ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸರ್ವೇಗೆ ವಾರಣಾಸಿ ಕೋರ್ಟ್ ಅವಕಾಶ ನೀಡಿದೆ. ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಕೋರ್ಟ್ ಹೇಳಿದೆ.
ವಾರಣಾಸಿ (ಜು.21): ಜ್ಞಾನವಾಪಿ ಮಸೀದಿ ಆವರಣದಲ್ಲಿ ಇದೆ ಎನ್ನಲಾಗುವ ಶಿವಲಿಂಗದ ಆಕೃತಿ ಇರುವ ವಜುಕಾನಾ ಹೊರತುಪಡಿಸಿ ಉಳಿದ ಎಲ್ಲಾ ಕಡೆ ವೈಜ್ಞಾನಿಕ ಸರ್ವೇ ನಡೆಸಲು ವಾರಣಾಸಿ ಕೋರ್ಟ್ ಅನುಮತಿ ನೀಡಿದೆ. ದರೊಂದಿಗೆ ಈ ಕೇಸ್‌ನಲ್ಲಿ ಹಿಂದೂಗಳಿಗೆ ಭಾರೀ ಜಯ ಸಿಕ್ಕಿದಂತಾಗಿದೆ. ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಆಗಸ್ಟ್ 4ರ ಒಳಗಾಗಿ ತನಿಖೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ. ಅಧಿಕಾರಿಗಳು ಆವರಣದ ತಾಂತ್ರಿಕ ಸಮೀಕ್ಷೆಯನ್ನಷ್ಟೇ ಮಾಡಬೇಕು. ಯಾವುದೇ ರೀತಿಯ ಉತ್ಖನನ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಜ್ಞಾನವಾಪಿಯಲ್ಲಿ ಇರುವ ಶಿವಲಿಂಗ ಎಂದು ಹೇಳಲಾಗುವ ವಜುಕಾನಾದ ಪ್ರದೇಶದ ಸರ್ವೆ ಇದರಲ್ಲಿ ಇರುವುದಿಲ್ಲ. ಇದಕ್ಕೆ ಸುಪ್ರೀಂ ಕೋರ್ಟ್‌ನ ಅನುಮತಿ ಬೇಕಾಗಿದೆ. ಈ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ವೈಜ್ಞಾನಿಕ ಸರ್ವೇಗೆ ಮುಸ್ಲಿಂ ಕಡೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಎರಡೂ ಕಡೆಯ ವಾದ-ವಿವಾದಗಳನ್ನು ಆಲಿಸಿದ ಕೋರ್ಟ್ ಎಎಸ್‌ಐ ಸರ್ವೇಗೆ ಅನುಮತಿ ನೀಡಿದೆ.
ಇಡೀ ಪ್ರಕರಣದ ವಿಚಾರಣೆಯನ್ನು ಆಲಿಸಿದ ವಾರಣಾಸಿ ಜಿಲ್ಲಾ ಕೋರ್ಟ್‌ನ ನ್ಯಾಯಮೂರ್ತಿ ಅಜಯ್ ಕೃಷ್ಣಾ ವಿಶ್ವೇಶ್ ತೀರ್ಪು ನೀಡಿದ್ದಾರೆ. ಶೃಂಗಾರ್ ಗೌರಿ-ಜ್ಞಾನವಾಪಿ ಸಂಕೀರ್ಣದಲ್ಲಿ ವೈಜ್ಞಾನಿಕ ಸರ್ವೆ ನಡೆಸುವಂತೆ ನಾಲ್ವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಜುಲೈ 14ರಂದೇ ಮುಕ್ತಾಯವಾಗಿತ್ತು. ಆದರೆ, ತೀರ್ಪನ್ನು ಜುಲೈ 21ಕ್ಕೆ ಕಾಯ್ದಿರಿಸಲಾಗಿತ್ತು.
ಮೇ 16, 2023 ರಂದು, ಹಿಂದೂ ಕಡೆಯವರು ನಾಲ್ವರು ಮಹಿಳೆಯರ ಪರವಾಗಿ ಅರ್ಜಿಯನ್ನು ಸಲ್ಲಿಸಿದ್ದರ. ಜ್ಞಾನವಾಪಿ ಮಸೀದಿಯ ವಿವಾದಿತ ಭಾಗವನ್ನು ಹೊರತುಪಡಿಸಿ ಇಡೀ ಸಂಕೀರ್ಣವನ್ನು ಎಎಸ್‌ಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಈ ಅರ್ಜಿಯ ಕುರಿತು ತೀರ್ಪು ನೀಡುವಾಗ ನ್ಯಾಯಾಲಯ ಸರ್ವೇಗೆ ಅನುಮತಿ ನೀಡಿದ.ೆ ಹಿಂದೂ ಪರ ವಾದ ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್, ‘‘ನನ್ನ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಲಾಗಿದ್ದು, ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್‌ಐ ಸಮೀಕ್ಷೆಗೆ ನ್ಯಾಯಾಲಯವು ಸೂಚಿಸಿದೆ, ಸೀಲ್ ಮಾಡಲಾಗಿರುವ ಪ್ರದೇಶವನ್ನು ಸರ್ವೇಯಿಂದ ಹೊರಗಿಡಲಾಗಿದೆ' ಎಂದು ತಿಳಿಸಿದ್ದಾರೆ.
