್ ಅವರ ಅಧಿಕೃತ ನಿವಾಸಕ್ಕೆ ಬೆಂಕಿ ಹಚ್ಚಿ ಧ್ವಂಸ ಮಾಡಿದ್ದಾರೆ. ಇಂಫಾಲದಲ್ಲಿರುವ ನೆಮ್ಚಾ ಕಿಪ್ಜೆನ್ ಅವರ ಮನೆ, ಹಿಂಸಾಚಾರಕ್ಕಿಳಿದ ಜನರ ಆಕ್ರೋಶದ ಬೆಂಕಿಗೆ ಆಹುತಿಯಾಗಿದೆ. ಸಂಜೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ. 

ಮಂಗಳವಾರ ಕಾಂಗ್‌ಪೋಕ್ಪಿ ಜಿಲ್ಲೆಯ ಖಮೆನ್‌ಲೋಕ್ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಒಂಬತ್ತು ಜನರು ಬಲಿಯಾಗಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಗ್ರಾಮದಲ್ಲಿ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿ ಬೆಂಕಿ ಹಚ್ಚಿದ್ದರು.  ವರದಿಗಳ ಪ್ರಕಾರ,  ಖಮೆನ್ಲೋಕ್ ಗ್ರಾಮದಲ್ಲಿ ದುಷ್ಕರ್ಮಿಗಳು ಹಲವಾರು ಮನೆಗಳಿಗೆ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ ಹಾಗೆಯೇ ತಮೆಂಗ್ಲಾಂಗ್ (Tamenglong) ಜಿಲ್ಲೆಯ ಗೋಬಜಾಂಗ್‌ನಲ್ಲಿ (Gobajang) ನಡೆದ ಹಿಂಸಾಚಾರದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.

Tap to resize

Latest Videos

ಮಣಿಪುರ ಹಿಂಸಾಚಾರ,ಆಸ್ಪತ್ರೆ ತೆರಳುತ್ತಿದ್ದ ತಾಯಿ-ಮಗನ ಜೀವಂತ ಸುಟ್ಟ ಪ್ರತಿಭಟನಾಕಾರರು!

ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತೆ ಹದಗೆಡುವುದನ್ನು ತಡೆಯುವುದಕ್ಕಾಗಿ ಭದ್ರತಾ ಸಿಬ್ಬಂದಿ ಹೆಚ್ಚಿನ ಅಪಾಯವಿರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದನ್ನು ಮುಂದುವರೆಸಿದ್ದಾರೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ, ತೆಂಗ್ನೌಪಾಲ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಿಂದ ಮತ್ತು 63  ಬಂದೂಕು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಣಿಪುರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಪ್ರಕಾರ, ಇದುವರೆಗೆ ಒಟ್ಟು 1,040 ಶಸ್ತ್ರಾಸ್ತ್ರಗಳು, 13,601 ಮದ್ದುಗುಂಡುಗಳು ಮತ್ತು 230 ವಿವಿಧ ರೀತಿಯ ಬಾಂಬ್‌ಗಳನ್ನು ದುಷ್ಕರ್ಮಿಗಳಿಂದ ವಶಕ್ಕೆ ಪಡೆಯಲಾಗಿದೆ. ಇಂಫಾಲ್ ಪೂರ್ವ ಜಿಲ್ಲೆ (Imphal East district) ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ (Imphal West district) ಜಿಲ್ಲಾ ಅಧಿಕಾರಿಗಳು ಜಿಲ್ಲೆಯಲ್ಲಿ ಎಂದಿನಂತೆ ಬೆಳಗ್ಗೆ 5 ರಿಂದ ಸಂಜೆ 6 ರವರೆಗೆ ಇದ್ದಕರ್ಫ್ಯೂ ಸಡಿಲಿಕೆ ಸಮಯವನ್ನು ಬೆಳಗ್ಗೆ 5 ರಿಂದ ಬೆಳಗ್ಗೆ 9 ರವರೆಗೆ ಕಡಿತಗೊಳಿಸಿದ್ದಾರೆ. ಇನ್ನು ಮಣಿಪುರದ 16 ಜಿಲ್ಲೆಗಳಲ್ಲಿ 11 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಇಡೀ ಈಶಾನ್ಯ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿಕ್ಕಿ ಬಿಎಸ್ಸೆಫ್‌ ಯೋಧ​ನ ಹತ್ಯೆ

ಮಣಿ​ಪು​ರ​ದಲ್ಲಿ 1 ತಿಂಗ​ಳಿಗೂ ಹೆಚ್ಚು ಕಾಲ​ದಿಂದ 2 ಜನಾಂಗ​ಗಳ ನಡುವೆ ಸಂಘರ್ಷ ನಡೆ​ದಿದ್ದು, ಸುಮಾರು 114 ಜನ​ರನ್ನು ಈಗಾಗಲೇ ಬಲಿ​ಪ​ಡೆ​ದಿದೆ. ಮೈತೇಯಿ ಸಮು​ದಾ​ಯಕ್ಕೆ ಎಸ್ಟಿ ಸ್ಥಾನ​ಮಾನ ನೀಡು​ವುದನ್ನು ವಿರೋ​ಧಿಸಿ ಕುಕಿ ಸಮು​ದಾಯ (Kuki community) ಹಿಂಸಾ​ಚಾ​ರಕ್ಕೆ ಇಳಿ​ದಿತ್ತು. ಇದರ ವಿರುದ್ಧ ಮೈತೇಯಿ ಸಮು​ದಾಯ (Maithei community) ಕೂಡ ತಿರು​ಗಿ​ಬಿ​ದ್ದಿತ್ತು. ಹೀಗಾಗಿ ರಾಜ್ಯ​ದಲ್ಲಿ ಶಾಂತಿ ಮರೀ​ಚಿ​ಕೆ​ಯಾ​ಗಿ​ದೆ.

click me!