
ಬೆಂಗಳೂರು(ಮಾ.11): ಉತ್ತರಾಖಂಡದಲ್ಲಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ ಎಂದು ಆ ರಾಜ್ಯದ ಚುನಾವಣಾ ಉಸ್ತುವಾರಿಯೂ ಆಗಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಳಿಕ ಉತ್ತರಾಖಂಡದಲ್ಲಿ ಪಕ್ಷ 42-44 ಸ್ಥಾನ ಗೆಲ್ಲುವುದಾಗಿ ರಾಷ್ಟ್ರೀಯ ನಾಯಕರಿಗೆ ಲಿಖಿತವಾಗಿ ವರದಿ ನೀಡಿದ್ದೆ. ಅದರಂತೆ ಸ್ಪಷ್ಟಬಹುತದೊಂದಿಗೆ ಮತ್ತೆ ಅಧಿಕಾರ ಹಿಡಿದ್ದೇವೆ. ಈ ಫಲಿತಾಂಶದ ಬಗ್ಗೆ ನಮಗೆ ಯಾವುದೇ ಗೊಂದಲ ಇರಲಿಲ್ಲ. ಉತ್ತರಾಖಂಡದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿಶ್ವಾಸವಿತ್ತು. ಇದರ ಜತೆಗೆ ಒಳ್ಳೆಯ ತಂತ್ರಗಳೊಂದಿಗೆ ಈ ಚುನಾವಣೆ ಎದುರಿಸಿದ್ದೆವು ಎಂದರು.
"
ಚುನಾವಣಾ ಪೂರ್ವದಲ್ಲಿ ಉತ್ತರಾಖಂಡದಾದ್ಯಂತ ಗರಿಷ್ಠ 100 ಜನರ ಸುಮಾರು 1.10 ಲಕ್ಷ ಸಣ್ಣ ಸಭೆ ಮಾಡಲು ಯೋಜನೆ ರೂಪಿಸಿದ್ದೆವು. ಆದರೆ, ಹವಾಮಾನ ಏರುಪೇರುಗಳಿಂದ ಕೇವಲ 80 ಸಾವಿರ ಸಭೆಗಳನ್ನು ಮಾತ್ರ ಮಾಡಿದ್ದೆವು. ಕಳೆದ ಐದು ವರ್ಷಗಳಲ್ಲಿ ಮೂರು ಜನ ಮುಖ್ಯಮಂತ್ರಿಗಳು ಬದಲಾವಣೆಯಾದರೂ ಏನೆಲ್ಲಾ ಕೆಲಸಗಳನ್ನು ಮಾಡಲಾಗಿದೆ ಎಂಬುದನ್ನು ಈ ಸಭೆಗಳಲ್ಲಿ ಜನರಿಗೆ ತಿಳಿಸಿದ್ದೆವು. ಇನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಅವರು ತಮ್ಮ ಆರು ತಿಂಗಳ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದರು. ಪುಷ್ಕರ ಸಿಂಗ್ ಚಹರೆ ಅಲ್ಲಿನ ಜನರಿಗೆ ಇಷ್ಟವಾಗಿತ್ತು ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ನಾವು ಆಂತರಿಕ ಸರ್ವೆ ಮಾಡಿಸಿದ್ದೆವು. ಈ ಸರ್ವೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಉಚಿತ ಅಕ್ಕಿ ಹಾಗೂ ವ್ಯಾಕ್ಸಿನೇಷನ್ ಜನರಿಗೆ ಇಷ್ಟವಾಗಿರುವುದು ತಿಳಿದುಬಂದಿತ್ತು. ಮೋದಿ ಅವರು ಅನ್ನ ಕೊಟ್ಟಿದ್ದಾರೆ ಎಂಬ ಭಾವನೆ ಜನರಲ್ಲಿತ್ತು. ಇದನ್ನೆಲ್ಲಾ ನಾವು ವೋಟಿಗಾಗಿ, ಅಧಿಕಾರಕ್ಕಾಗಿ ಮಾಡಲಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆವು. ಇದೆಲ್ಲದರ ಫಲಿತಾಂಶ ಈಗ ಬಂದಿದೆ ಎಂದು ಜೋಶಿ ತಿಳಿಸಿದರು.
ಇನ್ನು ಉತ್ತರ ಪ್ರದೇಶದ ಜನ ಪ್ರಧಾನಿ ಮೋದಿ ಮತ್ತು ಯೋಗಿ ಅವರನ್ನು ಸ್ವೀಕರಿಸಿದ್ದಾರೆ. ಯೋಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದ್ದರು. ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿದ್ದರು. ಇನ್ನು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಠ್ಠಾಳತನದಿಂದ ಆಮ್ ಆದ್ಮಿ ಪಾರ್ಟಿ ಗೆದ್ದಿದೆ. ಕೊನೆ ಗಳಿಗೆಯಲ್ಲಿ ಕ್ಯಾ.ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಚೆನ್ನಿಯನ್ನು ಆ ಸ್ಥಾನದಲ್ಲಿ ಕೂರಿಸಿದ್ದರು. ಈ ನಡುವೆ ಚಂಚಲ ಮನಸ್ಥಿತಿಯ ಅಪ್ರಬುದ್ಧ ಮನುಷ್ಯ ನವಜೋತ್ ಸಿಂಗ್ ಸಿದು ಅವರನ್ನು ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದರು. ಹೀಗಾಗಿ ಕಾಂಗ್ರೆಸ್‌ಗೆ ಪಂಜಾಬ್ ಗೆಲ್ಲಲು ಸಾಧ್ಯವಾಗಲಿಲ್ಲ. ಆಮ್ ಆದ್ಮಿ ಪಾರ್ಟಿ ಫä್ಲಕ್‌ನಲ್ಲಿ ಪಂಜಾಬ್ ಗೆದ್ದಿದೆ ಎಂದು ವಿಶ್ಲೇಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