ಕಳ್ಳತನವೇ ಆಗದ ಮೊಬೈಲ್‌ ಟವರ್‌ ಪತ್ತೆ ಮಾಡಿದ ಪೊಲೀಸ್‌, ದೂರು ಕೊಟ್ಟವನಿಗೆ ಹುಡುಕಾಟ!

By Santosh NaikFirst Published Dec 2, 2023, 3:02 PM IST
Highlights

ಕಳ್ಳತನವೇ ಆಗದ ವಸ್ತುವಿನ ಮೇಲೆ ಕಳ್ಳತನವಾಗಿದೆ ಎನ್ನುವ ಎಫ್‌ಐಆರ್‌ ದಾಖಲು ಮಾಡಿದ್ದ ಉತ್ತರ ಪ್ರದೇಶ ಪೊಲೀಸ್‌ಗೆ ಈಗ ಸಂಕಷ್ಟ ಎದುರಾಗಿದೆ. 

ನವದೆಹಲಿ (ಡಿ.2): ಐವತ್ತು ಮೀಟರ್‌ ಎತ್ತರದ ಮೊಬೈಲ್‌ ಟವರ್‌ಅನ್ನು ಯಾರೋ ಕಳ್ಳತನ ಮಾಡಿದ್ದಾರೆ ಎನ್ನುವ ಬಗ್ಗೆ ಉತ್ತರ ಪ್ರದೇಶದ ಪೊಲೀಸರು ಖಾಸಗಿ ಸಂಸ್ಥೆಯೊಂದರ ಟೆಕ್ನಿಶಿಯನ್‌ ನಿಂದ ಆನ್‌ಲೈನ್‌ ಎಫ್‌ಐಆರ್‌ ಸ್ವೀಕರಿಸಿದ್ದರು. ನಂಬಲು ಅಸಾಧ್ಯವಾದ ಈ ಕಳ್ಳತನ ನಡೆದಿರುವ ಬಗ್ಗೆ ಪೊಲೀಸರೇ ಅಚ್ಚರಿ ಪಟ್ಟಿದ್ದರು. ಆದರೆ, ಈ ಎಫ್‌ಐಆರ್‌ ಸ್ವೀಕರಿಸಿದ ಪೊಲೀಸರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯಾವ ವಸ್ತುವನ್ನು ಕದ್ದಿದ್ದಾರೆ ಎಂದು ದೂರು ದಾಖಲಾಗಿ ಆನ್‌ಲೈನ್‌ ಎಫ್‌ಐಆರ್‌ ದಾಖಲು ಮಾಡಲಾಗಿತ್ತೋ, ಅದೇ ಮೊಬೈಲ್‌ ಟವರ್‌ ಎಂದಿಗೂ ಕಾಣೆಯೇ ಆಗಿರಲಿಲ್ಲ.  ಕೌಶಂಬಿ ಪೊಲೀಸ್ ಅಧೀಕ್ಷಕ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, "ಸಂಬಂಧಿತ ಕಂಪನಿ ಅಧಿಕಾರಿಗಳು ಮತ್ತು ಭೂಮಾಲೀಕರ ನಡುವಿನ ಒಪ್ಪಂದದ ಅವಧಿ ಮುಗಿದ ನಂತರ ಈ ವರ್ಷದ ಜನವರಿಯ ಆರಂಭದಲ್ಲಿ ಸರಿಯಾದ ದಾಖಲೆಗಳ ಮೂಲಕ ತಮ್ಮ ಸಂಪೂರ್ಣ ಸೆಟ್‌ಅಪ್ ಅನ್ನು ತೆಗೆದುಹಾಕಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತಾದ ಎಲ್ಲಾ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಹಾಗಿದ್ದರೂ ಘಟನೆಯ ಎಂಟು ತಿಂಗಳ ನಂತರ ಸಂಸ್ಥೆಯ ತಂತ್ರಜ್ಞ ರಾಜೇಶ್ ಕುಮಾರ್ ಯಾದವ್ ಈ ಸಂಬಂಧ ಆನ್‌ಲೈನ್ ಎಫ್‌ಐಆರ್ ಅನ್ನು ಏಕೆ ದಾಖಲಿಸಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ. ತನ್ನ ಆನ್‌ಲೈನ್ ದೂರಿನಲ್ಲಿ, ಯಾದವ್ ಅವರು 2023ರ ಮಾರ್ಚ್ 31 ರಂದು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ, ಸಂಪೂರ್ಣ ಟವರ್ ಮತ್ತು ಇತರ ಉಪಕರಣಗಳು ಯಾವುದೇ ಕುರುಹು ಇಲ್ಲದೆ ನನಾಪತ್ತೆಯಾಗಿದ್ದವು. ಆದಾಗ್ಯೂ, ನವೆಂಬರ್ 29 ರಂದು ಎಫ್ಐಆರ್ ದಾಖಲಿಸುವ ಮೊದಲು ಅವರು ಎಂದು ತಿಂಗಳು ಇದಕ್ಕಾಗಿ ಯಾಕೆ ಕಾದಿದ್ದರು ಎನ್ನುವುದು ನಿಗೂಢವಾಗಿದೆ.

Latest Videos

ಪ್ರವಾದಿಗೆ ಅವಮಾನ ಮಾಡಿದ ಎಂದು ಆರೋಪಿಸಿ ಮುಸ್ಲಿಂ ವಿದ್ಯಾರ್ಥಿಯಿಂದ ಕಂಡಕ್ಟರ್ ಹತ್ಯೆ

ಪ್ರತಾಪ್‌ಗಢದಲ್ಲಿರುವ ಯಾದವ್ ಅವರ ನಿವಾಸದಲ್ಲಿ ಪೊಲೀಸರು ಶೋಧ ನಡೆಸಿದ್ದು, ಅವರು ನಾಪತ್ತೆಯಾಗಿದ್ದಾರೆ.

ಖ್ಯಾತ ಭೋಜ್‌ಪುರಿ ಮಹಿಳಾ ಯೂಟ್ಯೂಬರ್ ಸಾವು: ಪತಿಯ ಅನೈತಿಕ ಸಂಬಂಧಕ್ಕೆ ಬಲಿ?

click me!