
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮಾಡಿದ ತಮಾಷೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೀಗ ಚರ್ಚೆಗೆ ಗ್ರಾಸವಾಗಿದೆ. ತಾಯಿಯೊಬ್ಬರು ತನ್ನ ಮಗುವಿಗಾಗಿ ಸೀಟ್ ಬುಕ್ ಮಾಡಿದ್ದರು. ಆದರೆ, ಮಗುವಿನ ಬದಲು ಮಗುವಿನ ಚಪ್ಪಲಿ ಸೀಟ್‌ನಲ್ಲಿ ಪ್ರಯಾಣ ಮಾಡುತ್ತಿದೆ ಎಂದು ತಮಾಷೆ ಮಾಡಿದ ನಂತರ ಈ ವಿಡಿಯೋ ಆನ್‌ಲೈನ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿರುವ ಈ ಕ್ಲಿಪ್‌ನಲ್ಲಿ ಮಹಿಳೆ ತನ್ನ ಕುಟುಂಬ ಪ್ರಯಾಣ ಮಾಡುತ್ತಿರುವುದನ್ನು ತಿಳಿಸಿದ್ದಾರೆ. ತಮ್ಮ ದೀರ್ಘ ಸಮಯದ ಪ್ರಯಾಣದ ಸಮಯದಲ್ಲಿ ಎದುರಿಸಿದ ಸಂಕಷ್ಟವನ್ನು ತಮಾಷೆಯಾಗಿ ಹೇಳಿದ್ದಾರೆ.
ವಿಡಿಯೋದಲ್ಲಿ ಮಹಿಳೆ ತನ್ನ ಕುಟುಂಬವು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮೂರು ಸೀಟ್ ಬುಕ್ ಮಾಡಿತ್ತು. ಇದರಲ್ಲಿ ಮಗುವಿನ ಸೀಟ್ ಕೂಡ ಸೇರಿತ್ತು. ಆದರೆ, ಚಿಕ್ಕ ಮಗು ಸೀಟ್‌ನಲ್ಲಿ ಕೂರದೆ ತನ್ನ ತಂದೆಯ ಮಡಿಲ್ಲಿ ಕುಳಿತುಕೊಂಡಿತ್ತು. ಇನ್ನು ಕಾಯ್ದಿರಿಸಿದ ಸೀಟ್‌ನಲ್ಲಿ ಒಂದು ಜೋಡಿ ಚಪ್ಪಲಿಗಳನ್ನು ಇಡಲಾಗಿತ್ತು. ಮಗುವಿನ ಸೀಟ್‌ನಲ್ಲಿ ಚಪ್ಪಲಿ ಪ್ರಯಾಣ ಮಾಡುತ್ತಿದೆ ಎಂದು ವಿವರಿಸಿದ್ದಾರೆ.
ಹಿಂದಿಯಲ್ಲಿ ಮಾತನಾಡುತ್ತಿದ್ದ ಮಹಿಳೆ, ನಾವು 7 ರಿಂದ 8 ಗಂಟೆ ಪ್ರಯಾಣ ಮಾಡಬೇಕಿತ್ತು. ಅದಕ್ಕಾಗಿ 1500 ರೂಪಾಯಿಯಿಂದ 1700 ರೂಪಾಯಿ ಬೆಲೆ ಇರುವ ವಯಸ್ಕ ಟಿಕೆಟ್‌ಅನ್ನು ಖರೀದಿ ಮಾಡಿದ್ದೆವು. ಬಳಿಕ ಚಪ್ಪಲಿಯತ್ತ ಕೈ ತೋರುವ ಆಕೆ, 100 ರೂಪಾಯಿಯ ಚಪ್ಪಲಿ ವಂದೇ ಭಾರತ್‌ನ ಪ್ರೀಮಿಯಂ ಸೀಟ್‌ನ ಆನಂದ ಪಡೆಯುತ್ತಿದೆ. ಆದರೆ, ನನ್ನ ಮಗು ಅಪ್ಪನ ಮಡಿಲಲ್ಲಿ ಮಲಗಿರುವುದು ಕಂಡಿದೆ. ಇದು ಅದರ ಸ್ಟೇಟಸ್‌ಅನ್ನು ತೋರಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ.
