ತ್ತೀಚಿನ ದಿನಗಳಲ್ಲಿ ಮದುವೆ ಯಾವ ಕಾರಣಕ್ಕೆ ನಿಲ್ಲುವುದೋ ಹೇಳಲಾಗದು. ವಧುವೊಬ್ಬಳು ವರನ ಕಡೆಯವರು ಆರ್ಡರ್ ಮಾಡಿದ ಲೆಹೆಂಗಾ ಚೆನ್ನಾಗಿಲ್ಲ ಎಂದು ಹೇಳಿದ ಕಾರಣಕ್ಕೆ ಮದುವೆಯೊಂದು ನಿಂತ ಪ್ರಸಂಗ ಉತ್ತರಾಖಂಡ್ ರಾಜ್ಯದಲ್ಲಿ ನಡೆದಿದೆ.
ಡೆಹ್ರಾಡೂನ್: ಇತ್ತೀಚಿನ ದಿನಗಳಲ್ಲಿ ಮದುವೆ ಯಾವ ಕಾರಣಕ್ಕೆ ನಿಲ್ಲುವುದೋ ಹೇಳಲಾಗದು. ವಧುವೊಬ್ಬಳು ವರನ ಕಡೆಯವರು ಆರ್ಡರ್ ಮಾಡಿದ ಲೆಹೆಂಗಾ ಚೆನ್ನಾಗಿಲ್ಲ ಎಂದು ಹೇಳಿದ ಕಾರಣಕ್ಕೆ ಮದುವೆಯೊಂದು ನಿಂತ ಪ್ರಸಂಗ ಉತ್ತರಾಖಂಡ್ ರಾಜ್ಯದಲ್ಲಿ ನಡೆದಿದೆ.
ಉತ್ತರಾಖಂಡ್‌ನ (Uttarakhand) ಹಲ್ದವಾನಿ (Haldwani) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜೂನ್‌ನಲ್ಲೇ ಜೋಡಿಯೊಂದರ ವಿವಾಹ ನಿಶ್ಚಯವಾಗಿ ನವಂಬರ್ 5ರಂದು ಈ ವಿವಾಹ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಯೂ ಪ್ರಿಂಟ್ ಆಗಿ ಬಂಧುಗಳು ನೆಂಟರಿಷ್ಟರಿಗೆಲ್ಲಾ ಹಂಚಿಕೆಯಾಗಿತ್ತು. ಆದರೆ ಅಷ್ಟರಲ್ಲಿ ಎರಡು ಕುಟುಂಬಗಳ ಮಧ್ಯೆ ಮನಸ್ತಾಪ ಉಂಟಾಗಿ ಮದುವೆಯೇ ನಿಂತು ಹೋಗಿದೆ. ಹಲ್ದವಾನಿ ನಗರದ ಯುವತಿಯ ವಿವಾಹ ಅಲ್ಮೋರಾ (Almora) ಜಿಲ್ಲೆಯ ಯುವಕನೊಂದಿಗೆ ನಡೆಯಬೇಕಿತ್ತು. ಎರಡೂ ಕುಟುಂಬದವರು ಮದುವೆಯ (wedding)ಸಿದ್ಧತೆಯಲ್ಲಿ ತೊಡಗಿದ್ದರು. ವಧುವಿಗೆ ಲೆಹೆಂಗಾವನ್ನು ವರನ ಕಡೆಯವರು ತರುವುದು ಎಂದು ಮಾತುಕತೆಯಾಗಿತ್ತು. ಅದರಂತೆ ವರನ ತಂದೆ ಲಕ್ನೋದಿಂದ ತನ್ನ ಮಗನ ಮದುವೆಗಾಗಿ ಲೆಹೆಂಗಾ ಆರ್ಡರ್ ಮಾಡಿದ್ದರು. ಆದರೆ ಈ ಲೆಹೆಂಗಾ ವಧುವಿನ (BRIDE) ಮನೆ ತಲುಪಿದಾಗ ವಧು ತನಗೆ ಈ ಲೆಹೆಂಗಾ ಇಷ್ಟವಾಗಿಲ್ಲ ಎಂದು ಹೇಳಿದ್ದಾಳೆ.
