
ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ತಮ್ಮ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಇಬ್ಬರು ಹದಿಹರೆಯದ ಮಕ್ಕಳನ್ನು ಹಾಸ್ಟೆಲ್‌ನಿಂದ ಕರೆತಂದು ಬಳಿಕ ಜೊತೆಯಾಗಿ ರೈಲು ಹಳಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ. ಶನಿವಾರ ಹೈದರಾಬಾದ್ ಹೊರವಲಯದಲ್ಲಿ ಈ ದುರಂತ ನಡೆದಿದೆ. ಅವರ ಇಬ್ಬರು 17 ಹಾಗೂ 18ರ ಹರೆಯದವರಾಗಿದ್ದು, ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದುತ್ತಿದ್ದರು. ಮಹಿಳೆಯ ಪತಿ ವಿಜಯ್‌ನಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಮೇಲ್ನೋಟಕ್ಕೆ ಸ್ಥಿತಿವಂತರಾಗಿದ್ದ ಇವರಿಗೆ ಸಾಯುವಂತದ್ದು ಏನಾಗಿತ್ತೋ ಗೊತ್ತಿಲ್ಲ. ರೈಲಿಗೆ ತಲೆಕೊಟ್ಟು ಜೀವನ ಅಂತ್ಯಗೊಳಿಸಿದ್ದಾರೆ. ತೆಲಂಗಾಣದ ಚೆರ್ಲಪಲ್ಲಿ ಮತ್ತು ಘಟ್ಕೇಸರ್ ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳಲ್ಲಿ ಈ ದುರಂತ ನಡೆದಿದೆ. ಸರಕು ರೈಲು ಸಮೀಪಿಸುತ್ತಿದ್ದಂತೆ ಈ ತಾಯಿ ಮಕ್ಕಳು ರೈಲಿಗೆ ತಲೆಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರನ್ನು 38 ವರ್ಷದ ವಿಜಯಶಾಂತಿ ರೆಡ್ಡಿ, ಅವರ ಮಗಳು 18 ವರ್ಷದ ಚೇತನಾ ರೆಡ್ಡಿ ಅವರ 17 ವರ್ಷದ ಮಗ ವಿಶಾಲ್ ರೆಡ್ಡಿ ಎಂದು ಗುರುತಿಸಲಾಗಿದೆ. ವಿಜಯಶಾಂತಿ ಅವರು ತೆಲಂಗಾಣದ ಮೆಡ್ಚಲ್-ಮಲ್ಕಜ್‌ಗಿರಿ ನಿವಾಸಿಯಾಗಿದ್ದು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಹಾಗೆಯೇ ಅವರ ಇಬ್ಬರೂ ಮಕ್ಕಳು ಸ್ಥಳೀಯ ಕಾಲೇಜುಗಳಲ್ಲಿ ಪಿಯುಸಿ(intermediate students) ವಿದ್ಯಾರ್ಥಿಗಳಾಗಿದ್ದರು.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ವಿಜಯಾ ಮನೆಯಿಂದ ಹೊರಟು ಬಂದಿದ್ದು, ಹಾಸ್ಟೆಲ್‌ನಲ್ಲಿ ಓದುತ್ತಿದ್ದ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ನಂತರ ಕಾರಿನಲ್ಲಿ ರೈಲು ಹಳಿಗೆ ಹೋಗಿ ಹಳಿಗಳ ಮೇಲೆ ಸ್ವಲ್ಪ ಸಮಯ ನಡೆದುಕೊಂಡು ಹೋಗಿದ್ದಾರೆ. ಅದೇ ಸಮಯದಲ್ಲಿ ಆ ಹಳಿಯ ಮೇಲೆ ಹಾದು ಹೋಗುತ್ತಿದ್ದ ಗೂಡ್ಸ್ ರೈಲಿನ ಚಾಲಕ ಅವರನ್ನು ಗಮನಿಸಿ ಪದೇ ಪದೇ ಹಾರ್ನ್ ಹಾಕಿದ್ದಾರೆ. ಅದರೆ ಈ ಅಮ್ಮ ಮಕ್ಕಳು ಮಾತ್ರ ಹಳಿಯಿಂದ ದೂರ ಸರಿದಿಲ್ಲ, ಪರಿಣಾಮ ಮೂವರಿಗೂ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಸಿಕಂದರಾಬಾದ್ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ತಿಳಿಸಿದ್ದಾರೆ.
