ರೈಲಿನಲ್ಲಿ ಬಾಲಿವುಡ್‌ ಹಾಡು ಗುನುಗಿದ ವೃದ್ಧ: ನೆಟ್ಟಿಗರ ಮನಗೆದ್ದ ವಿಡಿಯೋ..!

Published : Dec 12, 2022, 01:31 PM ISTUpdated : Dec 12, 2022, 01:37 PM IST
ರೈಲಿನಲ್ಲಿ ಬಾಲಿವುಡ್‌ ಹಾಡು ಗುನುಗಿದ ವೃದ್ಧ: ನೆಟ್ಟಿಗರ ಮನಗೆದ್ದ ವಿಡಿಯೋ..!

ಸಾರಾಂಶ

ವಯಸ್ಸಾದ ವ್ಯಕ್ತಿಯೊಬ್ಬರು  ರೈಲಿನಲ್ಲಿ ಬಾಲಿವುಡ್‌ನ ರೊಮ್ಯಾಂಟಿಕ್ ಹಾಡನ್ನು ಗುನುಗುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ನಾವೆಲ್ಲರೂ ರೈಲಿನಲ್ಲಿ, ಬಸ್‌ನಲ್ಲಿ ಅಥವಾ ಮೆಟ್ರೋದಲ್ಲಿ ಪ್ರಯಾಣಿಸುವಾಗ ಟೈಮ್‌ ಪಾಸ್‌ ಮಾಡೋದು ಹೇಗಪ್ಪಾ ಅಂತ ಯೋಚಿಸ್ತೀವಿ. ಕೆಲವರು ಪುಸ್ತಕ ಓದುವುದು ಅಥವಾ ತಮ್ಮ ಫೋನ್‌ನಲ್ಲಿ ಫಿಲ್ಮ್ ನೋಡ್ತಾರೆ. ಆದರೆ ಈಗಲೂ ಹಲವರಿಗೆ ಸಂಗೀತ ಅಥವಾ ಹಾಡು ಕೇಳೋದು ಹಾಗೂ ಹಾಡುವುದು ಜನಪ್ರಿಯ ಆಯ್ಕೆಯಾಗಿ ಉಳಿದಿದೆ ಅಂತ ಹೇಳಬಹುದು. ಅನೇಕರು ಇಯರ್‌ಫೋನ್‌, ಹೆಡ್‌ಫೋನ್‌ಗಳನ್ನು ಹಾಕ್ಕೊಂಡೇ ಹಾಡುಗಳನ್ನು ಗುನುಗುವುದನ್ನು ಕೇಳಬಹುದು. 

ಇದೇ ರೀತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದು ನೆಟ್ಟಿಗರ ಹೃದಯಗಳನ್ನೇ ಕರಗಿಸಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ವಯಸ್ಸಾದ ವ್ಯಕ್ತಿಯೊಬ್ಬರು  ರೈಲಿನಲ್ಲಿ ಬಾಲಿವುಡ್‌ನ ರೊಮ್ಯಾಂಟಿಕ್ ಹಾಡನ್ನು ಗುನುಗುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಅವರ ಮನಸ್ಸಿನಲ್ಲಿ ಯಾವ ಹಾಡು ಇತ್ತು ಎಂಬುದನ್ನು ತಿಳಿಯಬೇಕಾದ್ರೆ ಕೆಳಗಿನ ವಿಡಿಯೋ ನೋಡಿ..

ಇದನ್ನು ಓದಿ: ಮದ್ವೆ ಮನೆಗೆ ಎಂಟ್ರಿ ಕೊಟ್ಟ ಗೂಳಿ: ವೈರಲ್ ವಿಡಿಯೋ

ಟ್ವಿಟ್ಟರ್ ಬಳಕೆದಾರ @Gulzar_Sahab ಅವರು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಟ್ರೈನ್‌ನಲ್ಲಿ ಕಿಟಕಿಯ ಸೀಟಿನಲ್ಲಿ ಕುಳಿತಿರುವ ವ್ಯಕ್ತಿಯನ್ನು ತೋರಿಸುತ್ತದೆ ಮತ್ತು ಅವರು 2019 ರ ಚಲನಚಿತ್ರ ಮರ್ಜಾವನ್‌ನ ಜುಬಿನ್ ನೌಟಿಯಾಲ್ ಅವರ 'ತುಮ್ ಹೀ ಆನಾ' ಸಾಂಗ್‌ ಅನ್ನು ಗುನುಗುವುದನ್ನು ಕೇಳಬಹುದು. ವ್ಯಕ್ತಿಯು ಹಾಡಿನಲ್ಲಿ ಮುಳುಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಒಂದು ಕಡೆ ಪ್ರಯಾಣಿಕರು ರೆಕಾರ್ಡ್‌ ಮಾಡ್ತಿದ್ದ ನಡುವೆ ವೃದ್ಧ ಹಾಡನ್ನು ಹಾಡಲು ಪ್ರಾರಂಭಿಸುತ್ತಾರೆ. 

