Uttarkashi Avalanche ನಾಲ್ಕು ಮೃತದೇಹ ಹೊರಕ್ಕೆ, ನಾಪತ್ತೆಯಾಗಿರುವ 27 ಮಂದಿಗಾಗಿ ರಕ್ಷಣಾಕಾರ್ಯ!

By Suvarna NewsFirst Published Oct 5, 2022, 8:15 PM IST
Highlights

ಉತ್ತರಕಾಶಿ ಜಿಲ್ಲೆಯ ದ್ರೌಪದಿ ಪರ್ವತದಲ್ಲಿ ಸಂಭವಿಸಿದ ಹಿಮಪಾತ ಭಾರಿ ನಷ್ಟಕ್ಕೆ ಕಾರಣವಾಗಿದೆ. ನಾಲ್ವರು ಪರ್ವತಾರೋಹಿಗ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. 27 ಮಂದಿಯ ರಕ್ಷಣೆಗೆ ಕಾರ್ಯಾಚರಣೆ ಭರದಿಂದ ಸಾಗಿದೆ.

ಉತ್ತರಖಂಡ(ಅ.05):  ಪ್ರಾಕೃತಿ ವಿಕೋಪಕ್ಕೆ ಭಾರತದ ಒಂದೊಂದೆ ರಾಜ್ಯಗಳು ನಲುಗುತ್ತಿದೆ. ಇದೀಗ ಉತ್ತರಖಂಡದ ಉತ್ತರಕಾಶಿ ಜಿಲ್ಲೆಯ ದ್ರೌಪದಿ ಪರ್ವತದಲ್ಲಿ ಹಿಮಾಪಾತದಿಂದ ಭಾರಿ ಅನಾಹುತ ಸಂಭವಿಸಿದೆ. ಇದೇ ಪರ್ವತದಲ್ಲಿ ಪರ್ವತಾರೋಹಣ ಮಾಡುತ್ತಿದ್ದ 61 ಪರ್ವತಾರೋಹಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈ ಪೈಕಿ 15 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ. ಇನ್ನು 15 ಮಂದಿ ಬೇಸ್‌ಕ್ಯಾಂಪ್‌ನಲ್ಲಿ ಉಳಿದುಕೊಂಡಿದ್ದಾರೆ. 27 ಮಂದಿ ನಾಪತ್ತೆಯಾಗಿದ್ದು, ಇವರ ರಕ್ಷಣಾ ಕಾರ್ಯಕ್ಕೆ ಎಲ್ಲಾ ತಯಾರಿ ಮಾಡಲಾಗಿದೆ. ರಕ್ಷಣಾ ಕಾರ್ಯದಲ್ಲಿ 4 ಮೃತದೇಹ ಹೊರಕ್ಕೆ ತೆಗೆಯಲಾಗಿದೆ. SDRF, ITBP ಹಾಗೂ NIM  ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಗಳು ನಡೆಯುತ್ತಿದೆ. ರಕ್ಷಣಾ ತಂಡದಿಂದ 1.5 ಕಿಲೋಮೀಟರ್ ದೂರದಲ್ಲಿ ಸಿಲುಕಿರುವ ಪರ್ವತಾರೋಹಿಗಳನ್ನು ರಕ್ಷಿಸಲು ಮೂರು ರಕ್ಷಣಾ ತಂಡಗಳು ನಾಳೆ ಬೆಳಕ್ಕೆ ಕಾರ್ಯಾಚರಣೆಯಲ್ಲಿ ತೊಡಗಲಿದೆ. 

ರಕ್ಷಣಾ ತಂಡದ ಮಾಹಿತಿ ಪ್ರಕಾರ 15 ಪರ್ವತಾರೋಹಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನು ಬೇಸ್ ಕ್ಯಾಂಪ್‌ನಲ್ಲಿರುವ 15 ಮಂದಿ ಪರ್ವತಾರೋಹಿಗಳು ಸುರಕ್ಷಿತವಾಗಿದ್ದಾರೆ. ಬೇಸ್‌ಕ್ಯಾಂಪ್‌ನಿಂದ ಈ ಪರ್ವತಾರೋಹಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮುಂದುವರಿದಿದೆ. ನಾಪತ್ತೆಯಾಗಿರುವ 27 ಮಂದಿಯ ರಕ್ಷಣಾ ಕಾರ್ಯಕ್ಕೆ ಪ್ರಯತ್ನಗಳು ನಡೆಯುತ್ತಿದೆ.

