Vijay Diwas: ದೇಶಕ್ಕಾಗಿ ಪ್ರಾಣ ಮುಡಿಪಿಟ್ಟ ಹುತಾತ್ಮರನ್ನು ನೆನೆಯುವ ದಿನ

By Suvarna NewsFirst Published Dec 16, 2023, 11:05 AM IST
Highlights

Vijay Diwas: ರಾಷ್ಟ್ರದ ಹಿತಕ್ಕಾಗಿ ಸಶಸ್ತ್ರ ಸೇನಾ ಪಡೆಗಳನ್ನು ಬಲಪಡಿಸುವುದರ ಮೂಲಕ ತಮ್ಮ ದೇಶಕ್ಕೆ ಅಪಾರವಾದ ತ್ಯಾಗ ಮಾಡಿದ ಹುತಾತ್ಮ ಯೋಧರನ್ನು ನೆನೆಯುವ ದಿನವಿದು

1947ರಲ್ಲಿ  ನಡೆದ ಭಾರತ ಮತ್ತು ಪಾಕಿಸ್ತಾನ ವಿಭಜನೆ ನಂತರ,ಇವೆರಡು ದೇಶಗಳ ನಡುವೆ ಹಗೆತನ ಮತ್ತು ದ್ವೇಷ ಕಾಣಿಸುತ್ತಲೇ ಬಂದಿದೆ. ಇದರಲ್ಲಿ ಒಂದು ಕಾರಣ ಪಶ್ಚಿಮ ಪಾಕಿಸ್ತಾನ ಕೂಡ ಹೌದು. 1971 ಯುದ್ಧದಲ್ಲಿ ನಡೆದ ಘಟನೆಗಳಿಂದಾಗಿ ಭಾರತ ತನ್ನ ಸೇನಾ ಪಡೆಗಳನ್ನು ತೊಡಗಿಸಬೇಕಾಯಿತು. ಹದಿಮೂರು ದಿನಗಳ ಕಾಲ ನಂತರ ಮುಗಿದ ಈ ಭಯಾನಕ ಯುದ್ಧ, ಹೊಸ ದೇಶದ ಸೃಷ್ಟಿಗೆ ಕಾರಣವಾಯಿತು. ದೇಶದ ಇತಿಹಾಸದಲ್ಲಿ ಈ ದಿನಕ್ಕೆ ಪ್ರಾಮುಖ್ಯತೆ ಇದೆ, ಡಿಸೆಂಬರ್ 16ರಂದು ಆಚರಿಸಲಾಗುವ ವಿಜಯ ದಿವಸ್‌ದಂದು 1971ರಲ್ಲಿ ನಡೆದ ಬಾಂಗ್ಲಾದೇಶ್ ಸ್ವಾತಂತ್ರ್ಯ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಜಯ ಸಾಧಿಸಿದ್ದು ಸದಾ ಕಾಲ ಜನ ಮನದಲ್ಲಿ ಸ್ಮರಿಸುತ್ತಾರೆ.

ಡಿಸೆಂಬರ್ 16, 1971ರಲ್ಲಿ ಡಾಕದಲ್ಲಿ ಸೋಲಿನ ನಂತರ, ಪಾಕಿಸ್ತಾನ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲ ಖಾನ್ ನಿಯಾಜಿ ಜೊತೆ 93 ಸಾವಿರ ಸೇನಾ ಪಡೆಗಳು ಸೇರಿ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ನೇತೃತ್ವದ ಮಿತ್ರ ಪಡೆಗಳ ಮುಂದೆ ಬೇಷರತ್ತಾಗಿ ಶರಣಾದರು.

Latest Videos

ಇದನ್ನೂ ಓದಿ: ವಿಜಯ್ ದಿವಸ: ಸಚಿವ ಆರ್‌ಸಿಯಿಂದ ಇಂದುಹುತಾತ್ಮ ಯೋಧರಿಗೆ ಗೌರವ

ಒಟ್ಟಾರೆ ಈ ಯುದ್ಧವು ಬಾಂಗ್ಲಾದೇಶದ  ಸ್ವಾತಂತ್ರಕ್ಕೆ ಕಾರಣವಾಗಿ ಭಾರತವು ಕೂಡ ಜಯಶಾಲಿಯಾಯಿತು. ಇತಿಹಾಸದಲ್ಲಿ ದಾಖಲೆ ಮಾಡಿದ ಈ ದಿನ ದೇಶಕ್ಕಾಗಿ ರಕ್ತ ಕೊಟ್ಟ, ಹೊಡೆದಾಡಿದ ಪ್ರತಿಯೊಂದು ಹುತಾತ್ಮ ಯೋಧನನ್ನು ನೆನಪಿಸಿಕೊಳ್ಳಬೇಕಾಗಿದೆ. ವಿಜಯ ದಿವಸ್ ಎಂದು ಆಚರಿಸಲಾಗುವ ಈ ದಿನ ಪಾಕಿಸ್ತಾನ ವಿರುದ್ಧ ಜಯ ಸಾಧಿಸದ ಭಾರತ ಸೇನಾ ಪಡೆಯ ಶಕ್ತಿ ,ಯುಕ್ತಿ, ಸಾಹಸ ಹಾಗೂ ಅವರ ಹುಮ್ಮಸ್ಸನ್ನು ನೆನೆಯಲಾಗುತ್ತದೆ. 

ಇದನ್ನೂ ಓದಿ: ಯೋಧರೊಟ್ಟಿಗೆ ದೀಪಾವಳಿ ಆಚರಿಸಿದ ಮೋದಿ: ಎಲ್ಲಿ ಭಾರತೀಯ ಸೇನೆ ಇರುತ್ತದೆಯೋ ಅದೇ ದೇವಾಲಯವೆಂದ ಪ್ರಧಾನಿ

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಜೊತೆಗೆ ಈ ವಿಶೇಷ ದಿನದ ಅಸ್ತಿತ್ವ, ಶೌರ್ಯ ಮತ್ತು ತ್ಯಾಗ ಎಲ್ಲಾ ಸಾಮಾನ್ಯ ಜನರ ಮನ ಮುಟ್ಟಬೇಕು ಹಾಗೂ ಪ್ರತಿವರ್ಷ ಎಲ್ಲಾ ಹಬ್ಬದಂತೆ ಈ ದಿನವೂ ಕೂಡ ಸಂಭ್ರಮಾಚರಣೆಯಿಂದ ಹಾಗು ಹೆಮ್ಮೆಯಿಂದ ಆಚರಿಸಬೇಕೆಂಬ ಉದ್ದೇಶವು ಕೂಡ ಆಗಿದೆ. 

ಪಿ ಶುಭ ರಾವ್‌, ಬೆಂಗಳೂರು 

click me!