UP Elections: 5 ವರ್ಷಗಳ ಆಡಳಿತ, ಯೋಗಿ ಆ ಒಂದು ಕಾರ್ಯಕ್ಕೆ ಯುಪಿ ಜನತೆ ಕೊಟ್ಟ ಗೆಲುವಿನ ಗಿಫ್ಟ್‌!

Published : Mar 10, 2022, 09:09 PM IST
UP Elections: 5 ವರ್ಷಗಳ ಆಡಳಿತ, ಯೋಗಿ ಆ ಒಂದು ಕಾರ್ಯಕ್ಕೆ ಯುಪಿ ಜನತೆ ಕೊಟ್ಟ ಗೆಲುವಿನ ಗಿಫ್ಟ್‌!

ಸಾರಾಂಶ

* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು * ಯೋಗಿ ಮತ್ತೆ ಸಿಎಂ ಆಗಲು ಕಾರಣ ಇದೊಂದೇ * ಆಡಳಿತಾವಧಿಯಲ್ಲಿ ತಂದ ಅದೊಂದು ಸುಧಾರಣೆಗೆ ಜನರಿಂದ ಗಿಫ್ಟ್‌    

ಡೆಲ್ಲಿ ಮಂಜು, ಇಂಡಿಯಾ ರೌಂಡ್ಸ್

ನವದೆಹಲಿ(ಮಾ.10): 'ಹೋಮ್ ಮಿನಿಸ್ಟರ್ ಯೋಗಿ'..! ಸೋಜಗ ಅನ್ನಿಸಿದರು ಉತ್ತರ ಪ್ರದೇಶದ ಚುನಾವಣಾ ಫಲಿತಾಂಶದ ಹಿಂದಿರು ಗೆಲುವಿನ ಗುಟ್ಟು ಇದೆ.. ಯಶಸ್ವಿ ಮುಖ್ಯಮಂತ್ರಿ ಅನ್ನೋ ಪದಗಳಿಗೆ  ಇನ್ನಷ್ಟು ಮೆರುಗು ತಂದಿದ್ದು ಹೋಮ್ ಮಿನಿಸ್ಟರ್ ಯೋಗಿಯೇ..

ಗೆದ್ದವನೇ ಮಹಾಶೂರ ಎನ್ನುವಂತೆ ಗೆದ್ದವರು ಮತ್ತು ಗೆದ್ದಿತ್ತಿನ ಬಾಲ ಹಿಡಿದವರು ಉತ್ತರ ಪ್ರದೇಶದಲ್ಲಿ ಮೊದಲು ಕೈ ಹಾಕುತ್ತಿದ್ದದ್ದು ಪೊಲೀಸ್ ಠಾಣೆಗೆ. ಪೊಲೀಸರಿಗೆ ಒಂದು ಕಾನೂನು ಇರಬೇಕು ಆ ಕಾನೂನಿನ ಹೆಸರಿನಲ್ಲಿ ನಾವು ದುಡ್ಡು ಮಾಡಬೇಕು ಎನ್ನವ ರಾಜಕಾರಣಿಗಳೇ ಇಲ್ಲಿ ಅಧಿಕ. ಬೆಹನ್ ಜೀ ಕಾಲದಲ್ಲಿ ಗೂಂಡಾಗಿರಿ ಒಂದು ಹಂತಕ್ಕೆ ನಿಯಂತ್ರಣ ಕ್ಕೆ ಬಂದಿತ್ತು. ನಂತರ ಬಂದ ಅಖಿಲೇಶ್ ಯಾದವ್ ಅವರ ಕಾಲದಲ್ಲಿ ಕೈ ಮೀರಿತು.

