
ನವದೆಹಲಿ ( ಮಾ.10 ): ಉಕ್ರೇನ್‌ನ ( Ukraine ) ಸಮರಪೀಡಿತ ಸುಮಿ ( Sumy ) ನಗರದಲ್ಲಿ ಸಿಲುಕಿದ್ದ ಸುಮಾರು 600 ಭಾರತೀಯರನ್ನು (I ndians ) ಹೊತ್ತ 3 ವಿಮಾನಗಳು ಗುರುವಾರ ತಡರಾತ್ರಿ ಪೋಲೆಂಡ್‌ನಿಂದ ( Poland ) ಭಾರತದತ್ತ ಹೊರಟಿವೆ. ಇದರಿಂದ ಉಕ್ರೇನ್‌ನಲ್ಲಿನ ಭಾರತೀಯರ ರಕ್ಷಣಾ ಕಾರ್ಯಾಚರಣೆ (Evacuation ) ಬಹುತೇಕ ಮುಗಿದಂತಾಗಿದ್ದು, ಇವು ಕೊನೆಯ ವಿಮಾನಗಳಾಗಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಈವರೆಗೆ 87 ವಿಮಾನಗಳಲ್ಲಿ 18 ಸಾವಿರ ಭಾರತೀಯರನ್ನು ಉಕ್ರೇನ್‌ನಿಂದ ರಕ್ಷಿಸಿ ಭಾರತಕ್ಕೆ ಕರತರಲಾಗಿತ್ತು. ಆದರೆ ಸುಮಿಯಲ್ಲಿ ಯುದ್ಧ ತೀವ್ರವಾಗಿದ್ದ ಕಾರಣ ಅಲ್ಲಿ 600ಕ್ಕೂ ಹೆಚ್ಚು ಭಾರತೀಯರು ಸಿಲುಕಿದ್ದರು. 3 ದಿನದ ಹಿಂದೆ ಕದನ ತಗ್ಗಿದ ಹಿನ್ನೆಲೆಯಲ್ಲಿ ಈ ಭಾರತೀಯರನ್ನು ಸುಮಿಯಿಂದ ಪೋಲೆಂಡ್‌ಗೆ ತರಲಾಗಿತ್ತು.
ಇವರನ್ನು ಕರೆತರಲು ಪೋಲೆಂಡ್‌ಗೆ ಹೋಗಿದ್ದ ಭಾರತದ 3 ವಿಮಾನಗಳು ಗುರುವಾರ ರಾತ್ರಿ 9, 10.30 ಹಾಗೂ 11.30ಕ್ಕೆ ಅಲ್ಲಿಂದ ಹೊರಟಿವೆ. ಶುಕ್ರವಾರ ನಸುಕಿನ ಜಾವ ಇವು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ರಕ್ಷಿಸಲ್ಪಟ್ಟವಿದ್ಯಾರ್ಥಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಬುಧವಾರ ಕದನವಿರಾಮದ (ceasefire) ಕಾರಣ ನೀಡಿ ಸುಮ್ಮನಿದ್ದ ರಷ್ಯಾ (Russia), ಗುರುವಾರ ಉಕ್ರೇನ್‌ನ ಮರಿಯುಪೋಲ್ (Mariupol) ಹಾಗೂ ಇತರ ಕೆಲವು ನಗರ 3 ಆಸ್ಪತ್ರೆಗಳ ಮೇಲೆ ವಾಯುದಾಳಿ (AirStrike) ನಡೆಸಿದೆ. ಈ ದಾಳಿಯಲ್ಲಿ ಅನೇಕ ಮಕ್ಕಳು, ರೋಗಿಗಳು ಹಾಗೂ ಬಾಣಂತಿಯರು ಸಾವನ್ನಪ್ಪಿದ ಶಂಕೆ ಇದೆ.
