ಭಾರತಕ್ಕೂ ಮಂಕಿಪಾಕ್ಸ್ ಪ್ರವೇಶ; ಸನ್ನದ್ಧ ಸ್ಥಿತಿಗೆ ರಾಜ್ಯಗಳಿಗೆ ಕೇಂದ್ರ ಸೂಚನೆ

Published : Sep 10, 2024, 08:14 AM IST
ಭಾರತಕ್ಕೂ ಮಂಕಿಪಾಕ್ಸ್ ಪ್ರವೇಶ; ಸನ್ನದ್ಧ ಸ್ಥಿತಿಗೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಸಾರಾಂಶ

ಆಫ್ರಿಕಾದ ದೇಶಗಳಲ್ಲಿ ಸಾವು-ನೋವಿಗೆ ಕಾರಣವಾಗಿದ್ದ ಮಂಕಿಪಾಕ್ಸ್‌ ವೈರಸ್‌ ಪ್ರಕರಣ ಭಾರತದಲ್ಲಿ ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ 26 ವರ್ಷದ ಹರ್ಯಾಣದ ಹಿಸಾರ್‌ ಮೂಲದವನಾಗಿದ್ದು, ಆತನನ್ನು ದಿಲ್ಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆ 2022ರಲ್ಲಿ ಭಾರತದಲ್ಲಿ 30 ಮಂಕಿಪಾಕ್ಸ್‌ ಪ್ರಕರಣಗಳು ದಾಖಲಾಗಿದ್ದವು.

ನವದೆಹಲಿ: ಆಫ್ರಿಕಾದ ದೇಶಗಳಲ್ಲಿ ಸಾಕಷ್ಟು ಸಾವು-ನೋವಿಗೆ ಕಾರಣವಾದ ಮಂಕಿಪಾಕ್ಸ್‌ ವೈರಸ್‌ನ ಮೊದಲ ಪ್ರಕರಣವೊಂದು ಭಾರತದಲ್ಲಿ ದೃಢಪಟ್ಟಿದೆ. ಮಂಕಿಪಾಕ್ಸ್‌ ಸಾಂಕ್ರಾಮಿಕ ವ್ಯಾಪಕವಾಗಿದ್ದ ದೇಶಕ್ಕೆ ತೆರಳಿದ್ದ ವೇಳೆ ಯುವಕನೊಬ್ಬನಿಗೆ ಈ ಸೋಂಕು ತಗುಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಮಾಹಿತಿ ನೀಡಿದೆ. ಆದರೆ ಸೋಂಕಿತ ವ್ಯಕ್ತಿ 26 ವರ್ಷದ ಹರ್ಯಾಣದ ಹಿಸಾರ್‌ ಮೂಲದವನಾಗಿದ್ದಾನೆ. ಆತನನ್ನು ದಿಲ್ಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
 
ಈ ಹಿಂದೆ 2022ರ ಜುಲೈನಿಂದ 2024ರ ಮಾರ್ಚ್‌ ಅವಧಿಯಲ್ಲಿ 30 ಪ್ರಕರಣಗಳು ಭಾರತದಲ್ಲಿ ದಾಖಲಾಗಿದ್ದವು. ಇದ್ದಿದ್ದರಲ್ಲೇ ಸಮಾಧಾನದ ವಿಷಯವೆಂದರೆ, ಭಾರತದಲ್ಲಿ ಇದೀಗ ಪತ್ತೆಯಾದ ವೈರಸ್‌ನ ಮಾದರಿಯು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲು ಕಾರಣವಾದ ಕಾಂಗೋ ದೇಶದಲ್ಲಿನ ‘ಕ್ಲಾಡ್‌ 1ಬಿ’ ತಳಿ ಅಲ್ಲ. ಬದಲಾಗಿ ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾದ ‘ಕ್ಲಾಡ್‌- 2’ ತಳಿ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಮೊದಲ ಪ್ರಕರಣ ದೃಢ
ಮಂಕಿಪಾಕ್ಸ್‌ ವೈರಸ್‌ ದೃಢಪಟ್ಟ ಕುರಿತು ಮಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ‘ಈ ಹಿಂದೆ ಶಂಕಿಸಲ್ಪಟ್ಟಿದ್ದ ಮಂಕಿಪಾಕ್ಸ್‌ ಪ್ರಕರಣ ಇದೀಗ ದೃಢಪಟ್ಟಿದೆ. ಪ್ರಯೋಗಾಲಯದಲ್ಲಿ ಈ ಮಾಹಿತಿ ಖಚಿತವಾಗಿದೆ. ಈ ಹಿಂದೆ 2022ರಲ್ಲಿ 30 ಕೇಸುಗಳು ದಾಖಲಾಗಿದ್ದಂತೆ ಇದು ಕೂಡಾ ಆಯ್ದ ಪ್ರಕರಣ. ಇದು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಲು ಕಾರಣವಾದ ಕ್ಲಾಡ್‌-1 ತಳಿ ಅಲ್ಲ’ ಎಂದು ಸ್ಪಷ್ಟಪಡಿಸಿದೆ.

