ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಗೆ 75 ಎಕರೆ ಭೂಮಿ ದಾನ ನೀಡಿತ್ತು ಮಹಾನ್ ಪೀಠ

Published : Nov 07, 2026, 10:21 AM IST
banaras hindu university

ಸಾರಾಂಶ

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾಶಿ ಪೀಠವು 75 ಎಕರೆ ಭೂಮಿಯನ್ನು ದಾನವಾಗಿ ನೀಡಿತ್ತು. ಕಾಶಿ ಮಹಾರಾಜ ಡಾ.ವಿಭೂತಿನಾರಾಯಣ ಸಿಂಹ ಅವರ ಜನ್ಮ ಶತಮಾನೋತ್ಸವದಲ್ಲಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಈ ಐತಿಹಾಸಿಕ ವಿಚಾರವನ್ನು ಸ್ಮರಿಸಿದರು.

ವಾರಾಣಸಿ (ಉತ್ತರ ಪ್ರದೇಶ): ವಿಶ್ವ ಪ್ರಸಿದ್ಧ ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪನೆಗೆ ಅಂದಿನ ಕಾಶಿ ಪೀಠದ ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಜಂಗಮಪುರದ 75 ಎಕರೆ ಭೂಮಿ ದಾನ ಮಾಡಿ ವಿದ್ಯಾವಿಕಾಸಕ್ಕೆ ಶ್ರಮಿಸಿದ್ದಾರೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ವಾರಾಣಸಿಯ ಬನಾರಸ್ ಹಿಂದೂ ವಿವಿಯಲ್ಲಿ ಹಮ್ಮಿಕೊಂಡಿದ್ದ ಕಾಶಿ ಮಹಾರಾಜ ದಿ.ನರೇಶ ಡಾ.ವಿಭೂತಿನಾರಾಯಣ ಸಿಂಹ ಅವರ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದರು.

ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಶ್ರೀಪೀಠದಿಂದ 75 ಎಕರೆ ಭೂಮಿಯನ್ನು ದಾನ

ಕ್ರಿ.ಶ.574ರಲ್ಲಿ ತಮ್ಮ ಪೂರ್ವಜರ ಸದ್ಗತಿಗಾಗಿ ವಾರಾಣಸಿಯ ಕರ್ದಮೇಶ್ವರ ಮಹದೇವ ಮಂದಿರದಿಂದ ಗಂಗಾ ನದಿಯ ದಂಡೆಯವರೆಗಿನ ವಿಶಾಲವಾದ 300 ಎಕರೆ ಭೂಮಿಯನ್ನು ಕಾಶಿ ಜ್ಞಾನಪೀಠದ 51 ನೆಯ ಪೀಠಾಚಾರ್ಯರಾಗಿದ್ದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ವಿಶ್ವರಾಧ್ಯ ಭಗವತ್ಪಾದರಿಗೆ ದಾನಮಾಡಿದ್ದರು. 1916 ರಲ್ಲಿ ಮದನ ಮೋಹನ ಮಾಲವೀಯ ಅವರು ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಗೆ ನೆರವು ನೀಡುವಂತೆ ಕಾಶಿ ಪೀಠಕ್ಕೆ ಮನವಿ ಮಾಡಿದಾಗ ಆಗಿನ ಪೀಠಾಚಾರ್ಯರಾಗಿದ್ದ ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಶ್ರೀಪೀಠದಿಂದ 75 ಎಕರೆ ಭೂಮಿಯನ್ನು ದಾನ ಮಾಡಿದ್ದು, ಈ ವಿಚಾರ ಕಾಶಿ ಹಿಂದೂ ವಿಶ್ವದ್ಯಾಲಯದ ಇತಿಹಾಸ ಪುಸ್ತಕದಲ್ಲಿ ಉಲ್ಲೇಖಿತಗೊಂಡಿದೆ ಎಂದರು.

ಕಾಶಿಯ ಮಹಾರಾಜ ಡಾ.ವಿಭೂತಿನಾರಾಯಣಸಿಂಹ ಅವರನ್ನು ಕಾಶಿಯ ಜನತೆ ‘ನಡೆದಾಡುವ ವಿಶ್ವನಾಥ’ನೆಂದೇ ಭಾವಿಸುತ್ತಿದ್ದರು. ರಾಜರು ರಸ್ತೆಯಲ್ಲಿ ಹೋಗುವಾಗ ಇಕ್ಕೆಲಗಳಲ್ಲಿ ನಿಂತ ಕಾಶಿವಾಸಿಗಳು ‘ಹರಹರ ಮಹಾದೇವ’ ಎಂಬ ಜಯಘೋಷ ಮಾಡುತ್ತಾ ಸ್ವಾಗತಿಸುತ್ತಿದ್ದರು. ಅಂತೆಯೇ ರಾಜ ಪ್ರತ್ಯಕ್ಷ ದೇವತಾ ಎಂಬ ನಾಡ ನುಡಿಯು ಅವರಿಗೆ ಅನ್ವರ್ಥಕವಾಗಿತ್ತು. ಪ್ರಸ್ತುತ ಅವರ ಜನ್ಮ ಶತಮಾನೋತ್ಸವವನ್ನು ವರ್ಷವಿಡೀ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದೂ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಕಾಶಿ ಹಿಂದೂ ವಿಶ್ವವಿದ್ಯಾಲಯದ ಕುಲಪತಿ ಡಾ.ಅಜಿತ್‌ಕುಮಾರ್ ಚತುರ್ವೇದಿ ಅಧ್ಯಕ್ಷತೆವಹಿಸಿದ್ದರು. ಮಹಾರಾಣಿಯರಾದ ಹರಪ್ರಿಯಾ, ವಿಷ್ಣುಪ್ರಿಯಾ ಮತ್ತು ಕೃಷ್ಣಪ್ರಿಯಾ ಇವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ‘ಸಚಲ ವಿಶ್ವನಾಥ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಮನೋಜ್‌ಕುಮಾರ್ ಗುಪ್ತ ಸ್ವಾಗತಿಸಿದರು. 108 ಜನರಿಗೆ ವಿಭೂತಿನಾರಾಯಣರ ಭಾವಚಿತ್ರಗಳನ್ನು ನೀಡಿ ಗೌರವಿಸಲಾಯಿತು. ಶ್ರೀ ಕಾಶಿ ಪೀಠದ ವ್ಯವಸ್ಥಾಪಕರಾದ ಆರ್.ಕೆ. ಸ್ವಾಮಿ, ಶಿವಾನಂದ ಹಿರೇಮಠ ಶಿವಮೂರ್ತಿ ಹಿರೇಮಠ, ಹಿರಿಯ ವಿದ್ಯಾರ್ಥಿ ಅಖಿಲೇಶ್ ದೇವ್ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಸಾಕು ನಾಯಿಗಳಿಗೆ 'ಡಾಗ್ ಬಾಕ್ಸ್': ಪೆಟ್ ಪೇರೆಂಟ್ಸ್‌ಗೆ ಸಿಹಿಸುದ್ದಿ
ನಮ್ಮ ತಲೆಗೆ ಕಿರೀಟ ಹಾಕಿ 'ಇವರೇ ನಮ್ಮ ರಾಮ-ಲಕ್ಷ್ಮಣ' ಎಂದರು; ಅದನ್ನು ನೋಡಿ ಆ ಸಿನಿಮಾವನ್ನೇ ಕೈಬಿಟ್ಟೆವು'