ಅಣ್ಣನ ಫಸ್ಟ್‌ನೈಟ್‌ ನೋಡಲು ಬೆಡ್‌ರೂಮ್‌ನ ಅಟ್ಟ ಏರಿ ಕುಳಿತ ತಮ್ಮ; ದಿಕ್ಕು ತೋಚದಂತೆ ಕುಳಿತ ವರ-ವಧು

Published : Apr 15, 2025, 12:32 PM ISTUpdated : Apr 15, 2025, 01:14 PM IST
ಅಣ್ಣನ ಫಸ್ಟ್‌ನೈಟ್‌ ನೋಡಲು ಬೆಡ್‌ರೂಮ್‌ನ ಅಟ್ಟ ಏರಿ ಕುಳಿತ ತಮ್ಮ; ದಿಕ್ಕು ತೋಚದಂತೆ ಕುಳಿತ ವರ-ವಧು

ಸಾರಾಂಶ

Newly Married Couple Video: ವಧು ಮತ್ತು ವರ ಸುಂದರ ಹೂಗಳಿಂದ ಅಲಂಕರಿಸಲಾದ ಮಂಚದ ಮೇಲೆ ಕುಳಿತಿದ್ದಾರೆ. ಈ ಕೋಣೆಯ ಅಟ್ಟದ ಮೇಲೆ ಕುಳಿತ ಯುವಕ, ಜೋಡಿಯನ್ನು ಬೆರಗುಗಣ್ಣುಗಳಿಂದ ನೋಡುತ್ತಾ ಕುಳಿತಿದ್ದಾನೆ.

ನವದೆಹಲಿ: ಸೋಶಿಯಲ್ ಮೀಡಿಯಾದ  ಈ ಯುಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಸಹ ರೀಲ್ಸ್ ಮಾಡಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೇಮಸ್  ಆಗಲು ಚಿತ್ರ-ವಿಚಿತ್ರ ಕೆಂಟೆಂಟ್‌ಗಳಿಗೆ ರೀಲ್ಸ್ ಮಾಡುತ್ತಾರೆ. ಹೆಚ್ಚು ಲೈಕ್ಸ್ ಮತ್ತು  ಫಾಲೋವರ್ಸ್ ಗಳಿಗಾಗಿ ಜನರು ತಮ್ಮ ಖಾಸಗಿ ಬದುಕನ್ನು ಸಾರ್ವಜನಿಕಗೊಳಿಸಿಕೊಳ್ಳುತ್ತಿದ್ದಾರೆ. ಅಂತಿಮ ಸಂಸ್ಕಾರದಲ್ಲಿ ಕುಟುಂಬಸ್ಥರು  ಅಳುತ್ತಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಯುವಜೋಡಿಯೊಂದು ತಮ್ಮ ಫಸ್ಟ್‌ನೈಟ್‌ ವ್ಲಾಗ್ ಮಾಡಿಕೊಂಡಿದ್ದರು. ಇಷ್ಟು ಮಾತ್ರವಲ್ಲ  ವಧು ಹಾಲು ತೆಗೆದುಕೊಂಡು ಹೋಗುವುದು, ಬೆಡ್‌ರೂಲ್ ಅಲಂಕರಿಸೋದು, ನವದಂಪತಿಗೆ ಚೇಷ್ಠೆ ಮಾಡುವಂತಹ ವಿಡಿಯೋಗಳು ಕಡಿಮೆ ಸಮಯದಲ್ಲಿಯೇ ವೈರಲ್ ಆಗುತ್ತಿರುತ್ತವೆ. 

ಇದೀಗ ಇಂತಹುವುದೇ ಒಂದು ವಿಡಿಯೋ ವೈರಲ್ ಆಗಿದ್ದು,  ಆದ್ರೆ ಇದು ಸ್ವಲ್ಪ ವಿಭಿನ್ನವಾಗಿದೆ. ಇಲ್ಲಿ ವಧು ಮತ್ತು ವರ ಸುಂದರ ಹೂಗಳಿಂದ ಅಲಂಕರಿಸಲಾದ ಮಂಚದ ಮೇಲೆ ಕುಳಿತಿದ್ದಾರೆ. ಈ ಕೋಣೆಯ ಅಟ್ಟದ ಮೇಲೆ ಕುಳಿತ ಯುವಕ, ಜೋಡಿಯನ್ನು ಬೆರಗುಗಣ್ಣುಗಳಿಂದ ನೋಡಿದ್ದಾನೆ. ಯುವಕ ಮೇಲೆ ಕುಳಿತಿರೋದನ್ನು ನೋಡಿ ವಧು ಮತ್ತು ವರ ದಿಕ್ಕು ತೋಚದಂತೆ ಕುಳಿತಿದ್ದಾರೆ.
 
ಇದುವೇ 3ನೇ ಕಣ್ಣು ಎಂದ ನೆಟ್ಟಿಗರು
ವೈರಲ್ ಆಗಿರುವ ವಿಡಿಯೋವನ್ನು ಏಪ್ರಿಲ್ 12ರಂದು 'ಹಸ್ತೆ ರಹೋ' (@Haste__Raho) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಇದುವರೆಗೂ ವಿಡಿಯೋಗೆ 48 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಮೂರನೇ ಕಣ್ಣು.. ಹೇ ಪಾರ್ಥ ಪ್ರೊಗ್ರಾಂ ಯಾವಾಗ ಶುರು ಮಾಡುವೆ ಎಂಬ ತಮಾಷೆಯ ಸಾಲುಗಳೊಂದಿಗೆ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. 

