
ಲಖನೌ: ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಂದೇಭಾರತ ಎಕ್ಸ್‌ಪ್ರೆಸ್ ರೈಲು ಉತ್ತರ ಪ್ರದೇಶದ ಎಟಾ ಜಿಲ್ಲೆಯಲ್ಲಿ ನಿಲುಗಡೆ ಆಗಿದ್ದು, ಅದನ್ನು ಗೂಡ್ಸ್ ರೈಲಿನ ಎಂಜಿನ್ ಸಹಾಯದಿಂದ ಎಳೆಸಿದ ವಿಚಿತ್ರ ಪ್ರಸಂಗ ಸೋಮವಾರ ನಡೆದಿದೆ.
ದೆಹಲಿಯಿಂದ ವಾರಾಣಸಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಎಂಜಿನ್‌ನಲ್ಲಿ ಬೆಳಿಗ್ಗೆ 9.15ರ ಸುಮಾರಿಗೆ ತಾಂತ್ರಿಕ ದೋಷ ಕಂಡುಬಂದಿದೆ. ಎಂಜಿನಿಯರ್‌ಗಳು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆದ್ದರಿಂದ 10.24ಕ್ಕೆ ಗೂಡ್ಸ್ ರೈಲಿನ ಎಂಜಿನ್ ಮುಖಾಂತರ ಭರ್ತಾನಾ ರೈಲು ನಿಲ್ದಾಣದ ವರೆಗೆ ಎಳೆದುಕೊಂಡು ಬರಲಾಗಿದೆ. ನಂತರ ಅನ್ಯ ರೈಲಲ್ಲಿ ಪ್ರಯಾಣಿಕರನ್ನು ಕಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲಿನಲ್ಲಿ ಸುಮಾರು 730 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಬೆಂಗಳೂರಿನ BEMLನಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಅನಾವರಣ
ಶೀಘ್ರದಲ್ಲಿಯೇ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್
ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸೇವೆ ದೊರೆತ್ತಿದ್ದು, ಶೀಘ್ರದಲ್ಲಿಯೇ ಹುಬ್ಬಳ್ಳಿ-ಪುಣೆ ನಡುವೆ ಸಂಚಾರ ಆರಂಭಿಸಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಒಪ್ಪಿಗೆ ಸೂಚಿಸಿದ್ದಾರೆ. ಹೊಸದಾಗಿ ಆರಂಭವಾಗಲಿರುವ ರೈಲು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ, ಪುಣೆಯಲ್ಲಿ ನಿಲುಗಡೆ ಆಗಲಿದೆ.
ಹುಬ್ಬಳ್ಳಿ-ಪುಣೆ ಮಧ್ಯೆ ಆದಷ್ಟು ಬೇಗ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವುದಾಗಿ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆಂದು ಜೋಶಿ ಅವರು ಎಕ್ಸ್ ಖಾತೆಯಲ್ಲಿ ಸೋಮವಾರ ಸಂತಸ ಹಂಚಿಕೊಂಡಿದ್ದಾರೆ. ಇದರಿಂದಾಗಿ ಛೋಟಾ ಮುಂಬೈ ಎಂದೇ ಖ್ಯಾತವಾದ ಹುಬ್ಬಳ್ಳಿ-ಪುಣೆ ನಡುವೆ ವಾಣಿಜ್ಯ ಚಟುವಟಿಕೆ ಹೆಚ್ಚಾಗಲಿದೆ. ಜತೆಗೆ ಉತ್ತರ ಕರ್ನಾಟಕದ ಜನರ ಪುಣೆ ಮತ್ತು ಮುಂಬೈ ಪ್ರಯಾಣ ಸುಗಮವಾಗಲಿದ್ದು, ಮಹಾರಾಷ್ಟ್ರದ ಮಂದಿಗೂ ಸಹಾಯವಾಗಲಿದೆ. ಕಳೆದ 2 ತಿಂಗಳ ಹಿಂದೆಯೇ ಜೋಶಿ ಅವರು ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಹುಬ್ಬಳ್ಳಿಯಿಂದ ಪುಣೆಗೆ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ಮನವಿ ಮಾಡಿದ್ದರು.
ಇದು ರೈಲು ಸೀಟಿಗಾಗಿ ನಡೆದ ಜಗಳವಲ್ಲ, ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್ ಕಿತ್ತಾಟ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