ಜೊತೆಗೆ, ‘ಮಂಕಿಪಾಕ್ಸ್‌ ಪ್ರಸರಣವಾಗುತ್ತಿರುವ ದೇಶವೊಂದಕ್ಕೆ ತೆರಳಿದ್ದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ಸದ್ಯ ಸೋಂಕಿತ ವ್ಯಕ್ತಿಯನ್ನು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇಡಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ. ಆತ ಇತರೆ ಯಾವುದೇ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿಲ್ಲ. ಸದ್ಯ ಈ ಸೋಂಕು ದೊಡ್ಡ ಮಟ್ಟದಲ್ಲಿ ಪ್ರಸರಣಗೊಳ್ಳುವ ಯಾವುದೇ ಸುಳಿವು ಇಲ್ಲ’ ಎಂದು ಸಚಿವಾಲಯ ಧೈರ್ಯ ಹೇಳಿದೆ. ಕ್ಲಾಡ್‌ 1 ತಳಿ ಆಫ್ರಿಕಾ ದೇಶಗಳಲ್ಲಿ 15000ಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿದ್ದು 530ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.

ಜಾಗತಿಕ ಪಿಡುಗು

ಮಂಕಿಪಾಕ್ಸ್‌ ಸಾಂಕ್ರಾಮಿಕ ಆಫ್ರಿಕಾದ 12 ದೇಶಗಳಲ್ಲಿ ಈ ವರ್ಷವೊಂದರಲ್ಲೇ 500ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು, ಮಂಕಿಪಾಕ್ಸ್‌ ಅನ್ನು ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಿಸಿತ್ತು. ಅಲ್ಲದೆ ಇದರ ಪ್ರಸರಣ ತಡೆಗೆ ಜಾಗತಿಕ ಸಮುದಾಯ ಒಂದಾಗಬೇಕು ಎಂದು ಕರೆ ನೀಡಿತ್ತು. ಅದರ ಬೆನ್ನಲ್ಲೇ ಈ ಸೋಂಕು ಭಾರತಕ್ಕೂ ಪ್ರವೇಶ ಮಾಡಿದೆ.

ಸನ್ನದ್ಧ ಸ್ಥಿತಿಗೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಮಂಕಿಪಾಕ್ಸ್‌ ಸಾಂಕ್ರಾಮಿಕ ವ್ಯಾಪಕವಾಗಿರುವ ದೇಶದಿಂದ ಬಂದ ಯುವಕನೊಬ್ಬನಲ್ಲಿ ಶಂಕಿತ ಮಂಕಿಪಾಕ್ಸ್‌ ಲಕ್ಷಣಗಳು ಕಂಡುಬಂದ ಬೆನ್ನಲ್ಲೇ, ಕೇಂದ್ರ ಸರ್ಕಾರ ಹೈಅಲರ್ಟ್‌ ಘೋಷಿಸಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ಮತ್ತು ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಅದು ಸೂಚಿಸಿದೆ. ಆದರೆ ಇದೆ ವೇಳೆ, ಇದುವರೆಗೂ ದೇಶದಲ್ಲಿ ಮಂಕಿಪಾಕ್ಸ್‌ ವೈರಸ್‌ ದೃಢಪಟ್ಟಿಲ್ಲ. ಹೀಗಾಗಿ ಈ ಸಾಂಕ್ರಾಮಿಕದ ಕುರಿತು ಜನಸಮುದಾದ ಆತಂಕಕ್ಕೆ ಒಳಗಾಗದಂತೆ ನೋಡಿಕೊಳ್ಳುವಂತೆಯೂ ಸರ್ಕಾರ ಸಲಹೆ ನೀಡಿದೆ.

