ಕ್ಲಾಸ್ ರೂಮ್ ನಲ್ಲೇ ಟೀಚರ್ ನಿದ್ರೆ, ಗಾಳಿ ಬೀಸಿದ ಮಕ್ಕಳು ವೀಡಿಯೋ ವೈರಲ್!

Published : Jun 07, 2022, 08:07 PM ISTUpdated : Jun 07, 2022, 08:12 PM IST
ಕ್ಲಾಸ್ ರೂಮ್ ನಲ್ಲೇ ಟೀಚರ್ ನಿದ್ರೆ, ಗಾಳಿ ಬೀಸಿದ ಮಕ್ಕಳು ವೀಡಿಯೋ ವೈರಲ್!

ಸಾರಾಂಶ

ಬಿಹಾರ ಮೂಲದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳಿಂದ ತುಂಬಿರುವ ತರಗತಿಯಲ್ಲಿ ಶಿಕ್ಷಕಿಯು ಆರಾಮವಾಗಿ ನಿದ್ರೆ ಮಾಡುತ್ತಿದ್ದರೆ, ಆಕೆಗೆ ಬಾಲಕಿಯೊಬ್ಬಳು ಬೀಸಣಿಕೆಯ ಮೂಲಕ ಗಾಳಿ ಬೀಸುತ್ತಿರುವ ವಿಡಿಯೋ ಇದಾಗಿದೆ. ಜಾಲತಾಣದಲ್ಲಿ ಇದು ಪ್ರಕಟವಾದ ಬೆನ್ನಲ್ಲಿಯೇ ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.  

ಬೆಂಗಳೂರು (ಜೂನ್ 7): ಬಿಹಾರ (Bihar) ರಾಜ್ಯದಿಂದ ವೈರಲ್ (Viral) ಆಗಿರುವ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media)  ವೈರಲ್ ಆಗಿದೆ. ಈ ವೀಡಿಯೋ ಸರ್ಕಾರಿ ಯಂತ್ರ ಮತ್ತು ನಮ್ಮ ವ್ಯವಸ್ಥೆಯ ಮೇಲೆ ಮಾಡಿರುವ ಕಪಾಳಮೋಕ್ಷ ಎಂದೂ ಹೇಳಬಹುದು. ಈ ವಿಡಿಯೋ ನೋಡಿದವರೆಲ್ಲೂ ನಮ್ಮ ಶಾಲೆಗಳು (Schools) ಇಂಥ ಅವ್ಯವಸ್ಥೆಗೆ ತಲುಪಿದೆಯೇ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿದರೆ, ನಿಮಗೂ ಕೂಡ ಭಾರತದ (India) ಭವಿಷ್ಯ ಏನಾಗಬಹುದು ಎನ್ನುವ ಸಣ್ಣ ಚಿಂತೆಯೂ ಉದ್ಭವವಾಗಬಹುದು.

"ಭಾರತ ಕಲಿತರೆ, ಭಾರತ ಅಭಿವೃದ್ಧಿ ಕಾಣಲಿದೆ' ಎನ್ನುವ ಪ್ರಖ್ಯಾತ ಸರ್ಕಾರಿ ಸ್ಲೋಗನ್ ನಿಮಗೆ ನೆನಪಿರಬಹುದು. ಆದರೆ, ಈಗ ಕಲಿಯುವುದು ಹಾಗಿರಲಿ, ಕಲಿಸುವವರು ಹೇಗಿದ್ದಾರೆ ಎನ್ನುವ ಬಗ್ಗೆ ನಾವು ಯೋಚನೆ ಮಾಡಬೇಕಾಗಿದೆ. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಕಲಿಸುವಂಥ ಟೀಚರ್ ಗಳು ಅದೆಷ್ಟು ಅಸಡ್ಡೆಯನ್ನು ಹೊಂದಿದ್ದಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಸರ್ಕಾರಿ ಶಾಲೆಯ ನಿರ್ಲಕ್ಷ್ಯತನ ಹೇಗಿರುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ಈ ವಿಡಿಯೋಗಳೇ ಸಾಕ್ಷಿ. ಬಿಹಾರದ ಬೆಟ್ಟಿಯಾದಿಂದ ವೈರಲ್ ಆಗಿರುವ ಈ ವೀಡಿಯೊದಲ್ಲಿ, ಮಹಿಳಾ ಶಿಕ್ಷಕಿಯೊಬ್ಬರು ತುಂಬಿದ ತರಗತಿಯಲ್ಲಿ ಮಲಗಿರುವುದನ್ನು ನೀವು ನೋಡಬಹುದು.

ಕ್ಲಾಸ್ ನ ತುಂಬಾ ಮಕ್ಕಳಿರುವಾಗ ಶಿಕ್ಷಕಿ ಬಬಿತಾ ಕುಮಾರಿ ನಿದ್ರೆ ಮಾಡಿರುವುದೇ ತಪ್ಪು. ಶಾಲೆಗೆ ಬಂದ ತಕ್ಷಣ ಶಿಕ್ಷಕರ ಕೆಲಸ ಪಾಠ ಮಾಡುವುದು. ಶಾಲೆಯಲ್ಲಿ ಮಕ್ಕಳು ಮಾಡುವ ಸರಿ ತಪ್ಪುಗಳನ್ನು ತಿದ್ದುವುದು. ಇವೆಲ್ಲವನ್ನು ಪಾಠ ಮಾಡಬೇಕಾದ ಶಿಕ್ಷಕಿಯೇ ಇಲ್ಲಿ, ಶಾಲೆಗೆ ಬಂದು ಗಡದ್ದಾಗಿ ನಿದ್ರೆ ಮಾಡಿದ್ದಾರೆ. ಆಕೆಗೆ ಪಾಠ ಮಾಡುವುದಕ್ಕಿಂತ ನಿದ್ರೆ ಮಾಡುವುದೇ ಇಷ್ಟವೆನ್ನುವ ರೀತಿಯಲ್ಲಿ ವರ್ತನೆ ತೋರಿದ್ದಾರೆ.
 


