
ವಾರಣಾಸಿ(ಏ.06) ವಕ್ಫ್ ಬಿಲ್ ಎರಡು ಸದನದಲ್ಲಿ ಪಾಸ್ ಆಗುತ್ತಿದ್ದಂತೆ ದೇಶಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ವಾರಣಾಸಿಯ ಮುಸ್ಲಿಮ್ ಮಹಿಳೆಯರ ನಡೆ ಹಲವರಿಗೆ ಅಚ್ಚರಿ ತಂದಿದೆ. ರಾಮನವಮಿ ದಿನವಾದ ಇಂದು ವಾರಣಾಸಿ ಮುಸ್ಲಿಮ್ ಮಹಿಳೆಯರು ಶ್ರೀರಾಮನಿಗೆ ಆರತಿ ಎತ್ತಿ ಪೂಜೆ ಮಾಡಿದ್ದಾರೆ. ಒಗ್ಗಟ್ಟಿನ ಮಂತ್ರ ಪಠಿಸಿರುವ ಮುಸ್ಲಿಮ್ ಮಹಿಳೆಯರು ರಾಮ ನಮ್ಮ ಪೂರ್ವಜ. ನಾವು ಮುಸ್ಲಿಮರಾಗಿ ಬದಲಾಗಿದ್ದೇವೆ ಎಂದಿದ್ದಾರೆ. ಇದೇ ವೇಳೆ ಶ್ರೀರಾಮನ ಆಶೀರ್ವಾದ ಹಾಗೂ ಅನುಗ್ರಹದಿಂದ ದೇಶದಲ್ಲಿ ತ್ರವಳಿ ತಲಾಖ್ ನಿಷೇಧಿಸುವ ಹಾಗೂ ವಕ್ಪ್ ಬಿಲ್ ತಿದ್ದುಪಡಿ ಮಸೂದೆ ಪಾಸ್ ಆಗಿದೆ ಎಂದಿದ್ದಾರೆ.
ಮುಸ್ಲಿಮ್ ಮಹಿಳಾ ಫೌಂಡೇಶನ್‌ನಿಂದ ಪೂಜೆ
ವಾರಣಾಸಿಯ ಮುಸ್ಲಿಮ್ ಮಹಿಳಾ ಫೌಂಡೇಶನ್ ಹಾಗೂ ವಿಶಾಲ ಭಾರತ ಸಂಸ್ಥಾನ ಜಂಟಿಯಾಗಿ ಶ್ರೀರಾಮ ಆರತಿ ಪೂಜೆ ಮಾಡಿದೆ. ರಾಮನವಮಿ ಪ್ರಯುಕ್ತ ವಿಶೇಷ ರಂಗೂಲಿ ಬಿಡಿಸಲಾಗಿದೆ. ಶ್ರೀರಾಮ ಮಂದಿರವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಉರ್ದುವಿನಲ್ಲಿ ಶ್ರೀರಾಮ ಮಂದು ಮುಸ್ಲಿಮ್ ಮಹಿಳಾ ಫೌಂಡೇಶನ್ ಬರೆದು ಶ್ರೀರಾಮನವಿಗೆ ವಿಶೇಷ ಆರತಿ ಪೂಜೆಯನ್ನು ಮಾಡಿದೆ. ಕಳೆದ 19 ವರ್ಷಗಳಿಂದ ವಾರಣಾಸಿ ಮುಸ್ಲಿಮ್ ಮಹಿಳೆಯರು ರಾಮನವಮಿ ದಿನ ಶ್ರೀರಾಮನಿಗೆ ವಿಶೇಷ ಆರತಿ ಪೂಜೆ ಮಾಡುತ್ತಿದ್ದಾರೆ. ಈ ಬಾರಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.
