
ಅಹಮ್ಮದಾಬಾದ್(ಜ.10) ವೈಬ್ರೆಂಟ್ ಗುಜರಾತ್ ಭಾರತದ ಅತೀ ದೊಡ್ಡ ಸಮಾವೇಶವಾಗಿದೆ. ಹೂಡಿಕೆ, ಉದ್ಯಮ, ಕೈಗಾರಿಕೆ, ಐಟಿ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಹಾಗೂ ಅಭಿವೃದ್ಧಿಗಳ ಮೂಲಕ ಬಲಿಷ್ಠ ಭಾರತ ಕಟ್ಟುವ ಈ ಸಮ್ಮಿಟ್‌ನ 10ನೇ ಆವೃತ್ತಿ ಉದ್ಘಾಟನೆಯಾಗಿದೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ಆರಂಭಿಸಿದ ವೈಬ್ರೆಂಟ್ ಗುಜರಾತ್ ಸಮ್ಮಿಟ್ ಇದೀಗ 10ನೇ ವರ್ಷಕ್ಕೆ ಕಾಲಿಟ್ಟಿದೆ. 35 ದೇಶದ ಪ್ರತಿನಿಧಿಗಳು, 16 ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಸಮ್ಮಿಟ್‌ನಲ್ಲಿ ಪಾಲ್ಗೊಂಡಿದೆ. ಮೊರಕ್ಕೊ ಸಚಿವ ರ್ಯಾದ್ ಮೆಜೋರ್ ಭಾಷಣ ವೈರಲ್ ಆಗಿದೆ. ನರೇಂದ್ರ ಮೋದಿ, ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ರ್ಯಾದ್ ಮೆಜೋರ್ ಭಾಷಣ ಆರಂಭಿಸಿದ್ದಾರೆ.
ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ವೈಬ್ರೆಂಟ್ ಗುಜರಾತ್ ಸಮ್ಮಿಟ್ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೊರಕ್ಕೊ ದೇಶದ ಪ್ರತಿನಿಧಿ, ಸಚಿವ ರ್ಯಾದ್ ಮೆಜೋರ್, ಮಾತಿನ ಆರಂಭದಲ್ಲೇ ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ ಎಂದಿಲ್ಲ. ನರೇಂದ್ರ ಮೋದಿ, ಭಾರತದ ಪ್ರಧಾನಿ ಎಂದು ಉಚ್ಚರಿಸಿದ್ದಾರೆ. ಈ ಮಾತು ಹೇಳುತ್ತಿದ್ದಂತೆ ಸಭೆಯಲ್ಲಿ ನರೆದಿದ್ದ ಎಲ್ಲರೂ ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತ ಪ್ರಧಾನಿ ಮೋದಿ ಕೂಡ ನಗುಮುಖದಿಂದ ಚಪ್ಪಾಳೆ ತಟ್ಟಿ ಧನ್ಯವಾದ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ವಿಪತ್ತುಗಳನ್ನು ಭಾರತ ಎದುರಿಸಿದ ರೀತಿ ನೋಡಿ ಜಗತ್ತಿಗೆ ಬೆರಗು
ಮೊರಕ್ಕೆ ಸಚಿವರ ಈ ಹೇಳಿಕೆ ವಿಡಿಯೋ ವೈರಲ್ ಆಗಿದೆ. ಭಾರತ ಅಧ್ಯಕ್ಷತೆ ವಹಿಸಿದ್ದ ಜಿ20 ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಭಾರತ ಎಂದು ಅಧಿಕೃತವಾಗಿ ಬಳಕೆ ಮಾಡಿತ್ತು. ಇದೇ ವೇಳೆ ಇಂಡಿಯಾವನ್ನು ಭಾರತ್ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಪರ ವಿರೋಧಗಳು ವ್ಯಕ್ತವಾಗಿತ್ತು. ಆದರೆ ಭಾರತ ಅನ್ನೋ ಅಧಿಕೃತ ಪದ ಬಳಕೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ವಿದೇಶಿ ಸಚಿವರು, ಇತರ ದೇಶಗಳು ಇಂಡಿಯಾ ಬದಲು ಭಾರತ ಎಂದೇ ಉಚ್ಚರಿಲು ಆರಂಭಿಸಿದೆ.
ವೈಬ್ರೆಂಟ್ ಗುಜರಾತ್ ಸಮ್ಮಿಟ್ ಉದ್ಘಾಟನೆ ಮಾಡಿದ ಮಾತನಾಡಿದ ಪ್ರಧಾನಿ ಮೋದಿ ಭಾರತ ವಿಶ್ವದ 3ನೇ ಅತೀ ದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ. ಭಾರತದಲ್ಲಿ ಹೂಡಿಕೆಗೆ ಅತ್ಯುತ್ತಮ ವಾತಾವರಣವಿದೆ. ಮೂಲಸೌಕರ್ಯಗಳನ್ನು ಮೇಲ್ದರ್ಜೆ ಏರಿಸಲಾಗಿದೆ ಎಂದಿದ್ದಾರೆ.
ಹೊಗಳದಿದ್ದರೂ, ತೆಗಳಬೇಡಿ, ಭಾರತೀಯರನ್ನು ಗೆಲ್ಲದೇ ಭಾರತವನ್ನು ಗೆಲ್ಲಲಾಗದು!
2003ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವೈಬ್ರೆಂಟ್ ಗುಜರಾತ್ ಸಮ್ಮಿಟ್ ಆರಂಭಿಸಿದ್ದರು. ಈ ಕಾರ್ಯಕ್ರಮಕ್ಕೆ 20 ವರ್ಷ ಸಂದಿದೆ. 10ನೇ ಆವೃತ್ತಿಯ ಈ ಬಾರಿಯ ಸಮ್ಮಿಟ್ ಅತ್ಯಂತ ಯಶ್ವಿಯಾಗಿ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