
ಉತ್ತರಾಖಂಡ: ಸತ್ತಿದ್ದಾನೆಂದು ಭಾವಿಸಿ ಅಂತ್ಯಸಂಸ್ಕಾರ ನಡೆಸಿದ್ದ ವ್ಯಕ್ತಿ ವರ್ಷಗಳ ನಂತರ ಮರಳಿ ಬಂದಿರುವ ಘಟನೆ ಉತ್ತರಾಖಂಡ್‌ನ
ಉಧಮ್ ಸಿಂಗ್ ಜಿಲ್ಲೆಯಲ್ಲಿ ನಡೆದಿದೆ. 42 ವರ್ಷದ ವ್ಯಕ್ತಿ ನವೀನ್ ಸತ್ತಿರುವ ಬಗ್ಗೆ ತಿಳಿದು ಶಾಸ್ತ್ರಬದ್ಧವಾಗಿ ಅವರ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆದರೆ ಒಂದು ವರ್ಷದ ನಂತರ ವ್ಯಕ್ತಿ ಜೀವಂತವಾಗಿ ಮರಳಿ ಬಂದಿದ್ದು, ಎಲ್ಲರೂ ಅಚ್ಚರಿಗೊಂಡಿದ್ದಾರೆ. ನಂತರ ಆ ವ್ಯಕ್ತಿಗೆ ಮರು ನಾಮಕರಣ ಹಾಗೂ ಆತನ ಪತ್ನಯೊಂದಿಗೆ ಮರು ಮದುವೆ ಮಾಡಲಾಯಿತು.
ಆ ನಂತರ ಪರಿಶೀಲನೆ ನಡೆಸಿದಾಗ ವರ್ಷದ ಹಿಂದೆ ಕುಟುಂಬದವರು ಅಜ್ಞಾತ ಶವವನ್ನು ನವೀನ್ ಅವರದ್ದೇ ಎಂದು ನಂಬಿ ಅಚಾತುರ್ಯದಿಂದ ಅಂತಿಮ ವಿಧಿವಿಧಾನಗಳನ್ನು ಮಾಡಿದ್ದರು ಎಂಬುದು ಬಯಲಾಗಿದೆ. ಆದರೂ ಎಲ್ಲಾ ರೀತಿಯಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನ ನಡೆಸಿದ್ದ ಕಾರಣ ಮರುನಾಮಕರಣ ಹಾಗೂ ಮರು ಮದುವೆ ಮಾಡಲಾಯಿತು. ಸತ್ತನೆಂದು ಭಾವಿಸಲಾದ ವ್ಯಕ್ತಿಯು ಜೀವಂತವಾಗಿ ಕಂಡುಬಂದರೆ ಅದನ್ನು ಪುನರ್ಜನ್ಮ ಎಂದು ಕರೆಯಲಾಗುವುದು ಎಂಬ ಸಾಂಪ್ರದಾಯಿಕ ಕಲ್ಪನೆಯನ್ನು ಅವರ ಕುಟುಂಬವು ಅನುಸರಿಸಿತು.
ಇಲ್ಲಿ ನಡೆಯುತ್ತೆ ಭೂತದ ಮದುವೆ, ಹೆಣ್ಣು ಶವಕ್ಕಿರುತ್ತೆ ಭಾರೀ ಬೇಡಿಕೆ, ಮಗಳ ಕಳೇಬರವನ್ನೇ ಮಾರಿದ ಅಪ್ಪ!
ವರ್ಷದ ಹಿಂದೆ ನಡೆದಿತ್ತು ನವೀನ್ ಅಂತ್ಯಸಂಸ್ಕಾರ
ಖತಿಮಾ ಪಟ್ಟಣದ ಶ್ರೀಪುರ ಬಿಚ್ವಾದಲ್ಲಿ ನವೀನ್ ಚಂದ್ರ ಭಟ್ (42) ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ತನ್ನ ಮನೆಯಿಂದ ಕಾಣೆಯಾದ ನಂತರ ನವೆಂಬರ್ 25 ರಂದು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ದೊರಕಿತ್ತು. ಚಂಪಾವತ್‌ನ ಬನ್‌ಬಾಸಾ ಘಾಟ್‌ನಲ್ಲಿ, ಅವರ ಕುಟುಂಬವು ಅಜ್ಞಾತ ಶವವನ್ನು ನವೀನ್‌ನದೇ ಎಂದು ತಿಳಿದು ಅಂತಿಮ ವಿಧಿಗಳನ್ನು ನಡೆಸಿದರು. ಆದರೆ ಈಗ ನವೀನ್ ಜೀವಂತವಾಗಿ ಮರಳಿ ಬಂದಿದ್ದಾರೆ.
ಗ್ರಾಮದ ಮಾಜಿ ಪ್ರಧಾನ ರಮೇಶ ಮಹಾರ್ ಈ ಬಗ್ಗೆ ಮಾತನಾಡಿ, 'ನವೀನ್ ಜೀವಂತವಾಗಿ ಪತ್ತೆಯಾದ ನಂತರ, ಹಿರಿಯರು ಮತ್ತು ಪುರೋಹಿತರು ಸರ್ವಾನುಮತದಿಂದ ಪ್ರೋಟೋಕಾಲ್‌ಗಳ ಪ್ರಕಾರ, ಜನ್ಮದಿಂದ ಮದುವೆಯವರೆಗಿನ ಎಲ್ಲಾ ಸಂಸ್ಕಾರಗಳನ್ನು (ಅಂಗೀಕಾರದ ವಿಧಿಗಳು) ಶುದ್ಧೀಕರಣಕ್ಕಾಗಿ ಮತ್ತೆ ಮಾಡಬೇಕೆಂದು ನಿರ್ಧರಿಸಿದರು' ಎಂದು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಜೀವಂತ ಹೃದಯ ತೆಗೆದು, ತಮಿಳುನಾಡಿಗೆ ರವಾನಿಸಿದ ಬೆಂಗಳೂರು ವೈದ್ಯರು
ಸಮಾರಂಭದ ನೇತೃತ್ವ ವಹಿಸಿದ್ದ ಅರ್ಚಕ ಎ.ಬಿ.ಜೋಶಿ ಸ್ಪಷ್ಟನೆ ನೀಡಿ, 'ನವೀನ್ ಮೃತಪಟ್ಟಿದ್ದಾನೆ ಎಂದು ತಿಳಿದು ಮರಣಾನಂತರದ ವಿಧಿವಿಧಾನಗಳು ನಡೆಸಲಾಗಿತ್ತು. ಹೀಗಾಗಿ ಆತನ ಪುನರ್ಜನ್ಮ ಎಂಬಂತೆ ಮತ್ತೊಮ್ಮೆ ಎಲ್ಲಾ ಪುಣ್ಯ ಸಂಸ್ಕಾರಗಳನ್ನು ನಡೆಸಬೇಕಿತ್ತು. ಅದೇ ಮಹಿಳೆ. ಅವರ ಎರಡನೇ ಪತ್ನಿಯಾದಳು. ನವೀನ್ ನಂತರ ನಾಮಕರಣ ಸಮಾರಂಭದಲ್ಲಿ ನಾರಾಯಣ ಭಟ್ ಆದರು' ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