55 ಕೋಟಿ ಅವ್ಯವಹಾರ, ಇಡಿ ಮುಂದೆ 3 ಗಂಟೆ ವಿಚಾರಣೆಗೆ ಒಳಗಾದ ರಾಬರ್ಟ್ ವಾದ್ರಾ!

Published : Apr 15, 2025, 12:17 PM ISTUpdated : Apr 15, 2025, 03:07 PM IST
55 ಕೋಟಿ ಅವ್ಯವಹಾರ, ಇಡಿ ಮುಂದೆ 3 ಗಂಟೆ ವಿಚಾರಣೆಗೆ ಒಳಗಾದ ರಾಬರ್ಟ್ ವಾದ್ರಾ!

ಸಾರಾಂಶ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಭೂ ವ್ಯವಹಾರದ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಇದು ಎರಡನೇ ಸಮನ್ಸ್ ಆಗಿದೆ. ಈ ಹಿಂದೆ ಏಪ್ರಿಲ್ 8 ರಂದು ಮೊದಲ ಸಮನ್ಸ್ ನೀಡಲಾಗಿತ್ತು. ಹರಿಯಾಣದ ಗುರುಗ್ರಾಮದಲ್ಲಿ ನಡೆದ ಭೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದು ರಾಜಕೀಯ ಸೇಡು ಎಂದು ವಾದ್ರಾ ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ಉದ್ಯಮಿ ರಾಬರ್ಟ್ ವಾದ್ರಾಗೆ ಮತ್ತೆ ಸಂಕಷ್ಟ ಎದುರಾಗಿದೆ. ಭೂ ವ್ಯವಹಾರದ ಹಣ ವರ್ಗಾವಣೆ  ಹಗರಣಕ್ಕೆ (Money Laundering Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಎರಡನೇ ಬಾರಿ ಸಮನ್ಸ್ ಜಾರಿ ಮಾಡಿದ್ದು, 3 ಗಂಟೆ ವಿಚಾರಣೆ ನಡೆಸಿದೆ. ಈ ಮೊದಲು ಏಪ್ರಿಲ್‌ 8 ರಂದು ಮೊದಲ ಸಮನ್ಸ್ ನೀಡಲಾಗಿತ್ತು. ಅಂದುವಿಚಾರಣೆಗೆ ಗೈರಾದ ಕಾರಣಕ್ಕೆ ಈಗ ಮತ್ತೆ ಸಮನ್ಸ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಏ.15ರ ಬೆಳಗ್ಗೆ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

ಸೋಮವಾರವಷ್ಟೇ ರಾಜಕೀಯಕ್ಕೆ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಅದಾದ ಒಂದು ದಿನದ ನಂತರ ಸಮನ್ಸ್ ಜಾರಿಯಾಗಿದೆ. ಕಾಂಗ್ರೆಸ್ ಪಕ್ಷವು ರಾಜಕೀಯದ ಹೆಜ್ಜೆ ಇಡಬೇಕೆಂದು ಭಾವಿಸಿದರೆ, ಅವರ ಕುಟುಂಬದ ಆಶೀರ್ವಾದದೊಂದಿಗೆ ನಾನು ಹಾಗೆ ಮಾಡುತ್ತೇನೆ ಎಂದು ಹೇಳಿದ್ದರು.

ನಾನಿನ್ನೂ ನೋಡಿಲ್ಲ.ದೆಹಲಿ ಚುನಾವಣೆ ಫಲಿತಾಂಶಕ್ಕೆ Priyanka Gandhi ಪ್ರತಿಕ್ರಿಯೆ! | Delhi Election Results

ಹರಿಯಾಣದ ಗುರುಗ್ರಾಮದ ಶಿಕೋಪುರ ಗ್ರಾಮದಲ್ಲಿ ನಡೆದ ಭೂ ಅವ್ಯವಹಾರಕ್ಕೆ  2018 ರಲ್ಲಿ ಹರಿಯಾಣ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಈ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ಅವರನ್ನು ವಿಚಾರಣೆಗೆ ಒಳಪಡಿಸಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಈ ಎಫ್‌ಐಆರ್ ಆಧರಿಸಿ ಇಡಿ ತನ್ನದೇ ಆದ ತನಿಖೆಯನ್ನು ಆರಂಭಿಸಿತು. 

