
ವಾರಾಣಸಿ: ತರಕಾರಿ ಅಂಗಡಿಗೆ ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಬೌನ್ಸರ್‌ಗಳನ್ನು ನೇಮಿಸಿದ್ದ ಅಂಗಡಿ ನೌಕರ ನಾರಾಯಣವ್ ಯಾದವ್ ಹಾಗೂ ಆತನ ಮಗ ವಿಕಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೆಟ್ಟಹೆಸರು ತರಲೆಂದೇ ಟೊಮೆಟೋ ಅಂಗಡಿಯ ಮಾಲೀಕ ಅಜಯ್ ಫೌಜಿ ಎಂಬಾತ ಈ ಇಬ್ಬರು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾಗಿ ಜಾಲತಾಣಗಲ್ಲಿ ಮಾಹಿತಿ ನೀಡಿದ್ದ.
ಈ ವಿಷಯ ಭಾರೀ ವೈರಲ್ ಆಗಿತ್ತು. ಇದನ್ನು ಸ್ವತಃ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಬಳಿಕ ವಿಚಾರಣೆ ವೇಳೆ, ಫೌಜಿ, ಸಮಾಜವಾದಿ ಪಕ್ಷದ ಕಾರ್ಯಕರ್ತ. ಸರ್ಕಾರಕ್ಕೆ ಕೆಟ್ಟಹೆಸರು ತರಲೆಂದೇ ಆತ ಬೌನ್ಸರ್ ನೇಮಕದ ಕುರಿತ ಯೋಜನೆ ರೂಪಿಸಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾರಾಯಣ್ ಮತ್ತು ವಿಕಾಸ್‌ನನ್ನು ಐಪಿಸಿ ಸೆಕ್ಷನ್ 153 ಗಲಭೆಗೆ ಪ್ರಚೋದನೆ, 291 (ತಪ್ಪು ಪುನರಾವರ್ತನೆ) ಹಾಗೂ 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬಳಿಕ ಫೌಜಿ ನಾಪತ್ತೆಯಾಗಿದ್ದಾನೆ.
ಟೊಮೆಟೋ ನಂತರ 100 ರೂ. ದಾಟಿದ ಬೀನ್ಸ್, ಕ್ಯಾರೆಟ್: ಬೆಲೆ ಕೇಳಿ ಹೌಹಾರಿದ ಗ್ರಾಹಕ...!
ಗಗನಕ್ಕೇರಿದ ಬೆಲೆ, ಟೊಮೆಟೊ ಕಾಯಲು ಬೌನ್ಸರ್ ನೇಮಿಸಿದ ತರಕಾರಿ ವ್ಯಾಪಾರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