ಸಾವಿಗೂ ಅಂಜದ ವೀರ: ಭೀಕರ ಹಿಮಪಾತದ ಮಧ್ಯೆ ಗಟ್ಟಿಯಾಗಿ ನಿಂತ ಪರ್ವತಾರೋಹಿ.. ವಿಡಿಯೋ ವೈರಲ್

ನಾಪತ್ತೆಯಾಗಿರುವ ಪರ್ವತಾರೋಹಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಇಧಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಔಷಧಿ, ಆಕ್ಸಿಜನ್ ಸಿಲಿಂಡರ್  ಸೇರಿದಂತೆ ತುರ್ತು ವೈದ್ಯಕೀಯ ಸೌಲಭ್ಯಗಳೊಂದಿಗೆ ರಕ್ಷಣಾ ಕಾರ್ಯ ನಡೆಯುತ್ತಿದೆ. ಯಾವುದೇ ಪರ್ವತಾರೋಹಿಗೆ ತುರ್ತು ಚಿಕಿತ್ಸೆಗೆ ಬೇಕಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. 

ದ್ರೌಪದಿ ಪರ್ವತ ಮಾತ್ರವಲ್ಲ,  ಉತ್ತರಖಂಡದ ಹಲವು ಪ್ರದೇಶಗಳಲ್ಲಿ ಹಿಮಪಾತ ಸಂಭವಿಸಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಮೋಘಸ್ಫೋಟ, ಜಲಪ್ರಳಯ ಸೇರಿದಂತೆ ಹಲವು ವಿಕೋಪಕ್ಕೆ ಗುರಿಯಾದ ಉತ್ತರಖಂಡದಲ್ಲಿ ಇದೀಗ ಹಿಮಪಾತ ಸವಾಲಾಗಿ ಪರಿಣಮಿಸಿದೆ.

 

Avalanche in Arunachal Pradesh : ಎಲ್ಲಾ ಏಳೂ ಸೈನಿಕರ ಸಾವು ಖಚಿತಪಡಿಸಿದ ಸೇನೆ!

ಕೇದಾರನಾಥ ದೇಗುಲ ಬಳಿ ಹಿಮಗಡ್ಡೆ ಕುಸಿತ 
ಉತ್ತರಾಖಂಡದ ಕೇದಾರನಾಥ ದೇವಾಲಯದ ಬಳಿ ಹಿಮಗಡ್ಡೆ ಕುಸಿತ ಸಂಭವಿಸಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೂ ಈ ಘಟನೆಯಿಂದಾಗಿ ಯಾತ್ರೆ ಕೈಗೊಂಡಿರುವ ಭಕ್ತರು ಆತಂಕಗೊಂಡಿದ್ದಾರೆ. ಈ ನಡುವೆ, ‘ಯಾವುದೇ ಆತಂಕ ಪಡುವ ಅಗತ್ಯವಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶನಿವಾರ ಮುಂಜಾನೆ ಸುಮಾರು 6.30 ಗಂಟೆಗೆ ಕೇದಾರ್‌ ಶಿಖರ ಮತ್ತು ಸ್ವರ್ಗರೋಹಿಣಿ ಶಿಖರಗಳ ನಡುವೆ ಬೃಹತ್‌ ಗಾತ್ರದ ನೀರ್ಗಲ್ಲು ಕುಸಿದಿದೆ. ದೇವಾಲಯದ ಹಿಂಭಾಗದಲ್ಲಿರುವ ಚೋರಬತಿ ಸರೋವರದ ಬಳಿ ಈ ಕುಸಿತ ಸಂಭವಿಸಿದೆ. ಹೀಗಾಗಿ ಸರೋವರ ಕೆಲಕಾಲ ಹಿಮದಿಂದ ಮುಚ್ಚಿಹೋಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2013ರಲ್ಲಿ ಉಂಟಾಗಿದ್ದ ಬೃಹತ್‌ ಜಲಪ್ರಳಯದಂತೆ ಈ ಬಾರಿಯೂ ದೇವಾಲಯ ಮುಳುಗಡೆಯಾಗಬಹುದು ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಕುಸಿದಿರುವ ಹಿಮಗಡ್ಡೆ ನೀರಿನ ಪ್ರಮಾಣವನ್ನು ಹೆಚ್ಚು ಮಾಡುವುದಿಲ್ಲ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೊದಲು ಸೆ.22ರಂದು ಈ ಭಾಗದಲ್ಲಿ ಹಿಮಗಡ್ಡೆ ಕುಸಿತ ಉಂಟಾಗಿತ್ತು. 
 

click me!