ತಮಾಷೆಗಾಗಿ ಮಹಿಳೆ ಈ ವಿಡಿಯೋ ಮಾಡಿದ್ದಾಗಿದ್ದರೂ, ಆನ್‌ಲೈನ್‌ನಲ್ಲಿ ಬಂದಿರುವ ಪ್ರತಿಕ್ರಿಯೆಗಳು ಭಿನ್ನವಾಗಿದ್ದವು.
14,000 ವೀಕ್ಷಣೆಗಳೊಂದಿಗೆ, ಚಪ್ಪಲಿಯ "ಐಷಾರಾಮಿ" ಬಗ್ಗೆ ತಮಾಷೆಯ ವ್ಯಂಗ್ಯ ಮತ್ತು ದೂರನ್ನು ಹೆಸರಿಸಲಾದ ಟೀಕೆಗಳ ನಡುವೆ ಪ್ರತಿಕ್ರಿಯೆಗಳು ವಿಭಜನೆಯಾಗಿವೆ, ಇದು ಭಾರತದಲ್ಲಿ ಸಾರ್ವಜನಿಕ ಸಾರಿಗೆ ನಾಗರಿಕತೆಯ ಕುರಿತು ನಡೆಯುತ್ತಿರುವ ಆನ್‌ಲೈನ್ ಚರ್ಚೆಗಳನ್ನು ಪ್ರತಿಬಿಂಬಿಸುತ್ತದೆ.
ಇದೆಂಥ ಮೂರ್ಖತನದ ಕಂಟೆಂಟ್. 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಟಿಕೆಟ್ ತೆಗೆದುಕೋ ಅಂತಾ ಯಾರಾದರೂ ಹೇಳಿದ್ರಾ? ಸಿಕ್ಕಾಪಟ್ಟೆ ಹಣ ಇದ್ದರೆ ಹೀಗೆ ಆಗುತ್ತದೆ' ಎಂದು ಒಬ್ಬರು ಬರೆದಿದ್ದಾರೆ.
ಇದಕ್ಕಿಂತ ಒಳ್ಳೆಯದು ಏನಿದೆ? ಕೆಲವೊಬ್ಬರಿಗೆ ಪ್ರಯಾಣ ಮಾಡಲು ಸೀಟ್ ಇರೋದಿಲ್ಲ. ಆದರೆ, ಇಲ್ಲಿ ನೀವು ವಿಡಿಯೋ ಮಾಡ್ತಿದ್ದೀರಿ. ನಿಮಗೆ ರಾಷ್ಟ್ರಪತಿ, ಪ್ರಧಾನಿ ಹಾಗೂ ರೈಲ್ವೆ ಸಚಿವರಿಂದ ಸನ್ಮಾನ ಆಗಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಹಾಗಿದ್ದರೆ, ನೀವು ಚಪ್ಪಲಿಗೆ ಜನ್ಮ ನೀಡಬೇಕಿತ್ತು. ಸರ್ಕಾರ ಏನೂ ನೀವು ಮಕ್ಕಳು ಮಾಡಿಕೊಳ್ಳಿ, ಟಿಕೆಟ್ ಖರೀದಿ ಮಾಡಿ ಅಂತಾ ಹೇಳಿಲ್ಲವಲ್ಲ. ನಿಮ್ಮ ಖುಷಿಗೋಸ್ಕರ ಹಣ ಖರ್ಚು ಮಾಡಿದ್ದೀರಿ. ಮಗು ನಿಮ್ಮದು, ಮಲಗಿರುವುದು ನಿಮ್ಮ ಗಂಡನ ಮಡಿಲಲ್ಲಿ, ಆದ್ರೆ ಬೈಗುಳ ಮಾತ್ರ ಸರ್ಕಾರಕ್ಕಾ? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