ಈ ಕುರಿತು ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ, ‘ಇದುವರೆಗೂ ದೇಶದಲ್ಲಿ ಮಂಕಿಪಾಕ್ಸ್‌ನ ಯಾವುದೇ ಪ್ರಕರಣ ದೃಢಪಟ್ಟಿಲ್ಲ. ಆದರೆ ಎಲ್ಲಾ ಬೆಳವಣಿಗೆಗಳ ಮೇಲೆ ಕೇಂದ್ರ ಸರ್ಕಾರ ನಿಗಾ ಇಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರಾಜ್ಯಗಳು, ವಿದೇಶಗಳಿಂದ ಬಂದ ಎಲ್ಲಾ ಶಂಕಿತರನ್ನು ತಪಾಸಣೆಗೆ ಒಳಪಡಿಸಬೇಕು, ಶಂಕಿತ ಸೋಂಕಿತರ ನಿರ್ವಹಣೆಗೆ ಸಜ್ಜಾಗಿರಬೇಕು’ ಎಂದಿದ್ದಾರೆ.

Mpox Outbreak: ಜನರೇ ಹುಷಾರಾಗಿರಿ..ದೇಶದ ಗಡಿಯಲ್ಲಿದೆ ಮಂಕಿಪಾಕ್ಸ್‌ ವೈರಸ್‌!

‘ಶಂಕಿತ ಸೋಂಕಿತರು ಕಂಡುಬಂದರೆ ಅವರ ಸಂಪರ್ಕಕ್ಕೆ ಬಂದವರ ಪಟ್ಟಿ ಮಾಡಲು ಸಜ್ಜಾಗಿರಬೇಕು. ಇದಕ್ಕೆ ಅನುವಾಗುವಂತೆ ತಮ್ಮ ರಾಜ್ಯಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿನ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು, ಆಸ್ಪತ್ರೆಗಳಲ್ಲಿನ ಐಸೋಲೇಷನ್‌ ಕೊಠಡಿಗಳನ್ನು ಗುರುತಿಸಬೇಕು, ಯಾವುದೇ ಪರಿಸ್ಥಿತಿ ಎದುರಿಸಲು ಅಗತ್ಯವಾದ ಸಂಚಾರ ವ್ಯವಸ್ಥೆ, ಮಾನವ ಸಂಪನ್ಮೂಲ ಲಭ್ಯತೆ ಖಚಿತಪಡಿಸಿಕೊಳ್ಳಬೇಕು. ಸೋಂಕು ಪತ್ತೆಗೆ ಅರ್ಹ ಪ್ರಯೋಗಾಲಯಗಳ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಬೇಕು. ಸೋಂಕು ತಡೆ ಮತ್ತು ಸೋಂಕು ಪ್ರಸರಣ ತಡೆಗೆ ಅಗತ್ಯವಾದ ಕಾರ್ಯಸೂಚಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ಎಂದು ಸೂಚಿಸಿದ್ದಾರೆ

ಏನಿದು ಮಂಕಿಪಾಕ್ಸ್‌?

ಇದು ಕೂಡಾ ಸಿಡುಬಿನ ರೀತಿಯ ವೈರಸ್‌. ಮೈಮೇಲೆ ಸಣ್ಣ ಸಣ್ಣ ಗುಳ್ಳೆ ಮೂಡುವ ಮೂಲಕ ವೈರಸ್‌ ತನ್ನ ಇರುವಿಕೆ ತೋರಿಸುತ್ತದೆ. ಇದರ ಜೊತೆಗೆ ಮೈಕೈ ನೋವು, ಬೆನ್ನು ನೋವು, ಜ್ವರ ಕಾಣಿಸಿಕೊಳ್ಳುತ್ತದೆ. ಇದು ಯಾರಿಗೆ ಬೇಕಾದರೂ ಬರಬಹುದು. ವಯಸ್ಸಿನ ಮಿತಿ ಇಲ್ಲ.

ಪ್ರಸರಣ ಹೇಗೆ?
ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಇನ್ನೊಬ್ಬರಿಗೆ ವೈರಸ್‌ ಹಬ್ಬುತ್ತದೆ. ಇದು ಸಾಂಕ್ರಾಮಿಕ ವೈರಸ್‌. ನಿರ್ಲಕ್ಷ್ಯ ವಹಿಸಿದರೆ ಸಾವಿಗೂ ಕಾರಣ ಆಗಬಹುದು.

ಆಫ್ರಿಕಾದ 12 ದೇಶಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ ಮಂಕಿಪಾಕ್ಸ್‌ ಭಾರತಕ್ಕೂ ಪ್ರವೇಶ?

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು