ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿಕ್ಕಿ ಬಿಎಸ್ಸೆಫ್‌ ಯೋಧ​ನ ಹತ್ಯೆ

ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮರಳಿದ್ದು ಶಂಕಿತ ಕುಕಿ ಸಮುದಾಯದ ಬಂಡುಕೋರರು ಓರ್ವ ಗಡಿ ಭದ್ರತಾ ಪಡೆಯ ಸಿಬ್ಬಂದಿಯನ್ನು (Border Security Force personnel) ಗುಂಡಿಕ್ಕಿ ಕೊಂದಿದ್ದಾರೆ.

Violence again in Manipur BSSF soldier shot dead, Suspected cookie miscreants shoots on soldier two injured akb

ಇಂಫಾಲ್‌: ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮರಳಿದ್ದು ಶಂಕಿತ ಕುಕಿ ಸಮುದಾಯದ ಬಂಡುಕೋರರು ಓರ್ವ ಗಡಿ ಭದ್ರತಾ ಪಡೆಯ ಸಿಬ್ಬಂದಿಯನ್ನು (Border Security Force personnel) ಗುಂಡಿಕ್ಕಿ ಕೊಂದಿದ್ದಾರೆ. ಇದೇ ವೇಳೆ ಇಬ್ಬರು ಅಸ್ಸಾಂ ರೈಫಲ್ಸ್‌ (Assam Rifles) ಪಡೆಯ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಮಂಗಳವಾರ ಕಾಕ್ಚಿಂಗ್‌ ಜಿಲ್ಲೆಯ ಸುಂಗ್ನು ಪ್ರದೇಶದ ಸೆರೊನ ಶಾಲೆಯಲ್ಲಿ ಕುಕಿ ಬಂಡುಕೋರರು ಹಾಗೂ ಭದ್ರತಾ ಪಡೆ ಸಿಬ್ಬಂದಿ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಘಟನೆ ನಡೆದಿದೆ. ಸೆರೊನ ಶಾಲೆಯಲ್ಲಿ ನಿಯೋಜನೆಗೊಂಡಿದ್ದ ಬಿಎಸ್‌ಎಫ್‌ ಪಡೆಗಳನ್ನು ಗುರಿಯಾಗಿಸಿಕೊಂಡು ಮುಂಜಾನೆ 4.15ರ ಸುಮಾರಿಗೆ ಕುಕಿ ದುಷ್ಕರ್ಮಿಗಳು ಭಾರಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ಗಾಯಗೊಂಡಿದ್ದ ಪೇದೆ ರಂಜಿತ್‌ ಯಾದವ್‌ರನ್ನು (Ranjit Yadav) ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಸತತ ಎರಡು ದಿನಗಳ ರಾತ್ರಿ ಭದ್ರತಾ ಪಡೆ ಮತ್ತು ಕುಕಿ ಬಂಡುಕೋರರ ಮಧ್ಯೆ ಗುಂಡಿನ ಚಕಮಕಿ (gunfight)  ನಡೆದಿದೆ. ಸ್ಥಳೀಯ ಮೈತೇಯಿ ಸಮುದಾಯಕ್ಕೆ (Maithei community) ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಕುಕಿ ಸಮುದಾಯ (Kuki rebels) ರಾಜ್ಯಾದ್ಯಂತ ಹಿಂಸಾಚಾರ ನಡೆಸುತ್ತಿದೆ. ಇದರಿಂದ ಈಗಾಗಲೇ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಗೃಹ ಸಚಿವ ಅಮಿತ್‌ ಶಾ (Home Minister Amit Shah) ಮಣಿಪುರ ಪ್ರವಾಸ ಕೈಗೊಂಡು ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಬಳಿಕ ಮಣಿಪುರ ಶಾಂತ ಸ್ಥಿತಿಗೆ ಮರಳಿತ್ತು.

Manipur Terror Attack:ಉಗ್ರ ದಾಳಿಗೆ ಕರ್ನಲ್ ಕುಟುಂಬ, 4 ಯೋಧರು ಹುತಾತ್ಮ, ಘಟನೆ ಖಂಡಿಸಿದ ಮೋದಿ!

Latest Videos
Follow Us:
Download App:
  • android
  • ios