ನೌಕರರ ನಾಯಿಯಂತೆ ನಡೆಸಿದ ವಿಡಿಯೋಗೆ ಟ್ವಿಸ್ಟ್, ಸಚಿವಾಲಯ ತನಿಖೆಯಲ್ಲಿ ಸತ್ಯ ಬಯಲು

ಮಾರ್ಕೆಟಿಂಗ್ ಕಂಪನಿ ಟಾರ್ಗೆಟ್ ರೀಚ್ ಆದ ಉದ್ಯೋಗಿಗಳನ್ನು ನಾಯಿಯಂತ ನಡೆಸಿಕೊಂಡಿದ್ದಾರೆ ಅನ್ನೋ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಈ ವಿಡಿಯೋಗೆ ಟ್ವಿಸ್ಟ್ ಎದುರಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ, ತನಿಖೆಯಲ್ಲಿ ಬಯಲು.  


ಕೊಚ್ಚಿ(ಏ.06) ಕಂಪನಿ ಉದ್ಯೋಗಿಗಳನ್ನು ನಾಯಿಯಿಂತೆ ನಡೆಸಿಕೊಂಡ ವಿಡಿಯೋ ಒಂದು ಭಾರಿ ವೈರಲ್ ಆಗಿತ್ತು. ಟಾರ್ಗೆಟ್ ರೀಚ್ ಮಾಡದವರನ್ನು ಕಂಪನಿ ನಾಯಿ ರೀತಿ ಕೊರಳಿಗೆ ಚೈನ್ ಕಟ್ಟಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎನ್ನಲಾದ ವಿಡಿಯೋ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಕೇರಳದ ಕೊಚ್ಚಿಯ ಮಾರ್ಕೆಟಿಂಗ್ ಕಂಪನಿ ವಿರುದ್ಧ ಆಕ್ರೋಶಗಳು ಕೇಳಿಬಂದಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇರಳ ಸರ್ಕಾರ ತನಿಖೆಗೆ ಆದೇಶಿಸಿತ್ತು. ಇದರಂತೆ ಕಾರ್ಮಿಕ ಸಚಿವಾಲಯ ಈ ವಿಡಿಯೋ ಆಧರಿಸಿ ತನಿಖೆ ನಡೆಸುತ್ತಿದ್ದಂತೆ ಮಹತ್ವದ ಟ್ವಿಸ್ಟ್ ಎದುರಾಗಿದೆ. ಅಸಲಿ ಪ್ರಕರಣ ಮರೆ ಮಾಚಲು ಈ ವಿಡಿಯೋ ಬಳಸಿಕೊಳ್ಳಲಾಗಿದೆ ಅನ್ನೋ ಮಾಹಿತಿ ಬಯಲಾಗಿದೆ. 

ಕೊಚ್ಚಿ ಮಾರ್ಕೆಟಿಂಗ್ ಕಂಪನಿ ನೌಕರರಿಗೆ ಕಿರುಕುಳ ನೀಡಲಾಗಿದೆ ಅನ್ನೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಕಂಪನಿಯ ಟಾರ್ಗೆಟ್ ಪೂರೈಸದ ನೌಕರರನ್ನು ನಾಯಿಯಂತೆ ನೆಲದ ಮೇಲೆ ಓಡಾಡಿಸಿ, ನೆಲದ ಮೇಲಿನ ನಾಣ್ಯಗಳನ್ನು ನೆಕ್ಕಿಸಲಾಯಿತು. ಈ ವಿಡಿಯೋ ವೈರಲ್ ಆದ ನಂತರ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು. 

Latest Videos

ಕೆಲಸದ ಟಾರ್ಗೆಟ್ ರೀಚ್ ಆಗದ ಉದ್ಯೋಗಿ ಕುತ್ತಿಗೆಗೆ ಬೆಲ್ಟ್ ಕಟ್ಟಿ ನಾಯಿಯಂತೆ ನಡೆಸಿಕೊಂಡ ಮ್ಯಾನೇಜರ್!