ಪಾಠ ಮಾಡಬೇಕಾದ ಸಮಯದಲ್ಲಿ ನಿದ್ರೆ ಮಾಡಿದ ತಪ್ಪನ್ನಾದರೂ ಕ್ಷಮಿಸಬಹುದು. ಆದರೆ, ಶಿಕ್ಷಕಿ ಕ್ಲಾಸ್ ರೂಮ್ ನಲ್ಲಿ ನಿದ್ರೆ ಮಾಡಿದ್ದು ಮಾತ್ರವಲ್ಲ, ವಿದ್ಯಾರ್ಥಿಯೊಬ್ಬಳ ಕೈಯಿಂದ ಬೀಸಣಿಕೆಯಲ್ಲಿ ಗಾಳಿಯನ್ನೂ ಹಾಕಿಸಿಕೊಂಡಿದ್ದಾಳೆ.

ಶಿಕ್ಷಕರು ಯಾವ ತಲೆಬಿಸಿಯೂ ಇಲ್ಲದೆ ಮಲಗಿರುವ ಈ ದೃಶ್ಯವನ್ನು ಯಾರೋ ರೆಕಾರ್ಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಂದ ತಕ್ಷಣ ವೈರಲ್ ಆಗಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬಾತ್‌ಬಿಹಾರ್ಕಿ ಹೆಸರಿನೊಂದಿಗೆ ಪೋಸ್ಟ್ ಮಾಡಲಾಗಿದೆ. 'ಬಿಹಾರದಲ್ಲಿ ಮಕ್ಕಳ ಭವಿಷ್ಯವನ್ನು ಕತ್ತಲೆಯಲ್ಲಿಟ್ಟು ಶಾಂತಿಯುತವಾಗಿ ನಿದ್ರಿಸುತ್ತಿರುವ ಶಿಕ್ಷಕರು' ಎಂದು ವಿಡಿಯೋ ಶೀರ್ಷಿಕೆಯಲ್ಲಿ ನೀಡಲಾಗಿದೆ.

ಈ ವೀಡಿಯೋ ವೈರಲ್ ಆದ ತಕ್ಷಣ ಜನ ಸಾಕಷ್ಟು ಕಾಮೆಂಟ್ ಕೂಡ ಮಾಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರ ಬಗ್ಗೆ ಪ್ರತಿಕ್ರಿಯಿಸುತ್ತಾ, 'ಕಲಿಸಲು ತುಂಬಾ ಕಠಿಣ ಪರಿಶ್ರಮ ಬೇಕು' ಎಂದು ಬರೆದಿದ್ದಾರೆ. ಸರ್ಕಾರದ ಗಮನ ಎಲ್ಲಿದೆಯೋ ಗೊತ್ತಿಲ್ಲ’ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ. 'ಈ ವಿಷಯ ಸಾಮಾನ್ಯವಾಗಿದೆ, ಬಹುಶಃ ಬಿಹಾರವು ಕುಖ್ಯಾತವಾಗಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಸುದ್ದಿ ಬರೆಯುವವರೆಗೂ ಈ ವೀಡಿಯೊವನ್ನು 4 ಸಾವಿರ ಬಾರಿ ವೀಕ್ಷಿಸಲಾಗಿದೆ.

 

ಟ್ರೆಡ್ ಮಿಲ್ ನಲ್ಲಿ ಗರ್ಬಾ ನೃತ್ಯ, ವೈರಲ್ ವಿಡಿಯೋ ನೋಡಿ ಇದು ಅಪಾಯಕಾರಿ ಅಂದ್ರು ನೆಟಿಜೆನ್ಸ್!

ವರದಿಯ ಪ್ರಕಾರ, ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಿ ಪುರೈನಾ ಗ್ರಾಮದ ಕತರ್ವಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ವಿಡಿಯೋವನ್ನು ವೀಕ್ಷಿಸಿದ ಜನರು "ಅದಕ್ಕಾಗಿಯೇ ಬಿಹಾರದಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆಯಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಬಿಹಾರದ ಸಾಕ್ಷರತೆ ಪ್ರಮಾಣವು ಶೇ. 61.8ರಷ್ಟಾಗಿದ್ದು, ದೇಶದಲ್ಲಿಯೇ ಅತ್ಯಂತ ಕಡಿಮೆ ಎಂದು ಸಮೀಕ್ಷೆಯು ಹೇಳಿದೆ.

IPL 2022: ಶಿಖರ್ ಧವನ್‌ಗೆ ತಂದೆಯಿಂದಲೇ ಹಿಗ್ಗಾಮುಗ್ಗ ಥಳಿತ..! ವಿಡಿಯೋ ವೈರಲ್

ಈ ವೈರಲ್ ವೀಡಿಯೊದಲ್ಲಿ ಇರುವ ಶಿಕ್ಷಕಿಯನ್ನು ಬಬಿತಾ ಕುಮಾರಿ ಎಂದು ಗುರುತಿಸಲಾಗಿದೆ. ಶಾಲೆಯಲ್ಲಿ ಏಕೆ ನಿದ್ದೆ ಮಾಡುತ್ತಿದ್ದೀರಿ ಎಂದು ಕೇಳಿದಾಗ, ಕುಮಾರಿ ಅವರು ತನಗೆ ಹುಷಾರಿಲ್ಲದ ಕಾರಣ ತರಗತಿಯ ಕುರ್ಚಿಯ ಮೇಲೆ ಮಲಗಿದ್ದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!