ಆ ವ್ಯಕ್ತಿಯು ಕಿಟಕಿಯ ಸೀಟಿನಲ್ಲಿ ತನ್ನ ತೊಡೆಯ ಮೇಲೆ ಬ್ಯಾಗ್‌ ಹಿಡಿದುಕೊಂಡು ಕೂತಿದ್ದು, ಹಿನ್ನೆಲೆಯಲ್ಲಿ ಹಾಡು ಪ್ಲೇ ಆಗುತ್ತಿದ್ದಂತೆ  ಹಿರಿಯ ವ್ಯಕ್ತಿ ಹಾಡಲು ಪ್ರಾರಂಭಿಸಿದರು ಮತ್ತು ಸಾಹಿತ್ಯಕ್ಕೆ ತಲೆದೂಗಿರುವುದ್ನೂ ನಾವು ನೋಡಬಹುದು. ರೈಲಿನಲ್ಲಿ ಹಾಡು ಕೇಳುತ್ತಾ, ಅಜ್ಜ ಹಾಡಲು ಪ್ರಾರಂಭಿಸಿದರು ಎಂದು ಈ ವಿಡಿಯೋಗೆ ಹಿಂದಿಯಲ್ಲಿ ಕ್ಯಾಪ್ಷನ್‌ ಅನ್ನೂ ನೀಡಲಾಗಿದೆ. ಹೃದಯ ಸ್ಪರ್ಶಿಯ ಈ ವಿಡಿಯೋ ಲಕ್ಷಾಂತರ ಜನರನ್ನು ತಲುಪಿದ್ದು, ಹಾಡನ್ನು ಆನಂದಿಸಿದ ವ್ಯಕ್ತಿಯನ್ನು ಹಲವು ನೆಟ್ಟಿಗರು ಹೊಗಳಿದ್ದು, ಅವರು ಹಾಡುವುದಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾಯಿಗಳಿಂದ ರಕ್ಷಿಸಿಕೊಳ್ಳಲು ಎಟಿಎಂಗೆ ನುಗ್ಗಿದ್ದ ಜಿಂಕೆ

ಈ ವಿಡಿಯೋ 'ದಿಲ್ ಸೇ ದಿಲ್ ತಕ್' ತಲುಪಿದೆ ಎಂದು ಇಂಟರ್ನೆಟ್ ಹೇಳುತ್ತದೆ. ಈ ವಿಡಿಯೋ 1 ಲಕ್ಷ 73 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 12 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್‌ ಮಾಡಿದ್ದಾರೆ. ಅಲ್ಲದೆ, 100ಕ್ಕೂ ಹೆಚ್ಚು ಕಮೆಂಟ್‌ಗಳನ್ನೂ ಮಾಡಿದ್ದಾರೆ.

ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಒಬ್ಬರು, ‘’ಅವರನ್ನು ವಾಪಿ ನಿಲ್ದಾಣದಲ್ಲಿ ನೋಡಿದ್ದೇನೆ. ಅವರೇ ತನ್ನ ಮ್ಯೂಸಿಕ್ ಪ್ಲೇಯರ್‌ನಲ್ಲಿ ಹಾಡುಗಳನ್ನು ಪ್ಲೇ ಮಾಡ್ತಾರೆ ಮತ್ತು ಹಾಡುತ್ತಾರೆ. ತನ್ನ ಹಾಡುಗಾರಿಕೆಯಿಂದ ತನ್ನ ಸುತ್ತಲಿನ ಎಲ್ಲರನ್ನು ಸಂತೋಷಪಡಿಸುತ್ತಾರೆ’’ ಎಂದು ಹೇಳಿದ್ದಾರೆ. ಮತ್ತೊಬ್ಬರು, "ಸರ್ ದಿಲ್ ಸೇ ದಿಲ್ ತಕ್ ಎಂತಹ ಸುಂದರ ದೃಶ್ಯ" ಎಂದು ಸೇರಿಸಿದರು. ಹಾಗೆ ಇನ್ನೊಬ್ಬರು ವ್ಯಕ್ತಿ ಅದನ್ನು "ಓಲ್ಡ್ ಈಸ್‌ ಆಲ್ವೇಸ್‌ ಗೋಲ್ಡ್‌" ಎಂದು ಹೇಳಿದ್ದಾರೆ. ಅದೇ ರೀತಿ, ಹಲವರು ವಿಭಿನ್ನವಾಗಿ ಕಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: Telangana: ಎಂಗೇಜ್‌ಮೆಂಟ್ ದಿನವೇ ಮನೆಗೆ ನುಗ್ಗಿ 100ಕ್ಕೂ ಹೆಚ್ಚು ಜನರಿಂದ ಮಹಿಳೆ ಕಿಡ್ನ್ಯಾಪ್‌..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