12 ಮತ್ತು 14 ಜುಲೈ 2023 ರಂದು ನಡೆದ ವಿಚಾರಣೆಯಲ್ಲಿ, ಮುಸ್ಲಿಂ ಕಡೆಯಿಂದ ಬಲವಾದ ಆಕ್ಷೇಪಣೆಯನ್ನು ಎತ್ತಲಾಯಿತು. ಜ್ಞಾನವಾಪಿ ಸಂಕೀರ್ಣದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆ ಇದ್ದರೆ, ಅಂತಹ ಪರಿಸ್ಥಿತಿಯಲ್ಲಿ ಜ್ಞಾನವಾಪಿಯ ರಚನೆಯು ಉತ್ಖನನದಿಂದ ಕೆಟ್ಟದಾಗಿ ಹಾನಿಗೊಳಗಾಗಬಹುದು, ಆದ್ದರಿಂದ ಜ್ಞಾನವಾಪಿ ಮಸೀದಿ ಆವರಣದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆ ಬೇಡ ಎಂದು ಅವರು ಹೇಳಿದ್ದರು.
ಇದೇ ವಿಷಯದ ಕುರಿತು ಕಳೆದ ವಿಚಾರಣೆಯ ಸಂದರ್ಭದಲ್ಲಿ ಹಿಂದೂ ಪರ ವಕೀಲರು, ಹೈಕೋರ್ಟ್, ಸುಪ್ರೀಂ ಕೋರ್ಟ್‌ನ ಕಾನೂನು ನಿರೂಪಣೆಗಳನ್ನು ಜಿಲ್ಲಾ ನ್ಯಾಯಾಲಯದ ಮುಂದೆ ವಿವರವಾಗಿ ಇಟ್ಟುಕೊಂಡು, ಪುರಾತತ್ತ್ವ ಶಾಸ್ತ್ರದ ಸಮೀಕ್ಷೆ ನಡೆಸುವುದು ಅವಶ್ಯಕ ಎಂದು ಜಿಲ್ಲಾ ನ್ಯಾಯಾಧೀಶರಿಗೆ ಮನವಿ ಮಾಡಿದರು. ಜ್ಞಾನವಾಪಿ ಸಂಕೀರ್ಣ, ಜ್ಞಾನವಾಪಿ ಸಂಕೀರ್ಣದಲ್ಲಿ ಯಾವ ಅವಧಿಯಲ್ಲಿ ದೇವಾಲಯವನ್ನು ಯಾವ ರಚನೆಯಿಂದ ನಿರ್ಮಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹಿಂದುಗಳಿಗೆ ಬಹಳ ಮುಖ್ಯವಾಗಿದೆ ಎಂದಿದ್ದರು.
'ನನಗೆ ಕಿರುಕುಳ ನೀಡ್ತಿದ್ದಾರೆ..' ಜ್ಞಾನವಾಪಿ ಪ್ರಕರಣದಿಂದ ಹಿಂದೆ ಸರಿಯಲು ಮುಂದಾದ ಹಿಂದೂ ಅರ್ಜಿದಾರರು!
ತೀರ್ಪು ಪ್ರಶ್ನಿಸಲಿರುವ ಮಸೀದಿ ಸಮಿತಿ: ಪುರಾತತ್ವ ಇಲಾಖೆ ಸರ್ವೇ ತೀರ್ಪನ್ನು ಅಲಹಾಬಾದ್ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಸಿದ್ದತೆ ನಡೆಸಲಾಗುತ್ತಿದೆ. ಮಸೀದಿ ಕಮಿಟಿಯಿಂದ ಪ್ರಶ್ನಿಸಲು ಸಿದ್ದತೆ ಮಸೀದಿಯಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಸಲು ವಾರಣಾಸಿ ಕೋರ್ಟ್ ತೀರ್ಪು ನೀಡಿದೆ. ಈ ಕುರಿತಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದಿದೆ.
Gyanvapi Case: ಹಿಂದುಗಳಿಗೆ ಭಾರಿ ಜಯ, ಮಸೀದಿ ಸಮಿತಿಯ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಕೋರ್ಟ್!