ಚೀನಾ-ಭಾರತ ಬಾರ್ಡರ್ ರೋಡ್ ನಿರ್ಮಾಣದ ಕೆಲಸ ಈ ಮಹಿಳೆಯ ಹೆಗಲಿದೆ | ದಿಟ್ಟ ಅಧಿಕಾರಿಗೆ ದೊಡ್ಡ ಜವಾಬ್ದಾರಿ
ದೆಹಲಿ(ಏ.29): ಭಾರತ-ಚೀನಾ ಗಡಿಯುದ್ದಕ್ಕೂ ಎತ್ತರದ ಪ್ರದೇಶದಲ್ಲಿ ಸಂಪರ್ಕವನ್ನು ಒದಗಿಸಲು ರಸ್ತೆ ನಿರ್ಮಾಣ ಕಂಪನಿಗೆ (ಆರ್‌ಸಿಸಿ) ಆದೇಶಿಸಿ ಮೇಲುಸ್ತುವಾರಿ ನೋಡಿಕೊಳ್ಳಲು ಗಡಿ ರಸ್ತೆಗಳ ಸಂಸ್ಥೆ ಮಹಿಳಾ ಅಧಿಕಾರಿಯನ್ನು ನೇಮಿಸಿದೆ.
ಮಹಾರಾಷ್ಟ್ರದ ವಾರ್ಧಾದ ವೈಶಾಲಿ ಎಸ್ ಹಿವಾಸೆ ಅವರು ತಮ್ಮ ಕರ್ತವ್ಯವನ್ನು ಸವಾಲಿನ ಸ್ಥಳ ಮತ್ತು ಸಂದರ್ಭದಲ್ಲಿ ನಿರ್ವಹಿಸಲಿದ್ದಾರೆ. ಎಂ ಟೆಕ್ ಪದವಿ ಪಡೆದಿರುವ ವೈಶಾಲಿ ಈಗಾಗಲೇ ಕಾರ್ಗಿಲ್‌ನಲ್ಲಿ ಕರ್ತವ್ಯದ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗಿದೆ.
undefined
ಕನ್ಯತ್ವ ಪರೀಕ್ಷೆ ಕ್ರೂರ ಪರೀಕ್ಷೆಯಿಂದ ನಲುಗಿದ ಸೋದರಿಯರ ಹೋರಾಟದ ಹಾದಿ
ಇದು ಬಿಆರ್ಒನ ಒಂದು ಸುಂದರ ಆರಂಭವಾಗಿದ್ದು, ಇದು ಮಹಿಳಾ ಸಬಲೀಕರಣದ ಹೊಸ ಯುಗವನ್ನು ಹುಟ್ಟುಹಾಕುತ್ತದೆ. ಈ ಮೂಲಕ ಮಹಿಳಾ ಅಧಿಕಾರಿಗಳು ಅತ್ಯಂತ ಕಠಿಣ ಕಾರ್ಯಗಳನ್ನು ವಹಿಸಿಕೊಳ್ಳುವುದನ್ನು ನೋಡಬಹುದು ಎಂದು ಹೇಳಲಾಗಿದೆ.