ಈ ವಿಡಿಯೋ ನೋಡಿದ ನೆಟ್ಟಿಗರು, ಇದುವೇ ನೋಡಿ ಪರ್ಫೆಕ್ಟ್ ಸಿಸಿಟಿವಿ ಎಂದಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ಎಂದು ಯಾರಾದರೂ ನಮಗೆ ಹೇಳುತ್ತೀರಾ? ನಾನು ಸಹ ಕಾರ್ಯಕ್ರ,ಮ ಯಾವಾಗ ಆರಂಭವಾಗಲಿದೆ ಎಂದು ಕಾಯುತ್ತಿದ್ದೇನೆ. ತಮಾಷೆಗೂ ಈ ರೀತಿ ಮಾಡಬಾರದು? ಆ ವಧುವಿನ ಪರಿಸ್ಥಿತಿ ಏನಾಗಿರಬಹುದು ಎಂದು ಒಂದು ಕ್ಷಣ ಯೋಚನೆ ಮಾಡಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. 

ಒಂದಿಷ್ಟು ಪ್ರಶ್ನೆಗೆ ಉತ್ತರ?
1.ಈ ರೀತಿ ರೀಲ್ಸ್ ಮಾಡೋದು ಕಾನೂನುಬದ್ಧವಾಗಿ ಸರಿಯೇ?

ಎರಡೂ ಕಡೆಯವರ ಒಪ್ಪಿಗೆಯಿಂದ ವಿಡಿಯೋ ಮಾಡಿದ್ರೆ ಯಾವುದೇ ತಪ್ಪಲ್ಲ. ಒಂದು ವೇಳೆ ಜೋಡಿಯ ಅನುಮತಿ ಪಡೆಯದೇ ವಿಡಿಯೋ ಅಪ್ಲೋಡ್ ಮಾಡಿಕೊಂಡರೆ ಗೌಪತ್ಯೆ ಅಥವಾ ಖಾಸಗಿತನದ ಉಲ್ಲಂಘನೆಯಾಗುತ್ತದೆ. 

ಇದನ್ನೂ ಓದಿ: ಸೆಲ್ಫಿ ಕೊಟ್ರೆ ಹೆಗಲ ಮೇಲೆನೇ ಕೈಹಾಕೋದಾ ಅಂಕಲ್ಲು! ಸುಮ್ನೆ ಇರ್ತಾರಾ ನಟಿ ರಾಧಿಕಾ ಪಂಡಿತ್​?

2.ಇಣುಕಿ ನೋಡುವುದು ಅಪರಾಧವೇ?
ಬೇರೆಯೊಬ್ಬರ ಖಾಸಗಿ ಜೀವನ ಅಥವಾ ಮಿಲನವನ್ನು ಇಣುಕಿ ನೋಡುವುದು ಅಪರಾಧವಾಗುತ್ತದೆ. ಗೌಪ್ಯತೆ ಬಯಲು ಮಾಡೋದು IT ಕಾಯಿದೆ ಮತ್ತು IPC ಯ ಸೆಕ್ಷನ್ 354C (Voyeurism) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

3.ದಂಪತಿ ಏನಾದ್ರೂ ಕ್ರಮ ತೆಗೆದುಕೊಳ್ಳಬಹುದು?
ದಂಪತಿ ದೂರು ನೀಡಿದರೆ ವಿಡಿಯೋ ವೈರಲ್ ಮಾಡಿದವರು ಹಾಗೂ ಅಟ್ಟದ ಮೇಲೆ ಕುಳಿತವನ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ.

4.ಫಸ್ಟ್‌ನೈಟ್ ವಿಡಿಯೋ ವೈರಲ್, ಸಮಾಜದ ಮೇಲಾಗುವ ಪರಿಣಾಮ ಏನು?
ಇಂತಹ ವೀಡಿಯೊಗಳು ಜನರ ಗೌಪ್ಯತೆ, ಘನತೆ ಮತ್ತು ಕೌಟುಂಬಿಕ ಸಂಬಂಧಗಳಿಗೆ ಹಾನಿಯುಂಟುಮಾಡಬಹುದು ಮತ್ತು ಸಾಮಾಜಿಕ ಮಟ್ಟದಲ್ಲಿ ಅಪಹಾಸ್ಯಕ್ಕೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ, ಮದುವೆಯ ಪ್ರತಿ ಕ್ಷಣವನ್ನು ಶೂಟ್ ಮಾಡುವುದು ಒಂದು ಫ್ಯಾಷನ್ ಆಗಿದೆ, ಆದರೆ ಈಗ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡುವ ಚರ್ಚೆ ಪ್ರಾರಂಭವಾಗಿದೆ. 

ಇದನ್ನೂ ಓದಿ: ಮೆಟ್ರೋದಲ್ಲಿ ನಿದ್ದೆ ಮಾಡುವ ಯುವಕನಿಗೆ ಸೊಂಟದ ಆಸರೆ ಕೊಟ್ಟ ಯುವತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?