ತನಿಖೆಯಲ್ಲಿ ಸತ್ಯ ಬಯಲು
ರಾಜ್ಯ ಕಾರ್ಮಿಕ ಇಲಾಖೆ ಈ ಪ್ರಕರಣದ ಕುರಿತು ತನಿಖೆ ನಡೆಸಿದೆ. ಕಂಪನಿ ಹಾಗೂ ನೌಕರರ ಪತ್ತೆ ಹಚ್ಚಿ ತನಿಖೆಗೆ ನಡೆಸಿದೆ. ಈ ವೇಳೆ ನೌಕರರ ಹೇಳಿದ ಮಾತುಗಳು ಅಚ್ಚರಿಗೆ ಕಾರಣವಾಗಿದೆ. ತನಗೆ ಯಾವುದೇ ರೀತಿಯಲ್ಲಿ ಕಿರುಕುಳ ಆಗಿಲ್ಲ ಎಂದು ನೌಕರ ಹೇಳಿದ್ದಾರೆ.ಇದೇ  ವೇಳೆ ಕೆಲಸದ ಸ್ಥಳದಲ್ಲಿ ಈ ಕಿರುಕುಳ ನಡೆದಿದೆ ಎನ್ನುವುದು ಆಧಾರ ರಹಿತಿ ಎಂದು  ಕಾರ್ಮಿಕ ಇಲಾಖೆ ತನಿಖೆಯಲ್ಲಿ ಸಾಬೀತಾಗಿದೆ.  ಇಬ್ಬರು ವ್ಯಕ್ತಿಗಳ ನಡುವಿನ ವೈಮನಸ್ಸಿನಿಂದ ಈ ವಿಡಿಯೋ ಹರಡಲಾಗಿತ್ತು, ಇದನ್ನು ಕೆಲಸದ ಸ್ಥಳದಲ್ಲಿ ಕಿರುಕುಳ ಎಂದು ಸುಳ್ಳು ಪ್ರಚಾರ ಮಾಡಲಾಗಿತ್ತು ಎಂದು ತನಿಖಾ ವರದಿ ಹೇಳಿದೆ.

ಬೇರೆ ಎಜೆನ್ಸಿಯಲ್ಲಿ ನಡೆದ ಘಟನೆ
ಈ ವಿಡಿಯೋ ತಮ್ಮ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ನಡೆದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಬೇರೆ ಎಜೆನ್ಸಿಯಲ್ಲಿ ನಡೆದ ಘಟನೆ ವಿಡಿಯೋ ಇದಾಗಿದೆ. ಈ ವಿಡಿಯೋ ತಮಾಷೆಗಾಗಿಯೋ ಅಥವಾ ಗಂಭೀರವಾಗಿ ಮಾಡಿದ್ದಾರೋ ಗೊತ್ತಿಲ್ಲ ಎಂದು ಆರೋಪ ಎದುರಿಸುತ್ತಿರುವ ಮಾರ್ಕೆಟಿಂಗ್ ಕಂಪನಿ ಹೇಳಿದೆ.

ಈ ಮಧ್ಯೆ, ರಾಜ್ಯ ಮಾನವ ಹಕ್ಕುಗಳ ಆಯೋಗವು (Kerala Human Rights Commission) ಹೈಕೋರ್ಟ್ ವಕೀಲ ಕುಲತೂರ್ ಜಯಸಿಂಗ್ ಅವರ ದೂರಿನ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಹನ್ಸಿಕಾ ಮೇಲೆ ಕಿರುಕುಳ ಕೇಸ್, ಕೋರ್ಟ್‌ಗೆ ಹೋದ ಅತ್ತಿಗೆ: ಬಿಂದಾಸ್ ನಟಿ ಮಾಡಿದ್ದೇನು?

click me!