ಗೆಳತಿಯ ಭೇಟಿ ಮಾಡಲು ಬುರ್ಖಾ ತೊಟ್ಟು ಬಂದ ಗೆಳೆಯ

Published : Aug 19, 2022, 11:14 AM ISTUpdated : Aug 19, 2022, 11:16 AM IST
ಗೆಳತಿಯ ಭೇಟಿ ಮಾಡಲು ಬುರ್ಖಾ ತೊಟ್ಟು ಬಂದ ಗೆಳೆಯ

ಸಾರಾಂಶ

ಇಲ್ಲೊಬ್ಬ ಪ್ರೇಮಿ ತನ್ನ ಗೆಳತಿಯನ್ನು ಭೇಟಿಯಾಗಲು ಹೊಸ ಉಪಾಯ ಮಾಡಿದ್ದಾನೆ. ಆದಾಗ್ಯೂ ಆತ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಯೋಗಿ ರಾಜ್ಯ ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ಪ್ರೇಮಿಗಳ ಭೇಟಿ ಪ್ರೀತಿಸಿದಷ್ಟು ಸುಲಭವಲ್ಲ. ಪ್ರೇಮಿಗಳ ಬಗ್ಗೆ ಅನೇಕರು ಕತೆ ಕವಿತೆಗಳಲ್ಲಿ ಏನೇನೋ ವರ್ಣಿಸಿದ್ದಾರೆ. ಪ್ರೀತಿಸುವವರನ್ನು ಮತ್ತೆ ಮತ್ತೆ ನೋಡಬೇಕು ಅವರ ಹಿಂದೆಯೇ ಸುತ್ತಬೇಕು ಜೊತೆ ಜೊತೆಯೇ ಕೈ ಕೈ ಹಿಡಿದು ಸಾಗಬೇಕು ಎಂದು ಕನಸು ಕಾಣುವವರಿದ್ದಾರೆ. ಪ್ರೇಮಿ ಒಂದು ಕ್ಷಣ ಕಾಣದಿದ್ದರೂ ಚಡಪಡಿಸುವವರಿದ್ದಾರೆ. ಒಬ್ಬೊಬ್ಬರ ಪ್ರೇಮ ಭಾವನೆ ಒಂದೊಂದು ರೀತಿ. ಕಾಲ ಎಷ್ಟೇ ಮುಂದುವರೆದರು ಕೆಲವರಿಗೆ ಪ್ರೇಮಿಗಳ ಭೇಟಿ ಅಷ್ಟು ಸುಲಭವಲ್ಲ. ಪ್ರೇಮಿಯ ಭೇಟಿಗಾಗಿ ಯುವ ಪ್ರೇಮಿಗಳು ಇನ್ನಿಲ್ಲದ ಹರ ಸಾಹಸ ಮಾಡುತ್ತಾರೆ. ಪರಿಚಯವಿರುವವರ ಕೈಗೆ ಸ್ನೇಹಿತರು ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದರೆ ಕತೆ ಬೇರಾಗುತ್ತೆ ಎಂಬ ಭಯ ಪ್ರೇಮಿಗಳಿಗೆ. ಇದೇ ಕಾರಣಕ್ಕೆ ಕದ್ದು ಮುಚ್ಚಿ ಯಾರಿಗೂ ಕಾಣದಂತೆ ಭೇಟಿಯಾಗುತ್ತಾರೆ. ಕಾಲ ಬದಲಾದರು ತಂತ್ರಜ್ಞಾನ ಮುಂದುವರೆದರು ಪ್ರೇಮಿಗಳ ಪರಸ್ಪರ ಭೇಟಿಗೆ ನಮ್ಮಲ್ಲಿ ಹಲವು ಅಡ್ಡಿ ಆತಂಕಗಳಿವೆ. ಇನ್ನು ಈ ಪ್ರೇಮಕ್ಕೆ ಪೋಷಕರ ವಿರೋಧವಿದ್ದರಂತೂ ಪರಿಸ್ಥಿತಿ ಇನ್ನು ಹದಗೆಡುತ್ತೆ. ಇದೇ ಕಾರಣಕ್ಕೆ ಇಲ್ಲೊಬ್ಬ ಪ್ರೇಮಿ ತನ್ನ ಗೆಳತಿಯನ್ನು ಭೇಟಿಯಾಗಲು ಹೊಸ ಉಪಾಯ ಮಾಡಿದ್ದಾನೆ. ಆದಾಗ್ಯೂ ಆತ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಯೋಗಿ ರಾಜ್ಯ ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ಉತ್ತರಪ್ರದೇಶದ ಶಹಜಹಾನ್‌ಪುರದ 25 ವರ್ಷದ ಯುವಕ ತನ್ನ ಪ್ರಿಯತಮೆಯನ್ನು ಭೇಟಿಯಾಗಲು, ಮುಸ್ಲಿಂ ಮಹಿಳೆಯರು ಸದಾ ಧರಿಸುವ ಬುರ್ಕಾ ಧರಿಸಿದ್ದಾನೆ. ತನ್ನ ಗುರುತು ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ಯುವಕ ಈ ವೇಷ ತೊಟ್ಟಿದ್ದಾನೆ ಎಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ. ಇನ್ನು ಹೀಗೆ ವೇಷ ತೊಟ್ಟು ಬುರ್ಕಾ ಹಿಂದೆ ಅಡಗಿದ್ದ ಸೈಫ್‌ ಅಲಿಯನ್ನು ಶಾಂತಿ ಕದಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. 

