
ಲಕ್ನೋ: ಉತ್ತರ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸೊಬ್ಬರು ಯುವಕನ ಬೈಕ್‌ನಲ್ಲಿದ್ದ ಹಿಂದೂ ಎಂಬ ಸ್ಟಿಕರ್‌ನ್ನು ತೆಗೆಸಿದ್ದು, ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೈಕ್ ಮೇಲೆ ಹಿಂದೂ ಎಂದು ಬರೆದಿರುವುದೇ ತಪ್ಪಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಉತ್ತರಪ್ರದೇಶದ ಪೊಲೀಸೊಬ್ಬರು ಬೈಕ್‌ನಲ್ಲಿದ್ದ ಹಿಂದು ಎಂಬ ಸ್ಟಿಕ್ಕರ್‌ನ್ನು ಬೈಕ್ ಸವಾರನ ಕೈನಿಂದಲೇ ತೆಗೆಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಕ್ರಮಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಯುವಮೋರ್ಚಾದ ತೇಜೀಂದರ್ ಪಾಲ್ ಸಿಂಗ್ ಬಗ್ಗಾ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದು ನಿಜವೇ ಎಂದು ಕೇಳಿ ಉತ್ತರಪ್ರದೇಶ ಪೊಲೀಸರು ಹಾಗೂ ಡಿಜಿಪಿಗೆ ವೀಡಿಯೋವನ್ನು ಟ್ಯಾಗ್ ಮಾಡಿದ್ದಾರೆ. ಕಾರು ಹಾಗೂ ಬೈಕ್‌ನ ಮೇಲೆ ಹಿಂದೂ ಎಂದು ಬರೆಯುವುದು ತಪ್ಪೇ ದಯವಿಟ್ಟು ಸ್ಪಷ್ಟನೆ ನೀಡಿ ಎಂದು ಅವರು ಪ್ರಶ್ನಿಸಿದ್ದಾರೆ. ಈ ವೀಡಿಯೋವನ್ನು ಆಗಸ್ಟ್ 22 ರಂದು ಪೋಸ್ಟ್ ಮಾಡಲಾಗಿದ್ದು, 1.4 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಕರ್ನಾಟಕಕ್ಕೂ ಕಾಲಿಟ್ಟ ಯುಪಿ ಮೇಡ್ ಗಾಂಜಾ ಚಾಕ್ಲೆಟ್: ಬೆಂಗಳೂರಿನಲ್ಲಿ ಮಾರಾಟ
ವೀಡಿಯೋದಲ್ಲೇನಿದೆ.
ಯುವಕನ ಸ್ಪ್ಲೆಂಡರ್ ಹೀರೋ ಬೈಕನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿಕೊಂಡಿರುವ ಪೊಲೀಸೊಬ್ಬರು ಆತನ ಕೈನಿಂದಲೇ ಹಿಂದೂ ಎಂದು ಆತ ಅಂಟಿಸಿರುವ ಸ್ಟಿಕ್ಕರ್‌ನ್ನು ತೆಗೆಸಿದ್ದಾರೆ. ಹಿಂದೂ ಎಂಬ ಬರಹದ ಸ್ಟಿಕ್ಕರ್ ಜೊತೆಯೇ ಲವ್ ಯೂ ಮಾಮ್ ಲವ್ ಯೂ ಡ್ಯಾಡ್ ಎಂಬ ಬರಹವೂ ಇದೆ. ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಮೂಲತಃ ಯೋಗಿ ಆದಿತ್ಯನಾಥ್ ಆಡಳಿತವಿರುವ ಉತ್ತರಪ್ರದೇಶದ್ದಾಗಿದೆ. ಆದರೆ ಕೆಲವರು ಇದು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ್ದು ಎಂದು ಟೀಕೆ ಮಾಡಿದ್ದಾರೆ.
ನರಸಿಂಹರಾವ್ ಕೋಮುವಾದಿ, ಭಾರತ ಹಿಂದೂ ದೇಶ ಎಂದಿದ್ದರು: ತನ್ನದೇ ಪಕ್ಷದ ಮಾಜಿ ಪ್ರಧಾನಿ ಬಗ್ಗೆ ಅಯ್ಯರ್ ಕಿಡಿ
ಆದರೆ ಕೆಲವರು ಮೋಟಾರ್ ವೆಹಿಕಲ್ ಕಾಯ್ದೆ 177 ಅಡಿ ಈ ರೂಲ್ಸ್ ಇಡೀ ದೇಶಾದ್ಯಂತ ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್‌ಗಳು ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ವಾಹನದ ಮೇಲೆ ಏನೂ ಬರೆದರು ಕೂಡ ತಪ್ಪೇ ಈ ನಿಯಮ ಎಲ್ಲಾ ಕಡೆ ಇದೆ ಎಂದು ಒಬ್ಬರು ಮಾಹಿತಿ ನೀಡಿದ್ದಾರೆ. ಹಿಂದೂ ಎಂದು ಬರೆದರೆ ತಪ್ಪು ಎಂದು ಎಲ್ಲಿ ಹೇಳಿದ್ದಾರೆ. ಪೊಲೀಸ್ ಅಧಿಕಾರಿ ಏನು ಯೋಚನೆ ಮಾಡುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ವೀಡಿಯೋ ನೋಡಿದ ಮೇಲೆ ಪ್ರತಿಯೊಬ್ಬರ ಹಿಂದುವೂ ತಮ್ಮ ವಾಹನದ ಮೇಲೆ ಹಿಂದೂ ಎಂದು ಬರೆಯಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