ಇದನ್ನೂ ಓದಿ: ಕುಟುಂಬದ ವಿರೋಧದ ನಡುವೆ ತನಗೊಂದು ಸುಂದರ ಬದುಕು ನೀಡಿದ ದತ್ತು ತಂದೆಗೆ ಭಾವುಕವಾಗಿ ಕೃತಜ್ಞತೆ ಸಲ್ಲಿಸಿದ ಮಗಳು
ಘಟನಾ ಸ್ಥಳದಲ್ಲಿದ್ದ ಕುಟುಂಬದ ಕಾರಿನಲ್ಲಿ ವಿಜಯಶಾಂತಿ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ಅವರು ಸಂಬಂಧಿಕರಿಗೆ ಕ್ಷಮೆಯಾಚಿಸಿದ್ದಾರೆ. ತಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳನ್ನು ಒಂಟಿಯಾಗಿ ಬಿಡುವ ಬಗ್ಗೆ ಭಯವಾಗುತ್ತಿದೆ ಎಂದು ಬರೆದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಆದರೆ ಸಾಯುವ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಬಹುಶಃ ಮಕ್ಕಳು ಅಮ್ಮನಿಲ್ಲದೇ ಒಂಟಿಯಾಗಿ ಬಿಡುತ್ತಾರೆ ಎಂಬ ಭಯದಲ್ಲೇ ಆ ತಾಯಿ ಸಾಯುವುದಕ್ಕೆ ಮಕ್ಕಳ ಮನಸ್ಸನ್ನು ಒಲಿಸಿ ಒಟ್ಟಿಗೆ ಸಾವಿಗೆ ಶರಣಾಗಿರುವ ಸಾಧ್ಯತೆ ಇದೆ. ಆದರೆ ಹೀಗೆ ಹಠಾತ್ ಆಗಿ ಸಾಯುವುದಕ್ಕೆ ಕಾರಣ ಏನಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೆ ಬಂದ ಕರೆಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೀಚ್‌ನಲ್ಲಿ ಗಾಂಜಾ ಒಣಗಲು ಹಾಕಿ ಅಲ್ಲೇ ನಿದ್ದೆಗೆ ಜಾರಿದ ಆರೋಪಿಯ ಬಂಧನ
ದುಬೈನಲ್ಲಿ ಕೆಲಸ ಮಾಡುತ್ತಿರುವ ವಿಜಯಾ ಅವರ ಪತಿ, ಸಾವಿನ ಬಗ್ಗೆ ತಿಳಿದು ನಗರಕ್ಕೆ ಮರಳಿದ್ದು, ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸಂಬಂಧಿಕರು ಮತ್ತು ನೆರೆಹೊರೆಯವರ ಪ್ರಕಾರ ಈ ಕುಟುಂಬಕ್ಕೆ ಆರ್ಥಿಕ ತೊಂದರೆ ಇರಲಿಲ್ಲ, ಸಂಘರ್ಷದ ಯಾವುದೇ ಸ್ಪಷ್ಟ ಲಕ್ಷಣಗಳಿರಲಿಲ್ಲ ಆದರೂ ಅವರ ಹಠಾತ್ ಸಾವು ಅವರ ಸಂಬಂಧಿಗಳಿಗೆ ತೀವ್ರ ಆಘಾತ ನೀಡಿದೆ. ಶವಗಳನ್ನು ಸಿಕಂದರಾಬಾದ್‌ನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕುಟುಂಬವು ಈ ಕೃತ್ಯಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಮನವಿ:
ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:
Sahai Helpline - 080 2549 7777
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