ತಮಿಳುನಾಡು ರಾಜಕಾರಣ ಸುಲಭವಲ್ಲ, ಕಲಮ್ ಹಾಸನ್, ಅಣ್ಣಾಮಲೈಗೆ ಸೋಲಿನ ಕಹಿ

By Suvarna NewsFirst Published May 2, 2021, 11:25 PM IST
Highlights

ತಮಿಳುನಾಡಿನಲ್ಲಿ  ಹೊಸದಾಗಿ ರಾಜಕಾರಣ ಮಾಡೋದು ತುಂಬಾ ಕಷ್ಟ/ ಅಣ್ಣಾ ಮಲೈಗೆ ಸೋಲು/ ಕಮಲ್ ಹಾಸನ್ ಗೂ ನಿರಾಸೆ/ ಗೆಲುವಿನ ಭರವಸೆಯಲ್ಲಿದ್ದ ನಿವೃತ್ತ ಐಪಿಎಸ್ ಅಧಿಕಾರಿ

ಚೆನ್ನೈ(ಮೇ 02) ತಮಿಳುನಾಡಿನಲ್ಲಿ ಹೊಸದಾಗಿ ರಾಜಕಾರಣ ಮಾಡುವುದು ಸುಲಭವಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಬಹುಭಾಷಾ ತಾರೆ ಕಮಲ್ ಹಾಸನ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ಜನ ತಿರಸ್ಕಾರ ಮಾಡಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಇಬ್ಬರಿಗೂ ಸೋಲಾಗಿದೆ.  ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ಅತಿರಥ-ಮಹಾರಥರು ಎಡವಿ ಬೀಳುವ ಲಕ್ಷಣಗಳು ಬೆಳಗ್ಗೆಯಿಂದಲೇ ಇತ್ತು.

ಪೋಟೋ ಫಿನಿಶ್ ನಲ್ಲಿ ಗೆದ್ದ ಸುವೇಂದು.. ಮಮತಾಗೆ ಸೋಲು

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಂದಿ ಗ್ರಾಮ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆದರೆ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಜಯಭೇರಿ ಬಾರಿಸಿದೆ.

ಸ್ವಕ್ಷೇತ್ರ ತಮಿಳುನಾಡಿನ ಅರವಕುರುಚ್ಚಿಯಿಂದ ಅಣ್ಣಾಮಲೈ ಸ್ಪರ್ಧೆಗಿಳಿದಿದ್ದರು.   ಡಿಎಂಕೆಯ ಎಲಾ ಇಳಂಗೊ 34832 ಮತ ಪಡೆದರೆ ಅಣ್ಣಾ ಮಲೈ 29596 ಮತ ಗಳಿಸಿದರು. ಡಿಎಂಕೆ ಗೆಲುವು ಕಂಡಿದ್ದು ಅಣ್ಣಾ ಮಲೈ ನಿರಾಸೆ ಅನುಭವಿಸಬೇಕಾಗಿ ಬಂದಿದೆ.  

ಕೊಯಮತ್ತೂರು ಸೌತ್‌ನಿಂದ ಮಕ್ಕಳ್ ನೀದಿ ಮೈಯಂ ಪಕ್ಷದಿಂದ ಸ್ಪರ್ಧಿಸಿದ್ದ ನಟ ಕಮಲ್ ಹಾಸನ್ ಗೆ ಸೋಲಾಗಿದೆ. ಬಿಜೆಪಿ ಅಭ್ಯರ್ಥಿ ವನತಿ ಶ್ರೀನಿವಾಸನ್ ಕಮಲ್ ವಿರುದ್ಧ ಗೆದ್ದು ಬೀಗಿದ್ದಾರೆ. ಶ್ರೀನಿವಾಸನ್ 52,209 ಮತ ಪಡೆದರೆ ಕಮಲ್ 51, 481 ಮತಗಳನ್ನು ಪಡೆದುಕೊಂಡರು.

click me!