ಹಿಂಸಾಚಾರದಲ್ಲಿ ಬೆಂದಿರುವ ಮಣಿಪುರ ಜನತೆಗೆ ಮತ್ತೊಂದು ಆಘಾತ, ಹಲೆವೆಡೆ ಭೂಕಂಪನ!

Published : Jul 21, 2023, 03:25 PM IST
ಹಿಂಸಾಚಾರದಲ್ಲಿ ಬೆಂದಿರುವ ಮಣಿಪುರ ಜನತೆಗೆ ಮತ್ತೊಂದು ಆಘಾತ, ಹಲೆವೆಡೆ ಭೂಕಂಪನ!

ಸಾರಾಂಶ

ಹಿಂಸಾಚಾರ, ಮಹಿಳೆಯ ಬೆತ್ತಲೆ ಮೆರವಣಿಗೆ ಸೇರಿದಂತೆ ಹಲವು ಕಾರಣಗಳಿಂದ ಮಣಿಪುರ ಬೆಂದು ಹೋಗಿದೆ. ಈ ಗಾಯದ ಮೇಲೆ ಮತ್ತೊಂದು ಬರೆ ಎಳೆಯಲಾಗಿದೆ. ಇಂದು ರಾಜಸ್ಥಾನ ಹಾಗೂ ಮಣಿಪುರದಲ್ಲಿ ಭೂಕಂಪನ ಸಂಭವಿಸಿದೆ.

ನವದೆಹಲಿ(ಜು.21) ಹಿಂಸಾಚಾರ, ಗಲಭೆ, ದಾಳಿ, ಗುಂಡಿನ ಶಬ್ದದ ಜೊತೆಗೆ ಬದುಕು ಸಾಗಿಸುತ್ತಿರುವ ಮಣಿಪುರದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಇಂದು ಮಣಿಪುರ, ರಾಜಸ್ಥಾನ ಭಾಗದಲ್ಲಿ ಭೂಕಂಪನವಾಗಿದೆ. ಮಣಿಪುರದ ಉರುಕುಲ್ ಭಾಗದಲ್ಲಿ 3.5ರ ತೀವ್ರತೆಯಲ್ಲಿ ಭೂಕಂಪನ ಸಂಭಿವಿಸಿದೆ. ಲಘು ಭೂಕಂಪನವಾಗಿರುವ ಕಾರಣ ಮಣಿಪುರದಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ. ಆದರೆ ಉರುಕುಲ್ ಭಾಗದಲ್ಲಿ ಹಲವರು ಭೂಮಿ ಕಂಪಿಸುತ್ತಿದ್ದಂತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಮಣಿಪುರಕ್ಕೂ ಮೊದಲು ರಾಜಸ್ಥಾನದ ಜೈಪುರ್‌ದಲ್ಲೂ ಭೂಕಂಪನವಾಗಿದೆ. ಜೈಪುರದಲ್ಲಿ ಹಲವು ಬಾರಿ ಭೂಮಿ ಕಂಂಪಿಸಿದೆ. 

ಇಂದು ಮುಂಜಾನೆ 4.27ರ ಹೊತ್ತಿಗೆ ಜೈಪುರದ ಕೆಲ ಭಾಗದಲ್ಲಿ 4.4 ರಿಕ್ಟರ್ ಮಾಪನ ತ್ರೀವತೆಯಲ್ಲಿ ಭೂಮಿ ಕಂಪಿಸಿದೆ. ಕೆಲವೇ ಕ್ಷಣಗಳಲ್ಲಿ 3.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇನ್ನು ಬೆಳಗ್ಗೆ 5.10 ನಿಮಿಷಕ್ಕೆ 3.4ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಆರಂಭಿಕ 2 ಭೂಕಂಪನದಿಂದ ಜನರು ಎಚ್ಚೆತ್ತುಕೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇನ್ನು ಮೂರನೇ ಭಾರಿ ಭೂಮಿ ಕಂಪಿಸಿದಾಗ ಆತಂಕ ಹೆಚ್ಚಾಗಿದೆ. 

 

ಜಮ್ಮು ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ!