ಇದನ್ನು ಅರಿತಿದ್ದ ಯೋಗಿಯವರು, ಸಾಮಾನ್ಯಕ್ಕೆ ಎಲ್ಲಾ ಮುಖ್ಯಮಂತ್ರಿಗಳು ಮಾಡುವಂತೆ ಹಣಕಾಸು ಖಾತೆಯ ಬದಲಾಗಿ ಗೃಹ ಖಾತೆಯನ್ನು ಇರಿಸಿಕೊಂಡರು. ಸದಾ ಕೋಮುಗಲಭೆಗಳಿಂದ, ಗೂಂಡಾಗಿರಿಯಿಂದ ಸದ್ದು ಮಾಡುತ್ತಿದ್ದ ಉತ್ತರ ಪ್ರದೇಶದ ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸ್ ಇರಬೇಕು ಆ ಪೊಲೀಸ್, ಕಾನೂನ ಪಾಲಕನಾಗಬೇಕು, ಜನರ ರಕ್ಷಕನಾಗಬೇಕು ಅಂಥ ಸಿಎಂ ಯೋಗಿ ತೀರ್ಮಾನಿಸಿಯೇ ಬಿಟ್ಟರು. ಅದರ ಫಲಶೃತಿ ಎಂಬಂತೆ ಐದು ವರ್ಷಗಳ ಬಳಿಕ ಗೆಲುವಿನ ರೂಪದಲ್ಲಿ ಉಡುಗೊರೆ ಕೊಟ್ಟಿದೆ.

UP Election Results: ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಿತಿ ಏನು? ಶಾಕಿಂಗ್ ಫಲಿತಾಂಶ ಬಯಲು!

ಅಜೆಂಡಾ ಆದ ಲಾ ಅಂಡ್ ಆರ್ಡರ್ : ಲಾ ಅಂಡ್ ಆರ್ಡರ್ ಕೂಡ ಚುನಾವಣೆ ಯಲ್ಲಿ ಮತ ತಂದು ಕೊಡುತ್ತೆ. ಅದು ಕೂಡ ಪ್ರಣಾಳಿಕೆಯ ಭಾಗವಾಗಿರುತ್ತೆ ಅನ್ನೋದು ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಕಂಡಿತು.  ಭ್ರಷ್ಟಾಚಾರ, ಕೋಮುವಿಚಾರಗಳೇ ಸಾಮಾನ್ಯಕ್ಕೆ ಪಕ್ಷಗಳ ಚುನಾವಣಾ ವಿಷಯಗಳು ಆಗುತ್ತವೆ. ಲಾ ಅಂಡ್ ಅರ್ಡರ್ ಹೊಸದಾಗಿ ಕಾಣುವ ಜೊತೆಗೆ ವಾಸ್ತವವಾಗಿ ಮತದಾರರ ಅನುಭವಕ್ಕೆ ಬಂತು. ( ಈಗಲೂ ಕೂಡ ಸರಗಳ್ಳತನ ಅಂಥ ಪ್ರಕರಣಗಳು ದಾಖಲಿಸಿಕೊಳ್ಳುತ್ತಿಲ್ಲ ಅಥವಾ ತಡವಾಗುತ್ತಿದೆಯಲ್ಲ ಅಂಥ ಯು ಪಿ ಪೊಲೀಸರನ್ನು ಕೇಳಿದರೆ ಒಂದೆರಡು ದಿನ ತಡವಾಗಬಹುದು ಆದರೆ ಪ್ರಕರಣಗಳು ದಾಖಲಾಗುತ್ತಿವೆ ಅಂತಾರೆ)
ಮತ್ತೊಂದು ಆಸಕ್ತದಾಯಕ ವಿಚಾರ ಅಂದರೆ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಒಂದು ಸುದ್ದಿಗೋಷ್ಠಿಯನ್ನೇ ಮಾಡಿ, ತಮ್ಮ ಗೃಹ ಇಲಾಖೆಯ ಸಾಧನೆಗಳನ್ನು ಬಿಡಿಸಿಟ್ಟರು.  ಐದು ವರ್ಷಗಳಲ್ಲಿ ಯಾವುದೇ ಗಲಭೆ ನಡೆದಿಲ್ಲ.ಭಯೋತ್ಪಾದನಾ ಚಟುವಟಿಕೆಗಳು ನಡೆದಿಲ್ಲ. 155  ಕ್ರಿಮಿನಲ್ಸ್ ಎನ್ ಕೌಂಟರ್ ನಲ್ಲಿ ಸತ್ತರು,  3638 ಮಂದಿ ಗಾಯಗೊಂಡು ಜೈಲು ಸೇರಿದರು. 48 ಸಾವಿರ ಮಂದಿ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ. ಎರಡು ಸಾವಿರ ಕೋಟಿ ಮೊತ್ತದ ಆಸ್ತಿಗಳನ್ನು ವಶಪಡಿಸುಕೊಳ್ಳಲಾಗಿದೆ ಅಂಥ ವಿವರಿಸಿದರು. 