ಈ ಪ್ರಕರಣವು 2008 ರಲ್ಲಿ ಗುರ್ಗಾಂವ್‌ನ ಶಿಕೋಹ್‌ಪುರ ಗ್ರಾಮದಲ್ಲಿ ವಾದ್ರಾ ಅವರ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿ 7.5 ಕೋಟಿ ರೂ.ಗೆ ಖರೀದಿಸಿದ್ದ ಮೂರು ಎಕರೆ ಭೂಮಿಗೆ ಸಂಬಂಧಿಸಿದ್ದಾಗಿದೆ. ಅದೇ ವರ್ಷ ಸ್ಕೈಲೈಟ್ ಮತ್ತು ಡಿಎಲ್ಎಫ್ 3 ಎಕರೆ ಡಿಎಲ್ಎಫ್ ಭೂಮಿಯನ್ನು 58 ಕೋಟಿಗೆ ಮಾರಾಟ ಮಾಡಿದೆ ಎಂಬ ಬಗ್ಗೆ ದೂರು ದಾಖಲಾಗಿತ್ತು. ಇದು ಅಕ್ರಮ ಹಣ ವರ್ಗಾವಣೆ ಇರಬಹುದು ಎಂದು ಇಡಿ ಶಂಕಿಸಿದೆ. 

ಮಂಗಳವಾರ ಇಡಿ ಕಚೇರಿಯಲ್ಲಿ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಬರ್ಟ್ ವಾದ್ರಾ ಏನೂ ಇಲ್ಲ  ಎಂದು ಹೇಳಿದ್ದ ಪ್ರಕರಣದಲ್ಲಿ "ಇಂದು ಒಂದು ತೀರ್ಮಾನ ಬರುತ್ತದೆ" ಎಂದು ಆಶಿಸುತ್ತೇನೆ ಎಂದು ಹೇಳಿದರು. ಜೊತೆಗೆ ಇದು ಬಿಜೆಪಿಯ ರಾಜಕೀಯದ ಸೇಡು. ನನ್ನನ್ನು ರಾಜಕೀಯಕ್ಕೆ ಪ್ರವೇಶಿಸುವುದನ್ನು ತಡೆಯಲು ಇದನ್ನು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿರಾ ಮೊಮ್ಮಗಳ ರಣಾರ್ಭಟಕ್ಕೆ ಮೊಳಗಿದ ರಣಕಹಳೆ! ರಾಜಕೀಯ ಸಮರದಲ್ಲಿ ಸಂಸದೆ ಪ್ರಿಯಾಂಕಾರದ್ದೇ ಹವಾ!

ಯಾರೂ ಯಾವುದರಿಂದಲೂ ತಪ್ಪಿಸಿಕೊಳ್ಳುತ್ತಿಲ್ಲ. ನಾನು ಇಂದು ಇಲ್ಲಿದ್ದೇನೆ. ನಾನು ತೀರ್ಮಾನವನ್ನು ನಿರೀಕ್ಷಿಸುತ್ತಿದ್ದೇನೆ. ನಾನು ತೀರ್ಮಾನಕ್ಕಾಗಿ ಕಾಯುತ್ತಿದ್ದೇನೆ ಎಂದರು. ಇದು ರಾಜಕೀಯದ ಸೇಡು ಎಂದ ವಾದ್ರಾ ಅವರ ಭಾವ ,ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಹಿತಾಸಕ್ತಿಗಾಗಿ ಮಾತನಾಡಿದಾಗಲೆಲ್ಲಾ ಅವರನ್ನು ಮೌನಗೊಳಿಸಲು ಪ್ರಯತ್ನಗಳು ನಡೆಯುತ್ತವೆ ಎಂದರು. 

ನಾನು ದೇಶದ ಪರವಾಗಿ ಮಾತನಾಡುವಾಗ, ನನ್ನನ್ನು ತಡೆಯಲಾಗುತ್ತದೆ, ರಾಹುಲ್ ಅವರನ್ನು ಸಂಸತ್ತಿನಲ್ಲಿ ಮಾತನಾಡದಂತೆ ತಡೆಯಲಾಗುತ್ತದೆ. ಬಿಜೆಪಿ ಇದನ್ನೇ ಮಾಡುತ್ತಿದೆ. ಜನರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನಾನು ರಾಜಕೀಯಕ್ಕೆ ಸೇರಬೇಕೆಂದು ಬಯಸುತ್ತಾರೆ. ನಾನು ರಾಜಕೀಯಕ್ಕೆ ಸೇರಲು ಇಚ್ಛೆ ವ್ಯಕ್ತಪಡಿಸಿದಾಗ, ಅವರು ನನ್ನನ್ನು ಕೆಳಗಿಳಿಸಲು ಮತ್ತು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಹಳೆಯ ವಿಷಯಗಳನ್ನು ಕೆದಕಿ ತೆಗೆಯುತ್ತಾರೆ. ಈ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ.ಕಳೆದ 20 ವರ್ಷಗಳಿಂದ ನನ್ನನ್ನು 15 ಬಾರಿ ಸಮನ್ಸ್ ಜಾರಿ ಮಾಡಿ ಪ್ರತಿ ಬಾರಿ 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ಮಾಡಲಾಗಿದೆ. 23000 ದಾಖಲೆಗಳನ್ನು ಕ್ರೋಢೀಕರಿಸುವುದು ಸುಲಭದ ಮಾತಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