ರಾಜ್ಯದ ಭದ್ರತೆ ಹಿತದೃಷ್ಟಿಯಿಂದ ಶಾಲಾ ಶಿಕ್ಷಕ ಅಮಾನತು !

By Suvarna NewsFirst Published May 2, 2021, 10:36 PM IST
Highlights

ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಕನನ್ನು ಭದ್ರತೆ ವಿಚಾರದಲ್ಲಿ ಅಮಾನತು ಮಾಡಲಾಗಿದೆ

ಜಮ್ಮು ಮತ್ತು ಕಾಶ್ಮೀರ(ಮೇ.02):  ಜಮ್ಮು ಮತ್ತು ಕಾಶ್ಮೀರ ಆಡಳಿತ ಇದೇ ಮೊದಲ ಬಾರಿಗೆ ಮಹತ್ವದ  ನಿರ್ಧಾರವನ್ನು ತೆಗೆದುಕೊಂಡಿದೆ.  ಉತ್ತರ ಕಾಶ್ಮೀರದ ಕುಪ್ವಾರಾದ ಶಿಕ್ಷಕನನ್ನು ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ಅಮಾನತು ಗೊಳಿಸಿದೆ.

ಗೃಹ ಬಂಧನದಲ್ಲಿರುವ ಮಿರ್‌ವೈಜ್ ಬಿಡುಗಡೆ ಯಾವಾಗ? ಹುರಿಯತ್ ಅಸಮಾಧಾನ?

ಕುಪ್ವಾರದ ಸರ್ಕಾರಿ ಶಾಲೆ ಶಿಕ್ಷಗ ಇದ್ರಿಸ್ ಜಾನ್ ಅವರ ಚಟುವಟಿಕೆಗಳು ಭದ್ರತೆ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಇಷ್ಟೇ ದೇಶ ವಿರೋಧಿ ಚಟುವಟಿಕೆ ಕಾರಣಗಳಿಂದ ಇದ್ರೀಸ್ ಜಾನ್ ಅವರನ್ನು ಅಮಾನತು ಮಾಡುತ್ತಿರುವುದಾಗಿ  ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.

ತಪ್ಪಿತು ಬಹುದೊಡ್ಡ ದುರಂತ; 72 ಗಂಟೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ 12 ಉಗ್ರರ ಹತ್ಯೆ!

ಇದ್ರೀಸ್ ಜಾನ್ ಅವರ ಅಮಾನತು ತಕ್ಷಣದಿಂದ ಜಾರಿಯಾಗುತ್ತಿದೆ ಎಂದು ಮನೋಜ್ ಸಿನ್ಹ ಹೇಳಿದ್ದಾರೆ.   ದೇಶದ ಭದ್ರತೆ ಅಥವಾ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಅಪಾಯವನ್ನುಂಟುಮಾಡುವ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿರುವ ನೌಕರರ ಪ್ರಕರಣಗಳನ್ನು ಗುರುತಿಸಲು ಮತ್ತು ಪರಿಶೀಲಿಸಲು ಏಪ್ರಿಲ್ 21 ರಂದು ಸರ್ಕಾರ ವಿಶೇಷ ಕಾರ್ಯಪಡೆ ಸ್ಥಾಪಿಸಿದೆ.

ಈ ಕಾರ್ಯಪಡೆ ನೀಡಿದ ವರದಿ ಆಧಾರದಲ್ಲಿ ತನಿಖೆ ನಡೆಸಿದ ಆಡಳಿತ ಇಲಾಖೆ ಇದೀಗ ಈ ನಿರ್ಧಾರ ತೆಗೆದುಕೊಂಡಿದೆ.

click me!