Election Result 2022 ಚನಿ to ಧಮಿ, ಪಂಚ ರಾಜ್ಯ ಚುನಾವಣೆಯಲ್ಲಿ ಹಾಲಿ, ಮಾಜಿ ಸಿಎಂಗೆ ಸೋಲಿನ ಕಹಿ!

ಕೈ ಹಿಡಿದ ಅದೃಶ್ಯ ಮತದಾರರು ; ಜಾಟರು, ಠಾಕೂರ್, ಶೈನಿ, ಮೌರ್ಯ , ಯಾದವರು, ಹಿಂದುಳಿದವರು ಹೀಗೆಲ್ಲಾ ಎಲ್ಲಾ ಪಕ್ಷಗಳು ಜಾತಿ-ಜನಾಂಗವನ್ನು ಪಾಲು ಹಂಚಿಕೊಂಡ ಬಳಿಕವೂ ಮಿಕ್ಕ ಅದೃಶ್ಯ ಮತದಾರರು ಮತ ಯಾರಿಗೆ ಹಾಕಿದರು? ಈ ಪ್ರಶ್ನೆ ಈಗ ಚರ್ಚೆ ವಿಷಯವಾಗಿದೆ. ಇದರ ಪಾಲು ಹೆಚ್ಚು ಹಂಚಿಕೊಂಡಿದ್ದು ಬಿಜೆಪಿ ಅಂಥ ಗೆಲುವಿನ ಅಂಕಿಸಂಖ್ಯೆಗಳು ಹೇಳುತ್ತವೆ. ಅದರಲ್ಲೂ ಅದೃಶ್ಯ ಮತದಾರರಲ್ಲಿ ಮಹಿಳೆಯರ ಪಾಲು ಜಾಸ್ತಿ ಇದೆ. ಲಾಂಡ್ ಆಂಡ್ ಆರ್ಡರ್ , ಲಾಭಾರ್ತಿ(ಫಲಾನುಭರ್ವಿ ) ಅಂಶಗಳು ಅದೃಶ್ಯ ಮತದಾರರ ರೂಪದಲ್ಲಿ ಕೈ ಹಿಡಿದ್ದಾರೆ. ಅದರಲ್ಲೂ ಲಾಭಾರ್ತಿಗಳನ್ನು ಚುನಾವಣಾ ಹೊತ್ತಲ್ಲಿ ನೇರವಾರವಾಗಿ ಮಾತಾಡಿಸಿ, ಪಕ್ಷಕ್ಕೆ ಮತ ಹಾಕಿ ಅಂತ ಕೇಳಿದ್ದು ಇವತ್ತಿನ ವಿಜಯದ ಹಿಂದೆ ಗೆಲುವಿನ ರಹಸ್ಯವಾಗಿ ಕೆಲಸ ಮಾಡಿದೆ ಎನ್ನುತ್ತಿದ್ದಾರೆ ಚುನಾವಣಾ ವಿಶ್ಲೇಷಕರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್