ಇನಿಯನ ಸ್ವಾಗತಕ್ಕೆ ಓಡಿ ಬಂದಾಕೆಗೆ ಇದೇನಾಯ್ತು ನೋಡಿ: ಪ್ರೀತಿಯಲ್ಲಿ ಬೀಳೋದು ಅಂದ್ರೆ ಇದೇನಾ?

ಸೈಫ್‌ ಅಲಿಗೆ ತನ್ನ ಮನೆಯಿಂದ ಬಹಳ ದೂರದಲ್ಲಿ ಇತ್ತೀಚೆಗಷ್ಟೆ ಕೆಲ ಸಿಕ್ಕಿತ್ತು. ಹೀಗಾಗಿ ಇನ್ನು ದೂರ ಕೆಲಸಕ್ಕೆ ತೆರಳಿದರೆ ಮತ್ತೆ ಯಾವಾಗ ವಾಪಸ್‌ ಬರುವುದೋ ಯಾರಿಗೆ ಗೊತ್ತು ಎಂದು ಆತ ಅಲ್ಲಿಗೆ ತೆರಳುವ ಮೊದಲೊಮ್ಮೆ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಬಯಸಿದ್ದಾನೆ. ಹೀಗಾಗಿ ಆತ ಸಿಧುಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆಹ್ಮದ್‌ಪುರದಲ್ಲಿರುವ ತನ್ನ ಗೆಳೆತಿಯನ್ನೊಮ್ಮೆ ಭೇಟಿಯಾಗಲು ಬಯಸಿದ್ದು, ಹೀಗಾಗಿ ತನ್ನ ಪ್ರೇಯಸಿ ಇರುವ ಏರಿಯಾವನ್ನು ಮೊದಲೇ ಅರಿತಿದ್ದ ಆತ ತನ್ನ ಗುರುತು ಯಾರಿಗೂ ತಿಳಿಯದಂತೆ ಇರಲು ಬುರ್ಕಾ ಧರಿಸಿ ಗೆಳತಿ ಭೇಟಿಗೆ ಹೋಗಿದ್ದಾನೆ. 
ಎಂದು ಗ್ರಾಮೀಣ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸಂಜಯ್‌ ಬಜ್ಪೈ ತಿಳಿಸಿದರು. 

ಬುರ್ಕಾದಲ್ಲಿ 18 ಲಕ್ಷದ ಚಿನ್ನ ಪೋಣಿಸಿ ಕಳ್ಳಸಾಗಣೆ: ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ

ಬರ್ಕಾ ಧರಿಸಿದ್ದರೂ ಗಂಡು ಗಂಡೇ ಹೆಣ್ಣು ಹೆಣ್ಣೇ ಅಲ್ಲವೇ. ಈ ಸೂಕ್ಷ್ಮತೆಯನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಬುರ್ಖಾ ಧರಿಸಿ ಗಂಡಿನಂತೆ ನಡೆಯುತ್ತಿದ್ದ ಅಲಿಯನ್ನು ನೋಡಿದ ಸ್ಥಳೀಯರು ಆತನಲ್ಲಿ ಬುರ್ಕಾ ತೆಗೆಯುವಂತೆ ಕೇಳಿದ್ದಾರೆ. ನಂತರ ಆತ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಬುರ್ಖಾ ತೆಗೆದಿದ್ದು, ಬುರ್ಖಾದೊಳಗೆ ಇದ್ದ ಗಂಡನ್ನು ನೋಡಿದ ಊರವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಯಾರೋ ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದೀಗ ವೈರಲ್ ಆಗಿದೆ. ಬಳಿಕ ಅಲಿಯನ್ನು ವಶಕ್ಕೆ ಪಡೆದ ಪೊಲೀಸರು ಶಾಂತಿ ಕದಡಿದ ಆರೋಪದಡಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!