ಕೇರಳ ಬಳಿಕ ಇದೀಗ ಉತ್ತರಖಂಡದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನರು ತತ್ತರಿಸಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಜಮ್ಮು ಕಾಶ್ಮೀರದಲ್ಲಿನ ಭದ್ರತೆ ಕುರಿತು ಅಮಿತ್ ಶಾ ಹಾಗೂ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಪಾಕ್ ವಿರುದ್ಧ ಪಂದ್ಯ ಬಹಿಷ್ಕರಿಸುವ ಒತ್ತಾಯಕ್ಕೆ ಬಿಸಿಸಿಐ ಮೌನ ಮುರಿದಿದೆ. ಬಿಟೌನ್ ಮಂದಿಗೆ ರಶ್ಮಿಕಾ ಮಂದಣ್ಣ ಕ್ಲಾಸ್, ಧೋನಿ ಕುರಿತು ಶ್ರೀನಿವಾಸನ್ ಮಾತು ಸೇರಿದಂತೆ ಅಕ್ಟೋಬರ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮಂಗಳೂರಿನ ಗ್ಯಾಂಗ್ಸ್ಟರ್ ಸುರೇಶ್ ಪೂಜಾರಿ ಫಿಲಿಫೈನ್ಸ್‌ನಲ್ಲಿ ಬಂಧನ
undefined
ಭೂಗತ ಪಾತಕಿಗಳಾದ ಚೋಟಾ ರಾಜನ್, ರವಿ ಪೂಜಾರಿ (Ravi Poojari) ಸಹಚರನಾಗಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ಸುರೇಶ್ ಪೂಜಾರಿಯನ್ನು ಬಂಧಿನವಾಗಿದೆ.
ಪ್ರಧಾನಿ ಮೋದಿ ಭೇಟಿಯಾದ ಅಮಿತ್ ಶಾ; ಕಾಶ್ಮೀರ, ರಾಷ್ಟ್ರೀಯ ಭದ್ರತೆ ಕುರಿತು ಮಹತ್ವದ ಚರ್ಚೆ!
ದೇಶದ ಭದ್ರತೆಗೆ ಸವಾಲು ಹಾಕುವ ಘಟನೆಗಳು ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and kashmir) ನಾಗರೀಕರ ಮೇಲೆ ಉಗ್ರರ ದಾಳಿ ನಡೆಯುತ್ತಲೇ ಇದೆ. ಗಡಿಯಲ್ಲಿ ಉಗ್ರರ ಒಳನಸುಳುವಿಕೆ(Terror) ಕೂಡ ಹೆಚ್ಚಾಗಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಭದ್ರತೆ ಕುರಿತು ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಮಹತ್ವದ ಚರ್ಚೆ ನಡೆಸಿದ್ದಾರೆ.
ಉತ್ತರಾಖಂಡ್‌ನಲ್ಲಿ ಭೀಕರ ಮಳೆ: ಪ್ರವಾಹಕ್ಕೆ ಸಿಲುಕಿದ 500ಕ್ಕೂ ಅಧಿಕ ಪ್ರವಾಸಿಗರು!
ಉತ್ತರಾಖಂಡದಲ್ಲಿ(Uttarakhand) ಭಾರೀ ಮಳೆಯಿಂದಾಗಿ, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ(Rain) ಜನಜೀವನ ಅಸ್ತವ್ಯಸ್ತಗೊಂಡಿದೆ.
T20 World Cup: ಪಾಕ್ ವಿರುದ್ಧದ ಪಂದ್ಯ ರದ್ದು ಮಾಡಲು ಆಗ್ರಹ : ಬಿಸಿಸಿಐ ಹೇಳಿದ್ದೇನು..?
ಟೀಂ ಇಂಡಿಯಾ (Team India) ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ (Pakistan) ವಿರುದ್ದ ಕಣಕ್ಕಿಳಿಯದೇ ಪಾಠ ಕಲಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಬಿಸಿಸಿಐ (BCCI) ಈ ಕುರಿತಂತೆ ತುಟಿಬಿಚ್ಚಿದೆ. ಬಿಸಿಸಿಐ ಹೇಳಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಕರುನಾಡನ್ನು ಕಡೆಗಣಿಸಿದ ಬಿ-ಟೌನ್ ಮಂದಿಗೆ ಕ್ಲಾಸ್ ತೆಗೆದುಕೊಂಡ ರಶ್ಮಿಕಾ ಮಂದಣ್ಣ!
ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಚಿತ್ರರಂಗದಿಂದ ಹೆಸರು ಗಳಿಸಿದ ರಶ್ಮಿಕಾ ಮಂದಣ್ಣ ಹಿಂದಿ ಕಂಟೆನ್ಟ್ ಕ್ರಿಯೇಟರ್ ಉಷಾ ಕೇಳಿದ ಕೊಂಕು ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ. ಮಲೆಯಾಳಿ ಜನರು ಮಾತನಾಡುವ ರೀತಿ ಮಾತನಾಡಿ ಎಂದು ತಮಾಷೆ ಮಾಡಿದ್ದಾರೆ, ಇದಕ್ಕೆ ರಶ್ಮಿಕಾ ಸರಿಯಾದ ಉತ್ತರ ನೀಡಿದ್ದಾರೆ.
Rs.47,000 ಬೆಲೆಯ ಮಿಲಿಟರಿ ದರ್ಜೆಯ Nokia XR20 ಫೋನ್ ಭಾರತದಲ್ಲಿ ಬಿಡುಗಡೆ!
ನೋಕಿಯಾ XR20 ಪೋನ್ ಸೋಮವಾರ (ಅ. 18) ಭಾರತದಲ್ಲಿ ಬಿಡುಗಡೆಯಾಗಿದೆ. ಈ ಹೊಸ ನೋಕಿಯಾ ಫೋನ್ ಮಿಲಿಟರಿ ದರ್ಜೆಯ (Military Grade)ಗುಣಮಟ್ಟ ಹೊಂದಿದ್ದು 55 ಡಿಗ್ರಿಯಿಂದ 20ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಕೆಲಸ ಮಾಡಲಿದೆ ಎಂದು ಕಂಪನಿ ತಿಳಿಸಿದೆ.
ದೀಪಾವಳಿ ಉಡುಗೆ 'Jashn-e-Riwaaz' ಎಂದಿದ್ದ ವಿವಾದಾತ್ಮಕ ಟ್ವೀಟ್ ಡಿಲೀಟ್ !
ಜವುಳಿ ಉದ್ಯಮದಲ್ಲಿ ದೇಶದ ಹೆಸರಾಂತ ಬ್ರಾಂಡ್ (Brand) ಆಗಿರುವ ಫ್ಯಾಭ್ ಇಂಡಿಯಾ (Fab India) ಕಂಪನಿ ಅಕ್ಟೋಬರ್ 9 ರಂದು ದೀಪಾವಳಿ (Deepawali) ಉಡುಗೆಗಳನ್ನು ಜಶ್ನ್-ಇ-ರಿವಾಜ್ (Jashn-e-Riwaaz) ಎಂಬ ಹೆಸರಿನೊಂದಿಗೆ ಬಿಡುಗಡೆ ಮಾಡಿತ್ತು.
IPL ಧೋನಿ ಇಲ್ಲದೇ ಸಿಎಸ್‌ಕೆ ತಂಡವೇ ಇಲ್ಲ: ಎನ್ ಶ್ರೀನಿವಾಸನ್
ಸಿಎಸ್‌ಕೆ ತಂಡದ ನಾಯಕ ಧೋನಿ 2022ರ ಐಪಿಎಲ್‌ನಲ್ಲಿ ಆಡುತ್ತಾರೋ ಇಲ್ಲವೋ ಎನ್ನುವುದು ಸಾಕಷ್ಟು ಚರ್ಚಿತ ವಿಷಯವಾಗಿದೆ. ಹೀಗಿರುವಾಗಲೇ ಧೋನಿ ಕುರಿತಂತೆ ಸಿಎಸ್‌ಕೆ ತಂಡದ ಮಾಲೀಕ ಎನ್ ಶ್ರೀನಿವಾಸನ್ (N Srinivasan) ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಎಂಟ್ರಿ ಕೊಟ್ಟ ಪಂಚ್, ಈ ಕಾರಿಗೆ ಅತಿ ಹೆಚ್ಚು ಬುಕ್ಕಿಂಗ್!
ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿರುವ ಟಾಟಾ ಮೋಟಾರ್ಸ್ (Tata Motors)ನ ಪಂಚ್ (PUNCH) ಅಧಿಕೃತವಾಗಿ ಮಾರಕಟ್ಟೆಗೆ ಎಂಟ್ರಿ ಕೊಟ್ಟಿದೆ. ಮೈಕ್ರೋ ಎಸ್‌ಯುವಿ (Micro SUV) ಆಗಿರುವ ಪಂಚ್, ಈ ಸೆಗ್ಮೆಂಟ್‌ನಲ್ಲಿ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಕಾರ್ ಎನಿಸಿಕೊಂಡಿದೆ.