ಮರಿಯುಪೋಲ್ ನಗರದ ಹೆರಿಗೆ ಆಸ್ಪತ್ರೆಯೊಂದರ (maternity hospital ) ಮೇಲೆ ರಷ್ಯಾ ವೈಮಾನಿಕ ದಾಳಿ (russian airstrike) ನಡೆಸಿದೆ. ಈ ವೇಳೆ ಇನ್ನೇನು ಹೆರಿಗೆಗೆ ಒಳಗಾಗುತ್ತಿದ್ದ ಮಹಿಳೆಗೆ ತೀವ್ರ ಗಾಯಗಳಾಗಿವೆ. ಸ್ಫೋಟ ಎಷ್ಟುತೀವ್ರವಾಗಿತ್ತು ಎಂದರೆ ಅನೇಕ ಮೈಲಿ ದೂರದವರೆಗೆ ಶಬ್ದ ಕೇಳಿಸಿದೆ. ಅಕ್ಕಪಕ್ಕದ ಕಟ್ಟಡಗಳು ಸ್ಫೋಟದ ರಭಸಕ್ಕೆ ನಡುಗಿ ಹೋಗಿವೆ. ಇನ್ನು ಕೀವ್ (Kyiv) ಸಮೀಪದ ಝೈತೋಮಿರ್ ಎಂಬ ನಗರದ 2 ಆಸ್ಪತ್ರೆಗಳ ಮೇಲೂ ರಷ್ಯಾ ಬಾಂಬ್ ಮಳೆಗರೆದಿದೆ. ಇದರಲ್ಲಿ ಒಂದು ಮಕ್ಕಳ ಆಸ್ಪತ್ರೆಯಾಗಿದೆ. ಸುದೈವವಶಾತ್ ಇಲ್ಲಿ ಸಾವು ನೋವು ಸಂಭವಿಸಿಲ್ಲ. ಮರಿಯುಪೋಲ್ ಆಸ್ಪತ್ರೆ ಮೇಲಿನ ದಾಳಿಯಲ್ಲಿ 17 ಮಂದಿ ಗಾಯಗೊಂಡಿದ್ದು ಮಾತ್ರ ಖಚಿತವಾಗಿದೆ.
Ukraine Return: ವಿದ್ಯಾರ್ಥಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ, ಗ್ರಾಮಸ್ಥರಿಂದ ವಿರೋಧ!
ಭಾರತಕ್ಕೆ ಸಮರ ಬೇಡ, ಶಾಂತಿ ಬೇಕು: ಮೋದಿ
ನವದೆಹಲಿ ( ಮಾ.10 ) ಈಗ ಯುದ್ಧದಲ್ಲಿ ನಿರತವಾಗಿರುವ ದೇಶಗಳ ಜತೆ ಭಾರತ ( India ) ಹಲವು ವಿಷಯಗಳಲ್ಲಿ ನಿಕಟ ನಂಟು ಹೊಂದಿದೆ. ಆದರೂ ಭಾರತವು ಶಾಂತಿ ( Peace ) ಬಯಸುತ್ತದೆ ಹಾಗೂ ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥ ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ( Prime Minister Naredra Modi ) ಹೇಳಿದ್ದಾರೆ.
Russia-Ukraine War: ನವೀನ್ ಮನೆಗೆ ಸಿದ್ದರಾಮಯ್ಯ ಭೇಟಿ: ಪೋಷಕರಿಗೆ ಸಾಂತ್ವನ
ಬಿಜೆಪಿ ( BJP ) ಕಾರ್ಯಕರ್ತರನ್ನು ಉದ್ದೇಶಿಸಿ ಗುರುವಾರ ಸಂಜೆ ಪಕ್ಷದ ಮುಖ್ಯ ಕಚೇರಿಯಲ್ಲಿ ಮಾತನಾಡಿದ ಮೋದಿ, ‘ಯುದ್ಧದಲ್ಲಿ ತೊಡಗಿರುವ ದೇಶಗಳ ಜತೆ (ರಷ್ಯಾ ಹಾಗೂ ಉಕ್ರೇನ್) ಭಾರತವು ಆರ್ಥಿಕ, ಭದ್ರತೆ, ಶೈಕ್ಷಣಿಕ, ರಾಜಕೀಯ ಅಗತ್ಯಗಳಿಗಾಗಿ ನಂಟು ಹೊಂದಿದೆ. ಆದರೆ ಈ ಯುದ್ಧ ವಿಶ್ವದ ಎಲ್ಲರನ್ನೂ ತೊಂದರೆಗೀಡು ಮಾಡಿದೆ. ಹೀಗಾಗಿ ಭಾರತ ಶಾಂತಿಯ ಪರವಾಗಿದೆ’ ಎಂದರು. ಇದೇ ವೇಳೆ, ಆಪರೇಶನ್ ಗಂಗಾ ಕಾರಾರಯಚರಣೆಯನ್ನು ವಿಪಕ್ಷಗಳು ಟೀಕಿಸಿ ರಾಜಕೀಯ ನಡೆಸುತ್ತಿವೆ ಎಂದು ಮೋದಿ ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