ಫೋನ್ ಕಾಲ್‌ನಿಂದ ಮುರಿದು ಬಿದ್ದ ಮದುವೆ..! ಭಾಗ್ಯಳ ಬಾಳಿಗೆ ನೆರೆಮನೆಯ 'ಆನಂದ'
ಇದರಿಂದ ಎರಡು ಕುಟುಂಬಗಳ ನಡುವೆ ಮನಸ್ತಾಪ ಶುರುವಾಗಿದ್ದು, ಇದು ವಿಕೋಪಕ್ಕೆ ಹೋಗಿ ಪೊಲೀಸ್ ಠಾಣೆಯವರೆಗೆ (police station) ತಲುಪಿದೆ. ನಂತರದಲ್ಲಿ ಎರಡೂ ಕಡೆಯವರೂ ಕೂಡ ಈ ವಿವಾಹಕ್ಕೆ ನಿರಾಕರಿಸಿದ್ದಾರೆ. ಆಕ್ಟೋಬರ್ 30 ರಂದು ಎರಡು ಕಡೆಯವರು ಮದುವೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದವೊಂದಕ್ಕೆ ಮುಂದಾಗಿದ್ದಾರೆ. ಈ ಕಾರಣಕ್ಕೆ ಯುವಕನ ತಂದೆ ಹಾಗೂ ಸಂಬಂಧಿಗಳು ಹುಡುಗಿ ಮನೆಗೆ ಬಂದಿದ್ದಲ್ಲದೇ ಅವರಿಗೆ ಒಂದು ಲಕ್ಷ ರೂಪಾಯಿ ನೀಡಿ ಆ ಸಂದರ್ಭವನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಆದರೆ ಇದಾದ ಬಳಿಕ ವಧುವಿನ ಕಡೆಯವರು ಮತ್ತೆ ಮದುವೆಯ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಎರಡು ಕಡೆಯವರು ಹಲ್ದವಾನಿ ಪೊಲೀಸ್ ಠಾಣೆಗೆ ತೆರಳಿದ್ದು, ಈ ವೇಳೆ ಎರಡು ಕುಟುಂಬಗಳ ಸಂಬಂಧಿಗಳ ಮಧ್ಯೆ ಗಲಾಟೆ ಶುರುವಾಗಿದೆ. ಎರಡೂ ಕಡೆಯವರು ಪರಸ್ಪರ ಗಂಭೀರ ಆರೋಪ ಮಾಡಿದ್ದಾರೆ. ಎರಡೂ ಕಡೆಯವರ ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಅದಾದ ನಂತರ ಗಲಾಟೆ ನಿಂತಿದೆ.
ಸೀರೆ ಕೇಳಿದ್ದಕ್ಕೆ ಮುರಿದು ಬಿದ್ದ ಮದುವೆ!
ಅಲ್ಲದೇ ಎರಡು ಕುಟುಂಬಗಳ ನಡುವಿನ ಈ ಮದುವೆ ನಿಲ್ಲಿಸುವ ಒಪ್ಪಂದ (agreement) ಪೊಲೀಸ್ ಠಾಣೆ ಮೆಟ್ಟಿಲು ತಲುಪಿದೆ. ಈ ವೇಳೆ ಪೊಲೀಸರು ವಿಚಾರಿಸಿದಾಗ ಯುವಕನ ತಂದೆ ವಧುವಿಗಾಗಿ ಲಕ್ನೋದಿಂದ ಸುಮಾರು 10 ಸಾವಿರ ರೂಪಾಯಿ ಮೌಲ್ಯದ ಲೆಹೆಂಗಾ ಖರೀದಿ ಮಾಡಿದ್ದರು. ಲಕ್ನೋದ (Lucknow) ಲೆಹೆಂಗಾ (lehenga) ಎಲ್ಲೆಡೆ ಬಹಳ ಫೇಮಸ್ ಆಗಿದ್ದು, ಆದರೆ ವಧು ಮಾತ್ರ ಅಲ್ಲಿನ ಲೆಹೆಂಗಾವನ್ನು ತಿರಸ್ಕರಿಸಿದ್ದಾಳೆ. ಪರಿಣಾಮ ಎರಡು ಕುಟುಂಬಗಳ ನಡುವೆ ಕಲಹ ಏರ್ಪಟ್ಟು ಮದುವೆ ನಿಂತಿದೆ.