ಭೂಕಂಪನದ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಹಲವು ವಿಡಿಯೋಗಳಲ್ಲಿ ಭೂಮಿ ಕಂಪಿಸುತ್ತಿರುವ ಹಾಗೂ ಜನರು ಭಯಭೀತಗೊಂಡಿರುವ ದೃಶ್ಯಗಳಿವೆ. ಅದೃಷ್ಟವಶಾತ್ ಜೈಪುರ ಹಾಗೂ ಮಣಿಪುರದಲ್ಲಿ ಲಘು ಭೂಕಂಪನ ಯಾವುದೇ ಹಾನಿ ಮಾಡಿಲ್ಲ. 

ಭಾರತದಲ್ಲಿ ಇತ್ತೀಚೆಗೆ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿಲಘು ಭೂಕಂಪನಗಳು ಸಂಭವಿಸಿತ್ತು. ಇತ್ತ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಭೂಕುಸಿತ ಸಂಭಲಿಸಿತ್ತು. ಇದರ ಬೆನ್ನಲ್ಲೇ ಭೂಕಂಪನವೂ ಸಂಭವಿಸಿದೆ. ಇತ್ತೀಚೆಗೆ ಲಾಹೌಲ್‌ ಹಾಗೂ ಸ್ಪಿಟಿ ಜಿಲ್ಲೆಗಳಲ್ಲಿ 3.1 ಹಾಗೂ 3.2 ತೀವ್ರತೆಯ ಅವಳಿ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಈ ನಡುವೆ ಭಾರಿ ಮಳೆಯಿಂದಾಗಿ ಚಂದ್ರತಾಳ್‌ ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿ ಭಾರಿ ಅತಂತ್ರದಲ್ಲಿ ಸಿಲುಕಿದ್ದ 290 ಪ್ರವಾಸಿಗರನ್ನು ಕರೆತರಲು ಕಂದಾಯ ಸಚಿವ ಜಗತ್‌ ಸಿಂಗ್‌ ನೇಗಿ ಅವರನ್ನು ಕಳಿಸಲಾಗಿದೆ. 300 ಪ್ರವಾಸಿಗರ ಪೈಕಿ ಅನಾರೋಗ್ಯಕ್ಕೆ ತುತ್ತಾಗಿದ್ದ 7 ಜನರನ್ನು ಭಂಟರ್‌ಗೆ ಏರ್‌ಲಿಫ್‌್ಟಮಾಡಲಾಗಿದೆ. ಮಿಕ್ಕಂತೆ ಉಳಿದ ಪ್ರವಾಸಿಗರನ್ನು ಹೋಟೆಲ್‌, ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಆಶ್ರಯ ಕೊಟ್ಟು ಆಹಾರ ಪೂರೈಕೆ ಮಾಡಲಾಗುತ್ತಿದೆ. ಇದರಲ್ಲಿ ಇಸ್ರೇಲಿನ 37 ಜನ ಪ್ರವಾಸಿಗರು ಸುರಕ್ಷಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 

ಮಣಿಪುರಕ್ಕೆ ಮರುಗಿದ ಮಮತಾಗೆ ಬಂಗಾಳದ ನಗ್ನ ಮೆರವಣಿಗೆ ಕಾಣಿಸ್ಲೇ ಇಲ್ಲ; ಕಹಿ ಘಟನೆ ಬಿಚ್ಚಿಟ್ಟ ಬಿಜೆಪಿ!

ಇದಿಷ್ಟಲ್ಲದೇ ಕುಲ್ಲು ಹಾಗೂ ಮನಾಲಿಯಲ್ಲಿದ್ದ 25 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರನ್ನು ಸ್ಥಳಾಂತರ ಮಾಡಲಾಗಿದೆ. ಈಗಲೂ 1020 ರಸ್ತೆಗಳು ಬಂದ್‌ ಆಗಿದ್ದು, 1244 ಕುಡಿಯುವ ನೀರು ಸಂಪರ್ಕ ಕಳೆದುಕೊಂಡಿದೆ. 170 ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, 594 ಮನೆಗಳು ಭಾಗಶಃ ಹಾನಿಯಾಗಿದೆ. ಇಲ್ಲಿವರೆಗೂ 4000 ಕೋಟಿ ರು.ಗಳಷ್ಟುಹಾನಿ ಸಂಭವಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!