Waqf Bill 2025: ಕೈ, ಎಂಐಎಂ ಸಂಸದರ ಬೆನ್ನಲ್ಲೇ ವಕ್ಫ್ ಮಸೂದೆ ವಿರುದ್ಧ ಮತ್ತಿಬ್ಬರು ಸುಪ್ರೀಂಗೆ;! ಆಕ್ಷಪಣೆಗಳೇನು?
ರಾಮ ನಮ್ಮ ಪೂರ್ವಜ
ರಾಮನವಿಗೆ ವಿಶೇಷ ಆರತಿ ಪೂಜೆ ಮಾಡಿದ ವಾರಣಾಸಿ ಮುಸ್ಲಿಮ್ ಮಹಿಳಾ ಫೌಂಡೇಶನ್ ಸದಸ್ಯೆ ನಝ್ನೀನ್ ಅನ್ಸಾರಿ, ಅರಬ್, ತುರ್ತಿ, ಮೊಘಲರು ಭಾರತದ ಮೇಲೆ ದಾಳಿ ಮಾಡಿದರು. ಇಲ್ಲಿನವರ ಧರ್ಮ ಬದಲಾಯಿಸಿದರು. ಅನಿವಾರ್ಯವಾಗಿ ಬದಲಾಗಬೇಕಾಯಿತು. ಆದರೆ ನಾವು ತುರ್ಕರು, ಅರಬ್ಬರ ಸಂಸ್ಕೃತಿಯನ್ನು ಅನುಸರಿಸುತ್ತಿಲ್ಲ. ಭಾರತದ ಸಂಸ್ಕೃತಿಯಲ್ಲಿ ರಾಮನೇ ಸರ್ವಶ್ರೇಷ್ಠ.ಆತನೇ ಆದರ್ಶ. ಆತನೇ ನಮ್ಮ ಪೂರ್ವಜ. ನಮ್ಮ ಪೂರ್ವಜ ಹಾಗೂ ಆ ಸಂಸ್ಕೃತಿಯನ್ನು ಮರೆಯಲು ಸಾಧ್ಯವೇ ಎಂದು ಅನ್ಸಾರಿ ಹೇಳಿದ್ದಾರೆ. ನಮ್ಮ ಪೂರ್ವಜರು ರಾಮನ ಭಕ್ತರಾಗಿದ್ದರು. ಈಗ ನಮ್ಮ ಮತ ಬದಲಾಗಿದೆ. ಆದರೆ ನಾವೂ ಕೂಡ ರಾಮನ ಭಕ್ತರು ಎಂದು ಅನ್ಸಾರಿ ಹೇಳಿದ್ದಾರೆ.
ಶ್ರೀರಾಮನ ಅನುಗ್ರಹದಿಂದ ಬಿಲ್ ಪಾಸ್
ಶ್ರೀರಾಮನ ಆಶೀರ್ವಾದದಿಂದ ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಗೊಂಡಿದೆ. ಈ ಬಿಲ್ ಪಾಸ್ ಆಗಲು ಶ್ರೀರಾಮನ ಅನುಗ್ರಹವಿತ್ತು. ಇದೀಗ ವಕ್ಪ್ ತಿದ್ದುಪಡಿ ಮಸೂದೆ ಕೂಡ ಪಾಸ್ ಆಗಿದೆ ಎಂದು ಅನ್ಸಾರಿ ಹೇಳಿದ್ದಾರೆ.ರಾಮನವಮಿ ನಮ್ಮ ದೇಶದ ಸಂಸ್ಕೃತಿ. ದೇಶದ ಆಚರಣೆ. ಇದರಲ್ಲಿ ನಾವು ಪಾಲ್ಗೊಂಡಿದ್ದೇವೆ ಎಂದಿದ್ದಾರೆ.
Breaking ವಕ್ಫ್ ತಿದ್ದುಪಡಿ ಮಸೂದೆ ಈಗ ಕಾನೂನು, ರಾಷ್ಟ್ರಪತಿ ಮುರ್ಮು ಅಂಕಿತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